Intern Student  Viral Salary : ಪ್ರತಿ ಬಾರಿ ಕೆಲ್ಸಕ್ಕೆ ಡಿಗ್ರಿ, ಅನುಭವ ಬೇಕಾಗಿಲ್ಲ. ಕೆಲ್ಸ ಮಾಡುವ ಉತ್ಸಾಹ, ಕೆಲ್ಸ ಮಾಡುವ ಜಾಣ್ಮೆ ಇದ್ರೆ ಸಾಕು. ಅದಕ್ಕೆ ಈ ವಿದ್ಯಾರ್ಥಿ ಉತ್ತಮ ನಿದರ್ಶನ.

ಬಹುತೇಕ ಕಂಪನಿಗಳು ಆರಂಭದಲ್ಲಿ ಉದ್ಯೋಗಿಗಳನ್ನು ಇಂಟರ್ನ್ ಆಗಿ ತೆಗೆದುಕೊಳ್ಳುತ್ವೆ. ಇಂಟರ್ನ್ಶಿಪ್ ಉದ್ಯೋಗ ಪಡೆಯಲು ಒಂದು ಮಾರ್ಗ. ಇಂಟರ್ನಿಗಳಿಗೆ ಕೆಲ ಕಂಪನಿ ಸಂಬಳ ನೀಡೋದಿಲ್ಲ ಮತ್ತೆ ಕೆಲ ಕಂಪನಿಗಳು ಅತಿ ಕಡಿಮೆ ಸಂಬಳ ನೀಡುತ್ವೆ. ಆದ್ರೆ ಸಿದ್ಧಾರ್ಥ್ ಕಥೆ ಸಂಪೂರ್ಣ ಭಿನ್ನವಾಗಿದೆ. ಕಾಲೇಜಿನ ಮೊದಲ ವರ್ಷವೇ ಸಿದ್ಧಾರ್ಥ ಸಂಪಾದನೆ 4 ಲಕ್ಷ ರೂಪಾಯಿ ಅಂದ್ರೆ ನೀವು ನಂಬ್ಲೇಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಟರ್ನಿಗೆ ಸಿಕ್ತಿದೆ 4 ಲಕ್ಷ ಸ್ಟೈಫಂಡ್ 

ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು

ಸಿದ್ಧಾರ್ಥ್ ಟೆಕ್ ಸ್ಟಾರ್ಟ್ಅಪ್ನಲ್ಲಿ ಇಂಟರ್ನ್ ಆಗಿದ್ದಾರೆ. ಕಂಪನಿಯ ಅತ್ಯಂತ ಕಿರಿಯ ಸದಸ್ಯ ಕೂಡ ಹೌದು. ಐಐಟಿ ಹಳೆಯ ವಿದ್ಯಾರ್ಥಿ ಮತ್ತು ಟಾಪ್ಮೇಟ್ನ ಸಹ-ಸಂಸ್ಥಾಪಕ ದಿನೇಶ್ ಸಿಂಗ್ ಲಿಂಕ್ಡ್ಇನ್ನಲ್ಲಿ ಇದ್ರ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಟಾಪ್ಮೇಟ್ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದು, ಸಿದ್ಧಾರ್ಥ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿ ಎಂದು ಬರೆದಿದ್ದಾರೆ. ಕಳೆದ ವರ್ಷ ಕಂಪನಿ ಪರ ಅತ್ಯಧಿಕ ಸೇಲ್ ಮಾಡಿದ್ದ ಸಿದ್ಧಾರ್ಥ್ ಎಂದು ದಿನೇಶ್ ಹೇಳಿದ್ದಾರೆ. ಸಿದ್ಧಾರ್ಥ್ ಕೆಲಸಕ್ಕೆ ಕಂಪನಿ ಒಳ್ಳೆ ಸಂಭಾವನೆ ನೀಡ್ತಿದೆ. ನಾಲ್ಕು ಲಕ್ಷ ರೂಪಾಯಿ ಸ್ಟೈಫಂಡ್ ನೀಡಲಾಗಿದೆ.

ಸಾಫ್ಟ್‌ವೇರ್ ಅಲ್ಲ, ಈ ಕ್ಷೇತ್ರದಲ್ಲಿರುವ ಹೆಣ್ಮಕ್ಕಳಿಗೆ ಜಾಕ್‌ಪಾಟ್‌! ಸಂಬಳ ಕೇಳಿದ್ರೆ ತಲೆ ತಿರುಗುತ್ತೆ

ಥೈಲ್ಯಾಂಡ್ ಪ್ರವಾಸ 

ಸಿದ್ಧಾರ್ಥ್ ಕೆಲಸ ಮೆಚ್ಚಿದ ಕಂಪನಿ ಸ್ಪಾನ್ಸರ್ ಥೈಲ್ಯಾಂಡ್ ಟ್ರಿಪ್ ಬಹುಮಾನವಾಗಿ ನೀಡಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ್ಮೇಲೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಿನೇಶ್ ಪ್ರಕಾರ, ಸಿದ್ಧಾರ್ಥ್ ಯಾವುದೇ ಅನುಭವ ಅಥವಾ ಉತ್ತಮ ರೆಸ್ಯೂಮ್ ಹೊಂದಿಲ್ಲ. ಆದ್ರೆ ಎಲ್ಲರೂ ಮೆಚ್ಚುವ ಟ್ಯಾಲೆಂಟ್ ಹೊಂದಿದ್ದಾರೆ. ಅಪರಿಚಿತರ ಜೊತೆ ಮಾತನಾಡಿ, ಅವರ ಅಗತ್ಯ ಅರ್ಥ ಮಾಡ್ಕೊಂಡು ಡೀಲ್ ಮುಗಿಸೋದ್ರಲ್ಲಿ ಸಿದ್ದಾರ್ಥ್ ಮುಂದಿದ್ದಾರೆ.