Asianet Suvarna News Asianet Suvarna News

Karnataka Council Election : ಮೈಸೂರಲ್ಲಿ ಕೈ ವಲಸಿಗ ಅಭ್ಯರ್ಥಿಗೆ ಟಿಕೆಟ್ ಕೊಟ್ಟು ಜೆಡಿಎಸ್‌ ತಂತ್ರ

  • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದ ಚುನಾವಣೆ ರಂಗೇರತೊಡಗಿದೆ
  • ಕಾಂಗ್ರೆಸ್‌ನಲ್ಲಿ ಪ್ರತಿಷ್ಠೆ - ಜೆಡಿಎಸ್‌ನಲ್ಲಿ ತಂತ್ರ - ಬಿಜೆಪಿ ನಿರೀಕ್ಷೆಗಳು ತುಂಬಿದೆ
MLC Election JDS master Plan For winning  mysuru Constituency  snr
Author
Bengaluru, First Published Nov 26, 2021, 2:38 PM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.26):  ಮೈಸೂರು- ಚಾಮರಾಜನಗರ (mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದ ಚುನಾವಣೆ (MLC Election) ರಂಗೇರತೊಡಗಿದೆ. ಬಿಜೆಪಿ (BJP) ಟಿಕೆಟ್‌ (Ticket) ನಿರೀಕ್ಷೆಯಲ್ಲಿದ್ದ ಹಾಲಿ ಸದಸ್ಯ ಸಂದೇಶ್‌ ನಾಗರಾಜ್‌ (Sandesh Nagaraj) ಮರಳಿ ಬಾಗಿಲು ತಟ್ಟಿದ್ದರೂ ಜೆಡಿಎಸ್ (JDS) ಅವಕಾಶ ನೀಡಿಲ್ಲ. ಬದಲಿಗೆ ಕಾಂಗ್ರೆಸ್‌ನಿಂದ (Congress) ಬಂದಿರುವ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡರಿಗೆ ಮಣೆ ಹಾಕಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ನಗರಕ್ಕೆ ಆಗಮಿಸಿದ್ದರು. ಈ ಭಾಗದ ಪ್ರಭಾವಿ ಮುಖಂಡ, ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ (GT Devegowda)‚ರು ಪಕ್ಷದಿಂದ ದೂರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಜೆಡಿಎಸ್‌ಗೂ ಕೂಡ ಪ್ರತಿಷ್ಠೆಯಾಗಿದೆ. ಇದಕ್ಕಾಗಿ ಮಾಜಿ ಸಚಿವರೂ ಆದ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ (Sa Ra Mahesh) ತಂತ್ರ ರೂಪಿಸುತ್ತಿದ್ದಾರೆ. ಶಾಸಕರಾದ ಪಿರಿಯಾಪಟ್ಟಣದ ಕೆ. ಮಹದೇವ್‌, ಟಿ. ನರಸೀಪುರದ ಎಂ. ಅಶ್ವಿನ್‌ಕುಮಾರ್‌ ಸೇರಿದಂತೆ ಉಳಿದವರು ಅವರಿಗೆ ಸಾಥ್‌ ನೀಡುತ್ತಿದ್ದಾರೆ. 

ಸಿದ್ದರಾಮಯ್ಯ ಅಖಾಡಕ್ಕೆ :  ಜಿಲ್ಲೆಯವರೇ ಆದ ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದಿನಿಂದ ಪ್ರಚಾರಕ್ಕಿಳಿಯಲಿದ್ದಾರೆ. ಇದಲ್ಲದೇ ಚಾಮರಾಜನಗರದಲ್ಲಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್‌ನ ಹಾಲಿ ಸದಸ್ಯ ಆರ್‌. ಧರ್ಮಸೇನ ಅವರಿಗೆ ಟಿಕೆಟ್‌ ನಿರಾಕರಿಸಿ, ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ ಅವರಿಗೆ ಟಿಕೆಟ್‌  ನೀಡಿರುವುದರಿಂದ ಗೆಲ್ಲಿಸಿಕೊಳ್ಳುವುದು ಅವರಿಗೆ ಪ್ರತಿಷ್ಠೆಯಾಗಿದೆ. ಏಕೆಂದರೆ 2010 ರಲ್ಲಿ ಕಾಂಗ್ರೆಸ್‌ನ (Congress) ಎನ್‌. ಮಂಜುನಾಥ್‌ (N Manjunath) ಪರಾಭವಗೊಂಡಿದ್ದರು.

ಇದಕ್ಕಾಗಿ ಶುಕ್ರವಾರ ಮೈಸೂರಿಗೆ (Mysuru) ಆಗಮಿಸುವ ಸಿದ್ದರಾಮಯ್ಯ ಅವರು ಸೋಮವಾರದವರೆಗೂ ಇಲ್ಲಿಯೇ ಇರಲಿದ್ದಾರೆ. ನ.26 ರಂದು ಸಂಜೆ 7ಕ್ಕೆ ಉಭಯ ಜಿಲ್ಲೆಗಳ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು, ಮುಖಂಡರ ಸಭೆ ನಡೆಸುವರು. ನ.29 ರಂದು ಬೆಳಗ್ಗೆ 11.30ಕ್ಕೆ ಚಾಮರಾಜನಗರದಲ್ಲಿ (Chamarajanagar) ಕಾಂಗ್ರೆಸ್‌ ಪಕ್ಷ ಆಯೋಜಿಸಿರುವ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸುವರು.

ಬಿಜೆಪಿ- ಎಸ್‌ಟಿಎಸ್‌ ಕ್ಯಾಂಪ್‌ ನಿರೀಕ್ಷೆ

ಬಿಜೆಪಿಯು ಈ ಕ್ಷೇತ್ರದಲ್ಲಿ 2010 ರಲ್ಲಿ ಮಾತ್ರ ಗೆದ್ದಿದೆ.  ಕಳೆದ ಬಾರಿ ಗಣನೀಯ ಮತ ಪಡೆದು ಸೋತಿದೆ. ಅದಕ್ಕಿಂತ ಹಿಂದಿನ ಚುನಾವಣೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಇತ್ತು. ಆದರೆ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಹೋರಾಟ ನಡೆಸಿದೆ.

ಈಗಾಗಲೇ ಮೈಸೂರು, ಚಾಮರಾಜನಗರದಲ್ಲಿ ಜನ ಸ್ವರಾಜ್‌ ಯಾತ್ರೆ ನಡೆಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje), ಮಾಜಿ ಸಚಿವ ಡಿ.ವಿ. ಸದಾನಂದಗೌಡ (DV Sadananda Gowda), ರಾಜ್ಯ ಸಚಿವರಾದ ಆರ್‌. ಅಶೋಕ್‌, ಕೆ.ಎಸ್‌. ಈಶ್ವರಪ್ಪ, ಎಸ್‌.ಟಿ. ಸೋಮಶೇಖರ್‌ ಮೊದಲಾದವರು ಪಾಲ್ಗೊಂಡಿದ್ದರು. ಅಭ್ಯರ್ಥಿ ಆರ್‌. ರಘು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (St Somashekar) ವರು ಇಲ್ಲಿಯೇ ಬಂದು ಒಂದು ವಾರ ಉಳಿದು, ಪ್ರಚಾರದ ನೇತೃತ್ವ ವಹಿಸುವ ನಿರೀಕ್ಷೆ ಇದೆ.

ಬಿಜೆಪಿ ತಕರಾರು ತಿರಸ್ಕೃತ :  ಮೈಸೂರು  (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆಯ (MLC Election) ಸಂಬಂಧ ಕಾಂಗ್ರೆಸ್‌ (congress) ಹಾಗೂ ಜೆಡಿಎಸ್‌ (JDS) ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿತ್ತು. ಬುಧವಾರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ (Bagadi Goutham) ಅವರು ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡರು. ಬಿಜೆಪಿಯ (BJP) ಆರ್‌. ರಘು, ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ (vatal Nagaraj), ಪಕ್ಷೇತರರಾದ ಪಿ.ಎಸ್‌. ಯಡಿಯೂರಪ್ಪ,ಕೆ.ಸಿ. ಬಸವರಾಜಸ್ವಾಮಿ, ಗುರುಲಿಂಗಯ್ಯ, ಆರ್‌. ಮಂಜುನಾಥ್‌ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದರು.

ಆದರೆ ಕಾಂಗ್ರೆಸ್‌ (Congress) ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ, ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌. ಮಂಜೇಗೌಡ ಅವರು ನಾಮಪತ್ರ ಸಲ್ಲಿಕೆ ಕಾಲಕ್ಕೆ ಆಸ್ತಿಯ ಸಂಪೂರ್ಣ ವಿವರ ನೀಡಿಲ್ಲ. ಕೆಲವೊಂದು ಕಾಲಂಗಳನ್ನು ಭರ್ತಿ ಮಾಡಿಲ್ಲ ಎಂದು ಬಿಜೆಪಿಯವರು (BJP) ಆಕ್ಷೇಪ ವ್ಯಕ್ತರಡಿಸಿ, ಚುನಾವಣಾಧಿಕಾರಿಗೆ ತಕರಾರು ಸಲ್ಲಿಸಿದರು. ಅವರಿಬ್ಬರ ನಾಮಪತ್ರಗಳನ್ನು ತಿರಸ್ಕರಿಸುವಂತೆ ವಾದಿಸಿದರು. ಹೀಗಾಗಿ ಆ ಇಬ್ಬರಿಗೆ ತಕರಾರಿಗೆ ಉತ್ತರ ನೀಡಲು ಕಾಲಾವಕಾಶ ನೀಡಲಾಯಿತು. ಜೆಡಿಎಸ್‌  (JDS)ಅಭ್ಯರ್ಥಿ ಸಿ.ಎನ್‌. ಮಂಜೇಗೌಡರು ನೀಡಿದ ಉತ್ತರದಿಂದ ತೃಪ್ತರಾದ ಚುನಾವಣಾಧಿಕಾರಿಗಳು ನಿನ್ನೆಯೇ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಅವರ ತಕರಾರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರಿಂದ ಆತಂಕದ ವಾತಾವರಣ ಉಂಟಾಗಿತ್ತು.

Follow Us:
Download App:
  • android
  • ios