ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ರೂ ಚುನಾವಣೆ ಗೆಲ್ಲೋಕೆ ಕಷ್ಟ ಎಂದು ಸಚಿವ ಚಲುವರಾಯಸ್ವಾಮಿ ಬೇಸರ.ಐತಿಹಾಸಿಕ ಐಹೊಳೆ ಆಂಜನೇಸ್ವಾಮಿಗೆ ವಿಶೇಶ ಪೂಜೆ ಸಲ್ಲಿಸಿ ಹೇಳಿದ್ದೇನು?

ಮದ್ದೂರು (ಮಂಡ್ಯ) (ಸೆ.7)) ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ಇಷ್ಟೊಂದು ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಕಷ್ಟು ಹೋರಾಟ ಮಾಡಬೇಕಾಗಿರುವುದು ದುರಂತ ಎಂದು ಸಚಿವ ಎನ್. ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸುರೇಶ್ ಗೌಡರ ವಿರುದ್ಧ ಕಿಡಿ

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ಮಾತನಾಡಿ, ನಾನು ಮಾಡಿದ ಕೆಲಸವನ್ನು ದೊಡ್ಡದಾಗಿ ಹೇಳಿಕೊಳ್ಳಲ್ಲ. ಕೆಲಸ ಮಾಡದಿರುವುದನ್ನು ಮಾಡಿದ್ದೇನೆ ಅಂತ ಹೇಳಿಲ್ಲ. ಈ ಚಲುವರಾಯಸ್ವಾಮಿಯನ್ನು ಸುಲಭವಾಗಿ ಗೆಲ್ಲಿಸಬೇಡಿ. ನನ್ನ ಕೆಲಸ ನೋಡಿ ಮತ ಹಾಕಿ. ಏನೂ ಮಾತನಾಡಕ್ಕೆ ಬರದವನು ನನ್ನ ಸರಿಸಟಿ ನಿಲ್ತಾರೆ ಎಂದು ಪರೋಕ್ಷವಾಗಿ ಸುರೇಶ್ ಗೌಡರ ವಿರುದ್ಧ ಕಿಡಿಕಾರಿದರು.

ಬೆಳಗ್ಗೆ ಇಲ್ಲಿಗೆ ಬಂದವನು ಸೊಂಟ, ಬೆನ್ನು ಬಿದ್ದುಹೋಗಿದೆ. ಅಷ್ಟು ಕೆಲಸ ಮಾಡಿ ಬಂದು ಇಲ್ಲಿ ನಿಂತಿದ್ದಿನಿ. ನೀವು ಮನೆಗೆ ಹೋಗಿ ಮಲಗುತ್ತೀರಾ. ನನಗೆ ಇನ್ನು ಕೆಲಸ ಇದೆ. ನಾನು ದಿನ ಬಂದು ಭಾಷಣ ಮಾಡ್ತಿನಾ? ನನ್ನ ನೋವು ಯಾರ ಹತ್ತಿರ ಹೇಳಿಕೊಳ್ಳಲಿ ಎಂದರು.

ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು?

ನೀವು ನನ್ನ ಕಷ್ಟ ಕೇಳೋರು. ಜೊತೆ ನಿಲ್ಲೋರು. ನಿಮ್ಮ ಅಕ್ಕಪಕ್ಕದ ಜನರ ಒಂದೊಂದು ವೋಟ್ ವಿಶ್ವಾಸಕ್ಕೆ ತೆಗೆದುಕೊಂಡರೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು? ನೀವೇ ರಾಜ್ಯ ಸುತ್ತಿ ಕೆಲಸ ಮಾಡಿ ಅಣ್ಣ ಅಂತ ಹೇಳಿದರೆ ಸಚಿವನಾಗಿ ಹಾಸನಕ್ಕೊ, ತುಮಕೂರಿಗೋ ಹೋಗಿ ಕೆಲಸ ಮಾಡುವೆ. ನಾನು ಮದುವೆಗೆ ಬಂದಿಲ್ಲ, ಹಬ್ಬಕ್ಕೆ ಬಂದಿಲ್ಲ ಅನ್ನೋದನ್ನು ಕಾರ್ಯಕರ್ತರು, ಮುಖಂಡರು ಬಿಡಬೇಕು ಎಂದು ಮನವಿ ಮಾಡಿದರು.

ಶ್ರೀಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದರ್ಶನ ಪಡೆದು ಕೈಯಲ್ಲಿ 1.25 ಪೈಸೆ ನಾಣ್ಯ ಹಿಡಿದು ಹರಕೆ ಸಮರ್ಪಿಸಿದ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ 4ನೇ ಬಾರಿ ಸಚಿವನಾಗಿದ್ದೇನೆ. ದೇವರು ಮತ್ತು ಕ್ಷೇತ್ರದ ಜನರ ಆಶೀರ್ವಾದ ನನ್ನ ಏಳಿಗೆಗೆ ಕಾರಣ ಎಂದಿದ್ದಾರೆ

ನಗರದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಡೆ ಶ್ರಾವಣ ಶನಿವಾರದ ಅಂಗವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.