ಉತ್ತರ ಪ್ರದೇಶದ ಕಾಂಗ್ರೆಸ್ ಮಿತ್ರಪಕ್ಷ ಸಮಾಜವಾದಿ ಪಾರ್ಟಿ (ಎಸ್ಪಿ), ಸದ್ಯದಲ್ಲೇ ಜರುಗಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿಮಿತ್ತ ಏಕಪಕ್ಷೀಯವಾಗಿ 6 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಮೂಲಕ ಕಾಂಗ್ರೆಸ್ ತನಗೆ 5 ಸೀಟು ಬೇಕೇ ಬೇಕು ಎಂದು ಮಾಡಿದ್ದ ಮನವಿಯನ್ನು ನಿರಾಕರಿಸಿದೆ. 

ನವದೆಹಲಿ/ಮುಂಬೈ/ಕೋಲ್ಕತಾ(ಅ.10): ಕಾಂಗ್ರೆಸ್ ಪಕ್ಷವು ಮಿತ್ರ ಪಕ್ಷಗಳನ್ನು ನಿರ್ಲಕ್ಷಿಸಿ ಹರ್ಯಾಣದಲ್ಲಿ ಸೋಲುತ್ತಿ ದ್ದಂತೆಯೇ ಇಂಡಿಯಾ ಕೂಟದ ಹಲವು ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಪಕ್ಷದ ಮೇಲೆ ತಿರುಗಿಬಿದ್ದಿವೆ. ಗೆಲುವನ್ನು ಸೋಲನ್ನಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್ ನಿಂದ ಕಲಿಯಬಹುದು ಎಂದು ವ್ಯಂಗ್ಯವಾಡಿರುವ ಮಿತ್ರಪಕ್ಷಗಳು, 'ಕಾಂಗ್ರೆಸ್ ಈ ಸೋಲಿನಿಂದ ಪಾಠ ಕಲಿತು ಮೈತ್ರಿಧರ್ಮ ಪಾಲಿಸಬೇಕು ಎಂಬ ಪಾಠವನ್ನು ಈಗಲಾದರೂ ಕಲಿಯಲಿ' ಎಂದು ತಿವಿದಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದು ಕಡೆ, ಉತ್ತರ ಪ್ರದೇಶದ ಕಾಂಗ್ರೆಸ್ ಮಿತ್ರಪಕ್ಷ ಸಮಾಜವಾದಿ ಪಾರ್ಟಿ (ಎಸ್ಪಿ), ಸದ್ಯದಲ್ಲೇ ಜರುಗಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿಮಿತ್ತ ಏಕಪಕ್ಷೀಯವಾಗಿ 6 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಮೂಲಕ ಕಾಂಗ್ರೆಸ್ ತನಗೆ 5 ಸೀಟು ಬೇಕೇ ಬೇಕು ಎಂದು ಮಾಡಿದ್ದ ಮನವಿಯನ್ನು ನಿರಾಕರಿಸಿದೆ. 

ಆರೋಗ್ಯ ವಿಮೆಗೂ GST: ಸಚಿವ ಗಡ್ಕರಿ ವಿರೋಧದ ನಂತರ ವಿಪಕ್ಷ ಸಂಸದರಿಂದಲೂ ವಿರೋಧ

ಶಿವಸೇನೆ ಚಾಟಿ: 

ಶಿವಸೇನೆ (ಉದವ ಠಾಕ್ರೆ ಬಣ)ಮುಖವಾಣಿ 'ಸಾಮ್ನಾ'ದಲ್ಲಿ ಸಂಪಾದಕೀಯ ಬರೆಯಲಾಗಿದ್ದು, 'ರಾಜ್ಯ ನಾಯಕತ್ವದ ಅತಿಯಾದ ಆತ್ಮ ವಿಶ್ವಾಸ ಮತ್ತು ದುರಹಂಕಾರ' ದಿಂದಾಗಿ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸೋಲಾ ಗಿದೆ. ಅದು ಈ ಸೋಲಿನಿಂದ ಪಾಠ ಕಲಿ ಯಬೇಕು. ಗೆಲುವನ್ನು ಸೋಲ ನ್ನಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್ ನಿಂದ ಕಲಿಯಬಹುದು' ಎಂದು ಮಹಾ ರಾಷ್ಟ್ರದಲ್ಲಿನ ತನ್ನ ಮಿತ್ರ ಪಕ್ಷವಾದ ಕೈ ನಾಯಕರಿಗೆ ಎಚ್ಚರಿಕೆ ನೀಡಿದೆ. ಶಿವಸೇನೆ ಸಂಸದೆ ಪ್ರಿಯಾಂಕಾ ಚತು ರ್ವೇದಿ ಮಾತನಾಡಿ, 'ಕಾಂಗ್ರೆಸ್ ಪಕ್ಷವು ತನ್ನ ಕಾರ್ಯತಂತ್ರದ ಬಗ್ಗೆ ಯೋಚಿಸ ಬೇಕಾಗಿದೆ. ಏಕೆಂದರೆ ಬಿಜೆಪಿಯೊಂದಿಗೆ ಎಲ್ಲ ವಿಪಕ್ಷಗಳ ನೇರ ಹೋರಾಟವಿದೆ. ವಿಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಕೂಟ ದುರ್ಬಲಗೊಳ್ಳುತ್ತವೆ' ಎಂದು ಹೇಳಿದರು. ಶಿವಸೇನೆ ವಕ್ತಾರ ಸಂಜಯ ರಾವುತ್ ಮಾತನಾಡಿ, 'ದುರ್ಬಲ ಇದ್ದ ಸ್ಥಳದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಸಹಾಯ ಕೇಳುತ್ತದೆ. ಪ್ರಬಲ ಇದ್ದ ಕಡೆ ನಿರ್ಲಕ್ಷಿಸಿ ಬಿಡುತ್ತದೆ' ಎಂದಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, 'ರಾವುತ್‌ರ ಇಂಥ ಹೇಳಿಕೆ ಸಹಿಸಲ್ಲ' ಎಂದಿದ್ದಾರೆ. 

ಮೂರು ಬಾರಿ ಸೋತರೂ, ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲ; ರಾಹುಲ್ ವರ್ತನೆ ವಿರುದ್ಧ ಅಮಿತ್ ಶಾ ವಾಗ್ದಾಳಿ

ಟಿಎಂಸಿ ಕಿಡಿ: 

ತೃಣಮೂಲ ಕಾಂಗ್ರೆಸ್ ಸಂಸದಸಾಕೇತ್‌ ಗೋಖಲೆಪ್ರತಿಕ್ರಿಯಿಸಿ, 'ಅಹಂಕಾರದಿಂದ ವರ್ತಿಸುವುದು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡುವುದು ಕಾಂಗ್ರೆಸ್ ಪಕ್ಷದ ದುರಂ ತದ ಸೂತ್ರ' ಎಂದು ಕಿಡಿಕಾರಿದ್ದಾರೆ.

ಆರ್‌ಜೆಡಿ ಬುದ್ದಿಮಾತು 

'ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು, ಹೊಂದಾಣಿಕೆಯ ರಾಜಕೀಯದತ್ತ ಗಮನಹರಿಸಬೇಕು. ಮೈತ್ರಿ ತತ್ವಗಳನ್ನು ಗೌರವಿಸಬೇಕು. ದೊಡ್ಡ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಗೌರವಿಸಬೇಕು' ಎಂದು ಆ‌ರ್ ಜೆಡಿ ರಾಷ್ಟ್ರೀಯ ವಕ್ತಾರ ಪ್ರೊ| ಸುಬೋಧ ಮೆತ್ತಾ ಹೇಳಿದ್ದಾರೆ. ನ್ಯಾಷನಲ್ ಕಾನ್ಸರೆನ್ಸ್‌ನ ಒಮ‌ರ್ ಅಬ್ದುಲ್ಲಾ ಪ್ರತಿಕ್ರಿಯಿಸಿ, 'ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.