ಬಿಜೆಪಿ ಒಂದೇ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಂಡಿಯಾ ಕೂಟ ಪಡೆದಿರುವುದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಆದರೂ ಯಾಕೆ ಈ ದುರಂಹಕಾರ?

ರಾಂಚಿ: ‘ಚುನಾವಣೆಯಲ್ಲಿ ಗೆದ್ದವರೂ ಈ ರೀತಿ ದುರಂಹಕಾರ ತೋರಿಸುವುದಿಲ್ಲ. ಮೂರು ಬಾರಿ ಸೋತರೂ ಕಾಂಗ್ರೆಸ್‌ ಪಕ್ಷದ ನಾಯಕ ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, ‘ಹಲವು ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದುರಹಂಕಾರ ತೋರಿಸುವವರನ್ನು ನಾವು ನೋಡುತ್ತೇವೆ. ಆದರೆ ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ (ಕಾಂಗ್ರೆಸ್‌ ) ಪಕ್ಷ ಚುನಾವಣೆಯಲ್ಲಿ ಸೋತರೂ ದುರಂಹಕಾರ ಪ್ರದರ್ಶಿಸುತ್ತಾರೆ. ಈ ರೀತಿ ಮೊದಲ ಸಲ ನೋಡುತ್ತಿದ್ದೇನೆ’ಎಂದು ಲೋಕಸಭೆ ಫಲಿತಾಂಶವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಒಡಿಶಾದಲ್ಲಿ ಬ್ರಿಟನ್‌ ರೀತಿ ‘ವಿಪಕ್ಷದ ಸಚಿವ ಸಂಪುಟ’! ಏನಿದು ಶಾಡೋ ಕ್ಯಾಬಿನೆಟ್?

ಎರಡು, ಮೂರು ಸಲ ಸತತವಾಗಿ ಗೆದ್ದರು ರಾಹುಲ್ ಗಾಂಧಿಯವರ ರೀತಿ ಅಹಂಕಾರ ತೋರಿಸಲ್ಲ ಎಂದಿರುವ ಅಮಿತ್ ಶಾ, ‘ ಚುನಾವಣೆಯಲ್ಲಿ ಎನ್‌ಡಿಎ ಪೂರ್ಣ ಬಹುಮತ ಪಡೆದು ಗೆಲುವು ಸಾಧಿಸಿದೆ. ಬಿಜೆಪಿ ಒಂದೇ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಂಡಿಯಾ ಕೂಟ ಪಡೆದಿರುವುದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಆದರೂ ಯಾಕೆ ಈ ದುರಂಹಕಾರ? ಬಿಜೆಪಿ 2014,2019,2024.. ಮೂರು ಅವಧಿಯಲ್ಲಿಯೂ ಇಂಡಿಯಾ ಕೂಟದ ಮತಗಳಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದಿದೆ. ನಾವು ಮೂರು ಬಾರಿ ಗೆದ್ದಿದ್ದೇವೆ. ಆದರೆ ಅವರ ನಾಯಕ ಈಗಲೂ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ’ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.