ಹೈಕಮಾಂಡ್ ಬಯಸಿದ್ರೆ ನಾನು ಸಿಎಂ ಆಗುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೇನೆ. ಸಿಎಂ ಆಗು ಅಂದ್ರೆ ಯಾರು ಒಲ್ಲೆ ಅಂತಾರೆ ಅಂತ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ 

ಯಾದಗಿರಿ(ಸೆ.09):  ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶರಣಬಸಪ್ಪ ದರ್ಶನಾಪುರ ಅವರು, ಹೈಕಮಾಂಡ್ ಬಯಸಿದ್ರೆ ನಾನು ಸಿಎಂ ಆಗುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೇನೆ. ಸಿಎಂ ಆಗು ಅಂದ್ರೆ ಯಾರು ಒಲ್ಲೆ ಅಂತಾರೆ ಅಂತ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. 

ಜಲಜೀವನ ಮಿಷನ್, ಜಲಧಾರೆ ಪರಿಣಾಮಕಾರಿ ಅನುಷ್ಠಾನಗೊಳಿಸಿ: ಕೇಂದ್ರ ಸಚಿವ ಸೋಮಣ್ಣ

ಆದ್ರೆ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಹುದ್ದೆ ಖಾಲಿಯಾದರೆ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ 136 ಜನ ಶಾಸಕರಿಗೂ ಸಿಎಂ ಆಗುವ ಯೋಗ್ಯತೆ ಇದೆ. ಕಾಂಗ್ರೆಸ್ ನ ಎಲ್ಲಾ 136 ಶಾಸಕರು ಮಂತ್ರಿ ಆಗುವ ಯೋಗ್ಯತೆ ಉಳ್ಳವರಾಗಿದ್ದಾರೆ. ಆದ್ರೆ ಅಲ್ಲಿ ಅನಿವಾರ್ಯಯತೆಯಿಂದ 33 ಶಾಸಕರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ. ಸಿಎಂ ಆಗುವರು ಒಬ್ಬರೇ 150 ಜನ ಸಿಎಂ ಆಕಾಂಕ್ಷಿ ಇದ್ರೂ ಒಬ್ಬರೇ ಸಿಎಂ ಆಗುತ್ತಾರೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.