ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಟ ಶಿವರಾಜ್‌ಕುಮಾರ್‌ಗೆ ರಾಜಕೀಯಕ್ಕೆ ಬರುವಂತೆ ಆಫರ್ ನೀಡಿದ್ದರು. ಆದರೆ, ತಮ್ಮ ತಂದೆಯ ಬಳುವಳಿಯಾದ ನಟನೆಯಲ್ಲೇ ಮುಂದುವರೆಯುವುದಾಗಿ ಹೇಳಿ ಶಿವಣ್ಣ ಈ ಆಹ್ವಾನಕ್ಕೆ ನಟ ಏನಂದ್ರು? ತಮಿಳುನಾಡಿನಂತೆ ಕರ್ನಾಟಕದಲ್ಲಿ ನಟರು ರಾಜಕೀಯದಲ್ಲಿ ಯಶಸ್ವಿಯಾಗುವುದು ಕಷ್ಟ ಎಂಬ ವಿಶ್ಲೇಷಣೆಯನ್ನೂ ಈ ಲೇಖನ ಒಳಗೊಂಡಿದೆ.

ಸದ್ಯ ತಮಿಳುನಾಡಿನಲ್ಲಿ ನಟನಾಗಿರುವ ದಳಪತಿ ವಿಜಯ್​ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ವಿಜಯ್​ ಈ ಹಿಂದೆ ರ್ಯಾಲಿ ನಡೆಸಿದ ಸಂದರ್ಭದಲ್ಲಿಯೂ ಹಿಂದೆಂದಿಗಿಂತಲೂ ಜನರು ಸೇರಿ ದಾಖಲೆಯನ್ನೇ ಬರೆದಿದ್ದರು. ಅಷ್ಟಕ್ಕೂ ತಮಿಳುನಾಡಿನಲ್ಲಿ ನಟರೊಬ್ಬರು ರಾಜಕೀಯಕ್ಕೆ ಬಂದರೆ ಇದೇ ರೀತಿ ಮರ್ಯಾದೆ ಇದೆ, ಅವರಿಗೆ ಸಿನಿಮಾ ಮತ್ತು ರಾಜಕೀಯ ಎರಡರಲ್ಲಿಯೂ ಜನರು ಜೈ ಎನ್ನುತ್ತಾರೆ ಎನ್ನುವುದಕ್ಕೆ ಇತಿಹಾಸವೇ ಇದೆ.

ಶಿವರಾಜ್​ ಕುಮಾರ್​ಗೆ ಆಫರ್​

ಇದರ ಬೆನ್ನಲ್ಲೇ ಇದೀಗ ನಟ ಶಿವರಾಜ್​ ಕುಮಾರ್​ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಟಿಕೆಟ್​ ಆಫರ್​ ಕೊಟ್ಟಿರುವ ವಿಡಿಯೋ ಒಂದು ವೈರಲ್​ ಆಗಿದೆ. ನೀನು ಪಾರ್ಲಿಮೆಂಟ್​ಗೆ ನಿಂತ್ಕೊಳೋಕೆ ರೆಡಿಯಾಗಪ್ಪ, ಎಲ್ಲಿ ಬೇಕೋ ಅಲ್ಲಿ ಸೀಟು ಕೊಡ್ತೀನಿ ಅಂತ. ಅದಕ್ಕೆ ಅವ್ನು, ಇಲ್ಲಾ, ಇನ್ನೂ ಐದಾರು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದ. ಸಿನಿಮಾ ಯಾವಾಗಲಾದರೂ ಮಾಡಬಹುದು. ಪಾರ್ಲಿಮೆಂಟ್​ಗೆ ಹೋಗುವ ಯೋಗ ಯಾವಾಗ್ಲೋ ಬರುವುದಿಲ್ಲ. ಅವಕಾಶ ಮನೆಯ ಬಾಗಿಲಿಗೆ ಬಂದಿದೆ, ಅದನ್ನು ತಪ್ಪಿಸಿಕೊಳ್ಳಲು ಹೋಗಬೇಡಿ ಎಂದಿದ್ದಾರೆ ಡಿ.ಕೆ.ಶಿವಕುಮಾರ್​.

ಶಿವಣ್ಣ ಉತ್ತರ ಏನು?

ಅದಕ್ಕೆ ಉತ್ತರವಾಗಿ ಶಿವರಾಜ್​ ಕುಮಾರ್​ ಅವರು, ನಮ್ಮ ತಂದೆ ಕೊಟ್ಟಿರುವ ಬಳುವಳಿ ಒಂದೇ. ನಾವು ಬಣ್ಣ ಹಚ್ಚಬೇಕು, ಆ್ಯಕ್ಟ್​ ಮಾಡಬೇಕು, ನಿಮ್ಮನ್ನು ಮೆಚ್ಚಿಸಬೇಕು ಅಷ್ಟೆನೇ. ಏನಿದ್ರೂ ನನ್ನದು ಅಷ್ಟಕ್ಕೆ ಸೀಮಿತ ಎಂದಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವುದೇ ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ತಮಿಳುನಾಡಿನಂತೆ ಕರ್ನಾಟಕದಲ್ಲಿ ನಟರು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಇದಾಗಲೇ ಸಾಬೀತಾಗಿದೆ. ಸಿನಿಮಾ ನಟನೆಗೆ ಲಕ್ಷಾಂತರ ಫ್ಯಾನ್ಸ್​ ಇದ್ದರೂ, ಅವರೆಲ್ಲರೂ ತಮ್ಮ ನೆಚ್ಚಿನ ನಟನಿಗೆ ವೋಟ್​ ಹಾಕುತ್ತಾರೆ ಎನ್ನಲಾಗದು. ಈ ವಿಷಯದಲ್ಲಿ ತಮಿಳುನಾಡಿಗೂ ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನೇ ಅರಿತೋ ಏನೋ ಒಟ್ಟಿನಲ್ಲಿ ಶಿವರಾಜ್​ ಕುಮಾರ್​ ಅವರು ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಸೂಚ್ಯವಾಗಿ ನುಡಿದಿದ್ದಾರೆ.

ಪತ್ನಿ ಗೀತಾ ಕಣಕ್ಕೆ

ಅಂದಹಾಗೆ ವಿಜಯ್​ ದಳಪತಿ ಅವರ ಗೆಲುವಿನ ಬಳಿಕ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಇದು ಹಳೆಯ ವಿಡಿಯೋ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್​ ಅವರು ಶಿವಣ್ಣ ಅವರಿಗೆ ಆಫರ್​ ಕೊಟ್ಟಿದ್ದರು. ನಟ ಇದನ್ನು ತಿರಸ್ಕರಿಸಿದ್ದರು. ಆದರೆ ಕಳೆದ ಬಾರಿ ಕಾಂಗ್ರೆಸ್​ನಿಂದ ತಮ್ಮ ಪತ್ನಿ ಗೀತಾ ಅವರನ್ನು ನಿಲ್ಲಿಸಿದ್ದರು. ಆದರೆ ಜನರು ಅವರ ಕೈ ಹಿಡಿಯಲಿಲ್ಲ.