ಬಸವರಾಜ ರಾಯರಡ್ಡಿ ಅವರನ್ನು 'ಯು-ಟರ್ನ್ ರಾಜಕಾರಣಿ' ಎಂದು ಕರೆದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಅವರ ಹಿಂದೂ ವಿರೋಧಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದೂಗಳ ಕ್ಷಮೆ ಕೇಳುವಂತೆ ಆಗ್ರಹಿಸಿದರು.

ಕೊಪ್ಪಳ (ಸೆ.1) ಬಸವರಾಜ ರಾಯರಡ್ಡಿ ಒಬ್ಬ ಯು-ಟರ್ನ್ ರಾಜಕಾರಣಿ. ಹಿಂದೂತ್ವದಲ್ಲಿ ಜನ್ಮ ಪಡೆದು ಹಿಂದೂ ಇರೋಧಿ ಹೇಳಿಕೆ ಕೊಡೋದು ನೀಚ ಕೆಲಸ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.

ರಾಯರೆಡ್ಡಿ ಹುಟ್ಟಿದ್ದು ಯಾವ ಧರ್ಮ? ಬೆಳೆದಿದ್ದು ಯಾವ ಧರ್ಮ?

ಇಂದು ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಯರೆಡ್ಡಿ ಸಮಯಕ್ಕೆ ತಕ್ಕಂತೆ ಬದಲಾಗುವ ಅನುಕೂಲ ಸಿಂಧು ರಾಜಕಾರಣಿ. ಸ್ವಾರ್ಥಕ್ಕಾಗಿ ನಾಲಿಗೆ ಹರಿಬಿಡೋದು ಸರಿಯಲ್ಲ. ಅವ್ರು ಸೀನಿಯರ್ ಸಿಟಿಜನ್ ಆಗಿ ಇಂಥ ವರ್ತನೆಗೆ ನಾನು ಅವರಿಗೆ ಪಾಠ ಹೇಳಬಾರದು.. ರಾಯರೆಡ್ಡಿ ಅವರಂಥ ಕೆಟ್ಟ ನಡೆ ನಮ್ಮ ಸಂಸ್ಕೃತಿಗೆ ಮಾರಕ. ಹಿಂದೂ ವಿರೋಧಿ ಹೇಳಿಕೆ ನೀಡಿ ರಾಯರಡ್ಡಿ ಯಾರ ಓಲೈಕೆ ಮಾಡುತ್ತಿದ್ದಾರೆ? ನಾನು ನನ್ನ ಧರ್ಮ ಅನ್ನೋ ಭಾವನೆ ಇರಬೇಕು. ರಾಯರೆಡ್ಡಿ ಯಾವ ಧರ್ಮದಲ್ಲಿ ಹುಟ್ಟಿದ್ದು, ಯಾವ ಧರ್ಮದಲ್ಲಿ ಬೆಳೆದಿದ್ದು? ಇಲ್ಲೇ ಹಿಂದೂ ಧರ್ಮದಲ್ಲೇ ಜನಿಸಿ, ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತಾಡ್ತಿಯಾ ಅಂದ್ರೆ ಯಾರ ಒಲೈಕೆ ಮಾಡತೀದಿರಿ ಹರಿಹಾಯ್ದರು.

ರಾಯರೆಡ್ಡಿ ಶ್ರೇಷ್ಠ ಧರ್ಮಕ್ಕೆ ಮತಾಂತರ ಆಗಲಿ

ರಾಯರೆಡ್ಡಿಗೆ 60 ವರ್ಷ ಮೀರಿರಬೇಕು ಅದಕ್ಕೆ ಅರಳು ಮರಳು ಆಗಿದೆ. ಅವರ ಅರ್ಧ ನಾಲಗೆ ಬಿದ್ದುಹೋಗಿದೆ. ಈಗ ನಾಟಕ ಮಾಡುತ್ತಿದ್ದಾರೆ.ನೀವು ತೆವಲಿಗಾಗಿ ಹಿಂದೂ ಧರ್ಮದ ಕೀಳಾಗಿ ಮಾತಾಡ್ತೀರಾ? ಮುಸ್ಲಿಂ ಧರ್ಮವೇ ಶ್ರೇಷ್ಠ ಅಂತಾದರೆ ನೀವು ಮತಾಂತರ ಆಗೋಕೆ ಅವಕಾಶವಿದೆ. ಮೊದಲ ಆ ಕೆಲಸ ಮಾಡಿ. ನೀವು ಯಾವ ಧರ್ಮವನ್ನ ಕೀಳು ಅಂತಿರೋ ಅದರಲ್ಲೇ ಬದುಕ್ತಿರೋದ್ಯಾಕೆ? ರಾಯರೆಡ್ಡಿಯವರೇ ನಿಮ್ಮ ಅತ್ಯಂತ ಕೀಳು ಅಭಿರುಚಿಯ ಹೇಳಿಕೆ. ಹಿಂದೂ ಅಂದ ತಕ್ಷಣ ನಾವು ಇಸ್ಲಾಂ ಸೇರಿ ಯಾವ ಧರ್ಮದ ವಿರೋಧಿಗಳಲ್ಲ. ಆದರೆ ನೀವು ರಾಜಕೀಯ ತೆವಲಿಗಾಗಿ ಒಂದು ಧರ್ಮ ಶ್ರೇಷ್ಠ, ಇನ್ನೊಂದು ಧರ್ಮ ಕೀಳು ಅನ್ನೋದು ಬಿಡಬೇಕು. ಹಿಂದೂ ಧರ್ಮದ ಬಗ್ಗೆ ಅವರು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿದರು.

ರಾಯರೆಡ್ಡಿ ಅಮ್ಮಾವ್ರ ಗಂಡ ಇರಬೇಕು

ಹಿಂದೂ ಒಂದು ನಾವೆಲ್ಲ ಒಂದು. ಸಂವಿಧಾನದ ಅಡಿಯಲ್ಲಿ ಬರುವ ಎಲ್ಲ ಭಾರತೀಯರು ಒಂದೇ ಎಂದರು. ಇದೇ ವೇಳೆ 'ನಾನು ಬೇರೆಯವರು ಹೇಳಿದ್ರೆ ದೇವಸ್ಥಾನಕ್ಕೆ ಹೋಗ್ತಿನಿ' ಅಂದಿದ್ದ ರಾಯರಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವರು,

ರಾಯರೆಡ್ಡಿ ಅಮ್ಮಾವ್ರ ಗಂಡ ಇರಬೇಕು. ನಾನು ನನ್ನ ಹೆಂಡತಿ ಮಗಳು ಹೇಳಿದ್ರೆ ಮಾತ್ರ ದೇವಸ್ಥಾನಕ್ಕೆ ಹೋಗ್ತೀನಿ ಅಂದಿರ್ತಾರೆ. ಆಂಜನೇಯ ದೇವಸ್ಥಾನಕ್ಕೆ ಹೋಗಲ್ಲ ಎಂದು ಯಾಕೆ ದೇವಸ್ಥಾನಕ್ಕೆ ಹೋಗಿದ್ದೀರಿ? ರಾಯರಡ್ಡಿ ಅವರದು ಅರಳುಮರಳು. ರಾತ್ರಿ ಮಾತು ಖಾತ್ರಿ ಇಲ್ಲ. ಅವರ ಅರ್ಧ ನಾಲಿಗೆ ಬಿದ್ದಿದೆ, ಅರ್ಧ ನಾಲಿಗೆ ಹೊರಳಾಡುತ್ತಿದೆ. ಹೀಗಾಗಿ ನಾನು ಅವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆರೋಗ್ಯ ಸರಿಯಾಗಲಿ

ಕಾಂಗ್ರೆಸ್ ಇರೋವರೆಗೂ ಮುಸ್ಲಿಂ-ದಲಿತರಿಗೆ ಭವಿಷ್ಯವಿಲ್ಲ

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಚಲವಾದಿ ನಾರಾಯಣ ಸ್ವಾಮಿ ಅವರು, ದೇಶದಲ್ಲಿ ಕಾಂಗ್ರೆಸ್ ಇರೋವರೆಗೂ ದಲಿತರಿಗೆ, ಮುಸ್ಲಿಮರಿಗೆ ಭವಿಷ್ಯವಿಲ್ಲ ಎಂದರು. ಇವರನ್ಮ ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಕಾಂಗ್ರೆಸ್ ಬದುಕಿದ್ರೆ ಇವರು ಸತ್ತ ಹಾಗೆ, ಕಾಂಗ್ರೆಸ್ ಸತ್ತರೆ ಇವರು ಬದುಕಿದ ಹಾಗೆ ರಾಯಚೂರಲ್ಲಿ ದಲಿತರ ಕೊಲೆಗಳಾಗಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಉಪಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಇನ್ನು ಗೃಹಮಂತ್ರಿಗಳು ಆರೆಸ್ಸೆಸ್ ಮಂತ್ರಿಗಳಾಗಿದ್ದಾರೆ. ಅವರು ಆರೆಸ್ಸೆಸ್ ಉಸ್ತುವಾರಿ ಆಗಿದ್ದಾರೆ ಹರಿಹಾಯ್ದರು.