Pro Kabaddi League: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್

* ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಹರ್ಯಾಣ ಸ್ಟೀಲರ್ಸ್‌ ಸವಾಲು

* ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದೆ ಬುಲ್ಸ್ ಪಡೆ

* ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಬೆಂಗಳೂರು ತಂಡ

Pro Kabaddi League Bengaluru Bulls eyes on Hat trick Win Bulls will take on Haryana Steelers kvn

ಬೆಂಗಳೂರು(ಡಿ.30): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಉತ್ತಮ ಆರಂಭ ಪಡೆದುಕೊಂಡಿರುವ ಬೆಂಗಳೂರು ಬುಲ್ಸ್‌(Bengaluru Bulls), ಗುರುವಾರ ಹ್ಯಾಟ್ರಿಕ್‌ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ. 2 ಸೋಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಹರ್ಯಾಣ ಸ್ಟೀಲ​ರ್ಸ್‌ (Haryana Steelers) ವಿರುದ್ಧ ಬೆಂಗಳೂರು ಬುಲ್ಸ್‌ ಸೆಣಸಲಿದೆ. ಸೋಲಿನೊಂದಿಗೆ ಈ ಆವೃತ್ತಿಯನ್ನು ಆರಂಭಿಸಿದ್ದ ಬೆಂಗಳೂರು ತಂಡ, ಆ ನಂತರ ತಮಿಳ್‌ ತಲೈವಾಸ್‌(Tamil Thalaivas) ಹಾಗೂ ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್‌(Bengal Warriors) ವಿರುದ್ಧ ಗೆಲುವು ಸಂಪಾದಿಸಿತ್ತು. 

ಬೆಂಗಳೂರು ಬುಲ್ಸ್‌ ತಂಡ ನಾಯಕ ಹಾಗೂ ತಾರಾ ರೈಡರ್‌ ಪವನ್‌ ಶೆರಾವತ್(Pawan Sharawat) ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆಯಾದರೂ, ಚಂದ್ರನ್‌ ರಂಜಿತ್‌ ಹಾಗೂ ಭರತ್‌ ನಾಯಕನಿಗೆ ಉತ್ತಮ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ತಂಡದ ರಕ್ಷಣಾ ಪಡೆ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ಕೇವಲ 4 ಅಂಕ ಪಡೆದಿದ್ದ ಬುಲ್ಸ್‌ ಡಿಫೆಂಡರ್‌ಗಳು, 2ನೇ ಪಂದ್ಯದಲ್ಲಿ 13 ಅಂಕ ಕಲೆಹಾಕಿದ್ದರು. 3ನೇ ಪಂದ್ಯದಲ್ಲಿ ಮತ್ತೆ ಡಿಫೆಂಡರ್‌ಗಳಿಂದ ಸಾಧಾರಣ ಪ್ರದರ್ಶನ (ಒಟ್ಟು 6 ಅಂಕ) ಮೂಡಿಬಂತು. ಹರಾರ‍ಯಣ ವಿರುದ್ಧ ಬುಲ್ಸ್‌ ಗೆದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ.

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ(U Mumba) ಎದುರು ಆಘಾತಕಾರಿ ಸೋಲು ಕಂಡಿದ್ದ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ತಂಡವು ಆ ಬಳಿಕ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ಎದುರು ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಇಂದಿನ ಪಂದ್ಯಗಳು: 
ಜೈಪುರ ಪಿಂಕ್‌ ಪ್ಯಾಂಥ​ರ್ಸ್‌-ಯು ಮುಂಬಾ, ಸಂಜೆ 7.30ಕ್ಕೆ, 
ಬೆಂಗಳೂರು ಬುಲ್ಸ್‌-ಹರ್ಯಾಣ ಸ್ಟೀಲ​ರ್ಸ್‌, ರಾತ್ರಿ 8.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

ನವೀನ್‌ 24 ರೈಡ್‌ ಅಂಕ, ಬೆಂಗಾಲ್‌ ವಿರುದ್ಧ ಗೆದ್ದ ಡೆಲ್ಲಿ

ಬೆಂಗಳೂರು: ಯುವ ರೈಡರ್‌ ನವೀನ್‌ ಕುಮಾರ್‌ ಪ್ರೊ ಕಬಡ್ಡಿಯಲ್ಲಿ ಸತತ 25ನೇ ಸೂಪರ್‌ 10(ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ರೈಡ್‌ ಅಂಕ) ಸಾಧನೆ ಮಾಡಿ, ದಬಾಂಗ್‌ ಡೆಲ್ಲಿ ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್‌ ವಿರುದ್ಧ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ನೆರವಾದರು. 25 ರೈಡ್‌ಗಳಲ್ಲಿ ನವೀನ್‌ ಗಳಿಸಿದ 24 ಅಂಕಗಳ ನೆರವಿನಿಂದ ಡೆಲ್ಲಿ 52-35ರ ದೊಡ್ಡ ಗೆಲುವು ಸಂಪಾದಿಸಿತು.

Pro Kabaddi League : ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಗೆ ಮತ್ತೆ ಮುಖಭಂಗ!

ಪಂದ್ಯದ 12ನೇ ನಿಮಿಷದ ವೇಳೆಗೇ ಬೆಂಗಾಲ್‌ 2 ಬಾರಿ ಆಲೌಟ್‌ ಆಗಿ 7-21ರ ಹಿನ್ನಡೆ ಅನುಭವಿಸಿತು. ಮೊದಲಾರ್ಧದ ಮುಕ್ತಾಯದ ವೇಳೆಗೆ ಡೆಲ್ಲಿ 33-15ರಿಂದ ಮುಂದಿತ್ತು. ಈ ಗೆಲುವಿನೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬೆಂಗಾಲ್‌ ಸತತ 2ನೇ ಸೋಲು ಕಂಡು 5ನೇ ಸ್ಥಾನಕ್ಕೆ ಕುಸಿದಿದೆ.

ಯೋಧಾ-ಗುಜರಾತ್‌ ಪಂದ್ಯ 32-32ರಲ್ಲಿ ಟೈ!

ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯು ಮೊದಲ ವಾರದಲ್ಲೇ 4ನೇ ಟೈ ಪಂದ್ಯಕ್ಕೆ ಸಾಕ್ಷಿಯಾಗಿದೆ. ಬುಧವಾರ ನಡೆದ ಯು.ಪಿ.ಯೋಧಾ ಹಾಗೂ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ನಡುವಿನ ಪಂದ್ಯ 32-32ರಲ್ಲಿ ಟೈ ಆಯಿತು. ಗುಜರಾತ್‌ ಸತತ 2ನೇ ಟೈಗೆ ತೃಪ್ತಿಪಟ್ಟು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಯೋಧಾ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.


 

Latest Videos
Follow Us:
Download App:
  • android
  • ios