ವಿಳಂಬಿ ನಾಮ ಸಂವಸ್ಸರದ ಫಲಾಫಲಗಳು ಹೀಗಿವೆ

First Published 18, Mar 2018, 5:47 PM IST
Ugadi Special
Highlights

ವಿಳಂಬಿ ನಾಮ ಸಂವತ್ಸರದಲ್ಲಿ ರಾಜ ನಿಗ್ರಹ, ಸುವೃಷ್ಟಿ  ಉಂಟಾಗಲಿದ್ದು, ರಾಜ ಮತ್ತು ಪ್ರಜೆಗಳ ಮಧ್ಯೆ ವೈರತ್ವ  ಉಂಟಾಗಲಿದೆ. ಶನಿ ಮಂತ್ರಿಯಾದ್ದರಿಂದ ದೇಶ ಮತ್ತು ರಾಜ್ಯಗಳ ನಡುವೆ ವೈಷಮ್ಯ ಉಂಟಾಗಬಹುದು. ಶುಕ್ರ ಸೇನಾಧಿಪತಿಯಾದ್ದರಿಂದ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಲಿದ್ದು, ಉತ್ತಮ  ಮಳೆಯಾಗಲಿದೆ.

ಬೆಂಗಳೂರು (ಮಾ. 18):  ವಿಳಂಬಿ ನಾಮ ಸಂವತ್ಸರದಲ್ಲಿ ರಾಜ ನಿಗ್ರಹ, ಸುವೃಷ್ಟಿ  ಉಂಟಾಗಲಿದ್ದು, ರಾಜ ಮತ್ತು ಪ್ರಜೆಗಳ ಮಧ್ಯೆ ವೈರತ್ವ  ಉಂಟಾಗಲಿದೆ. ಶನಿ ಮಂತ್ರಿಯಾದ್ದರಿಂದ ದೇಶ ಮತ್ತು ರಾಜ್ಯಗಳ ನಡುವೆ ವೈಷಮ್ಯ ಉಂಟಾಗಬಹುದು. ಶುಕ್ರ ಸೇನಾಧಿಪತಿಯಾದ್ದರಿಂದ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಲಿದ್ದು, ಉತ್ತಮ  ಮಳೆಯಾಗಲಿದೆ.
ಕುಜ ಸಸ್ಯಾಧಿಪತಿಯಾದ್ದರಿಂದ ಕೆಂಪು ಮಣ್ಣಿನಲ್ಲಿ ಹೆಚ್ಚು ಬೆಳೆ ಬರುತ್ತದೆ. ಕೆಂಪು ಧಾನ್ಯ ವಸ್ತುಗಳಿಂದ ಲಾಭವಾಗಲಿದೆ. ರವಿ  ಧಾನ್ಯಾಧಿಪತಿಯಾದ್ದರಿಂದ ಕೆಲ ಬೆಳೆಗಳು ನಾಶವಾಗುವ ಸಾಧ್ಯತೆ.  ಕ್ಲೇಶೋತ್ಪನ್ನತೆ. ಪ್ರಜೆಗಳಿಗೆ ತೊಂದರೆ, ಭಯ ಕಾಡಲಿದೆ. ಶುಕ್ರ  ಅಷ್ಟಾಧಿಪತಿಯಾದ್ದರಿಂದ ಬಿಳಿಯ ಧಾನ್ಯ ಹೆಚ್ಚಾಗಿ ಬೆಳೆಯಲಿದ್ದು, ಬೆಲೆ  ಇಳಿಕೆಯಾಗಲಿದೆ.
ಶುಕ್ರ ಮೇಘಾಧಿಪತಿಯಾದ್ದರಿಂದ ಕೆಲಕಡೆಯಲ್ಲಿ ಅತಿವೃಷ್ಟಿ,  ಅನಾವೃಷ್ಟಿ ಉಂಟಾಗಲಿದೆ. ಗುರುವು ರಸಾಧಿಪತಿಯಾದ್ದರಿಂದ ತೈಲ  ಹಾಗೂ ದ್ವಿದಳ ಧಾನ್ಯ ಸಮೃದ್ಧಿ ಉಂಟಾಗಲಿದೆ. ವರ್ಷದ ಕೊನೆಯಲ್ಲಿ  ಲಾಭ ಉಂಟಾಗಲಿದೆ.
ವರ್ಷದ ಫಲಾನುಫಲವನ್ನು ನೋಡಿದಾಗ ಮಿಶ್ರಫಲವನ್ನು  ಕಾಣಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯತೆ. ಆರ್ಥಿಕ  ಪ್ರಗತಿಯನ್ನು ಕಾಣುವ ಸಾಧ್ಯತೆ. ವಿರೋಧಿ ದೇಶದ ಹೆಡೆಮುರಿ ಕಟ್ಟುವ ಸಾಧ್ಯತೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ. ಸಹೋದರರ ನಡುವೆ  ಕಲಹ ಭಾವನೆ ಉಂಟಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಕೆಸರೆರೆಚಾಟ  ಮುಂದುವರೆಯಲಿದ್ದು, ರಾಜಕಾರಣಿಗಳಿಗೆ ನೆಮ್ಮದಿ ಅಸಾಧ್ಯ. ವೈರತ್ವ ಭಾವನೆಯಿಂದ ನೆಮ್ಮದಿಗೆ ಅಡೆತಡೆ. ಧಾರ್ಮಿಕ ಚಿಂತಕರಿಗೆ ಕೆಲ ಸಮಸ್ಯೆಗಳು ಮುಂದುವರೆಯಲಿವೆ. ಷೇರು ಮಾರುಕಟ್ಟೆ  ಉದ್ಯಮಗಳು ಉತ್ತಮವಾಗಲಿದ್ದು, ದೇಶದ ಪ್ರಗತಿಗೆ ಅನುಕೂಲ. ಸ್ಥಿರಾಸ್ತಿಯ ಖರೀದಿ. ಮನಸ್ಸಿಗೆ ಸಮಾಧಾನ ದೊರೆಯಲಿದೆ.  ಕಾರ್ಮಿಕ ವರ್ಗದಲ್ಲಿ ಸಂತೋಷ. ಕೃಷಿ ಚಟುವಟಿಕೆಯಲ್ಲಿ ಕೆಂಪು ಧಾನ್ಯಗಳು, ಹಣ್ಣುಗಳು ಲಾಭ ತರಲಿವೆ. ತಂತ್ರಜ್ಞಾನ, ಸೋಲಾರ್  ಉತ್ಪನ್ನಗಳು ಲಾಭ ತರಲಿವೆ. ಹೊಸ ಕಾಯಕದಲ್ಲಿ ಯಶಸ್ಸು. ಆರೋಗ್ಯ ವಿಚಾರದಲ್ಲಿ ವಾತ ರೋಗ, ಉಷ್ಣ ಕಾಯಿಲೆ ಭಾದಿಸಬಹುದು. ಕೆಲವರ ಜೀವನದಲ್ಲಿ ನಗಣ್ಯರೂ ಅಗ್ರಗಣ್ಯರಾಗಲಿದ್ದಾರೆ.  ವೈದ್ಯರಿಗೆ ಅನುಕೂಲ. ಕಬ್ಬಿಣ, ತೈಲ, ಬಂಗಾರ, ರತ್ನಗಳ ಬೆಲೆಯಲ್ಲಿ ಏರಿಕೆ. ಚಿತ್ರರಂಗದವರಿಗೆ ಅನುಕೂಲ, ಪತ್ರಿಕಾ ರಂಗದಲ್ಲಿ ಯಶಸ್ಸು. ಹಣಕಾಸು ವಿಚಾರದಲ್ಲಿ ಸುಧಾರಣೆ 

loader