ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಸದ್ಯ ಅಪಾಯದಿಂದ ಪಾರಾಗಿದೆ.

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಪಾಕ್ ರಾಜಧಾನಿಯಲ್ಲಿ ನಿರ್ಮಾಣವಾಗಲಿದೆ ಬೃಹತ್ ಕೃಷ್ಣ ದೇವಾಲಯ

ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಹಿಂದೂ ದೇವಲಾಯ ನಿರ್ಮಾಣವಾಗಲಿದೆ. ಇಲ್ಲಿಯವರೆಗೂ ಯಾವುದೇ ಧಾರ್ಮಿಕ ಕಾರ್ಯಕ್ಕೆ ನಗರದ ಹೊರಭಾಗಕ್ಕೆ ಹೋಗುತ್ತಿದ್ದ ಜನರಿಗೆ ಇನ್ನು ತಮ್ಮ ನಗರದಲ್ಲಿಯೇ ದೇವಾಲಯ ಹಾಗೂ ಸ್ಮಶಾನ ಎರಡೂ ಸಿಗಲಿವೆ.

ಶಾಂತಿ ಜಪದ ಮಧ್ಯೆಯೇ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ!

ಗಲ್ವಾನ್‌ ಕಣಿವೆಯಲ್ಲಿ ಉದ್ಭವವಾಗಿರುವ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಒಂದೆಡೆ ಶಾಂತಿ ಮಂತ್ರ ಜಪಿಸಲು ಆರಂಭಿಸಿರುವ ಚೀನಾ, ಮತ್ತೊಂದೆಡೆ ಸದ್ದಿಲ್ಲದೆ ಸೇನಾ ಜಮಾವಣೆ ಪ್ರಾರಂಭಿಸುವ ಮೂಲಕ ತನ್ನ ಕಪಟ ಬುದ್ಧಿ ಪ್ರದರ್ಶಿಸಿದೆ.

'ತುಟಿ ಬಿಚ್ಚಬೇಡಿ' ಸಚಿವರಿಗೆ ಬಿಎಸ್‌ ಯಡಿಯೂರಪ್ಪ ತಾಕೀತು!

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.  ಶುಕ್ರವಾರ ಸಹ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡೋಣ ಎಂದಿದ್ದಾರೆ.

ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 37 ವರ್ಷ..!

ಜೂನ್ 25, 1983 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡುವ ದಿನ. ಮೂರನೇ ಏಕದಿನ ವಿಶ್ವಕಪ್‌ನಲ್ಲಿ ಬಲಿಷ್ಠ ವಿಂಡೀಸ್ ಬಗ್ಗು ಬಡಿದು ಚಾಂಪಿಯನ್ ಆದ ದಿನಕ್ಕೆ ಇಂದಿಗೆ 37 ವರ್ಷ ಕಳೆದಿದೆ. ಈ ವಿಶ್ವಕಪ್ ಜರ್ನಿಯ ಮೆಲುಕು ಇಲ್ಲಿದೆ ನೋಡಿ.

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು?...

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಪ್ರಮುಖ ಘಟನೆಯಾಗಿ ದಾಖಲಾಗಿದೆ. ಬರೋಬ್ಬರಿ 21 ತಿಂಗಳುಗಳ ಕಾಲ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 45 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯ ಹಿಂದಿನ ಕಾರಣ, ತುರ್ತುಸ್ಥಿತಿ ವೇಳೆಯ ದಿನಗಳು ಹೇಗಿದ್ದವು ಎಂಬ ಇತ್ಯಾದಿ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ಸವಿಸ್ತಾರವವಾಗಿ ನೀಡಲಾಗಿದೆ.

ಮೋಸ್ಟ್‌ ಸೆಕ್ಸಿ ಗರ್ಲ್‌ ಇಶಾ ಗುಪ್ತಾ ಫಿಟ್‌ನೆಸ್‌ ಪಾಠ ಹೇಗಿದೆ ನೋಡಿ!

ಮೋಸ್ಟ್‌ ಸೆಕ್ಸಿ ಗರ್ಲ್‌ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್‌ಡೌನ್‌ ಟೈಮ್‌ನಲ್ಲಿ ಹೊಸ ಬಗೆಯ ಸ್ಟ್ರೆಚ್‌ಗಳು, ಯೋಗ ಪ್ರಾಕ್ಟೀಸ್‌ ಮಾಡಿದ್ದಾರೆ. ಆಕೆಯ ಫಿಟ್‌ನೆಸ್‌ ಪಾಠ ಹೀಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!

ಬಾಹ್ಯಾಕಾಶ ಅನ್ವೇಷಣೆ ಸೇರಿದಂತೆ ಎಲ್ಲಾ ರೀತಿಯ ಅಂತರಿಕ್ಷ ಚಟುವಟಿಕೆಗಳಲ್ಲಿ ಖಾಸಗಿ ವಲಯ ತೊಡಗಿಸಿಕೊಳ್ಳುವುದಕ್ಕೆ ಅನುಮತಿ ನೀಡಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದೇ ವೇಳೆ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಹಾಗೂ ಮಂಜೂರಾತಿ ಕೇಂದ್ರ (ಇನ್‌-ಸ್ಪೇಸ್‌) ಸ್ಥಾಪನೆಗೆ ಅನುಮತಿ ನೀಡಿದೆ.

ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!

ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರಿಗೆ ಇದೀಗ ಭಾರಿ ಬೇಡಿಕೆ ಇದೆ. ಕಡಿಮೆ ನಿರ್ವಹಣಾ ವೆಚ್ಚ ಮಾತ್ರವಲ್ಲ, ಭವಿಷ್ಯದ ವಾಹನ ಎಂದೇ ಗುರಿತಿಸಿಕೊಂಡಿದೆ. ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ ವಿದ್ಯಾರ್ಥಿ ನೂತನ ಪೋರ್ಟೇಬಲ್ ಎಲೆಕ್ಟ್ರಿಕ್ ಬೈಕ್ ಆವಿಷ್ಕರಿಸಿದ್ದು, ನೂತನ ಬೈಕ್‌ಗೆ ಭಾರಿ ಬೇಡಿಕೆ ಬರುತ್ತಿದೆ.