'ತುಟಿ ಬಿಚ್ಚಬೇಡಿ' ಸಚಿವರಿಗೆ ಬಿಎಸ್‌ ಯಡಿಯೂರಪ್ಪ ತಾಕೀತು!

ಲಾಕ್ ಡೌನ್ ಗೊಂದಲದ ಹೇಳಿಕೆ ನೀಡಬೇಡಿ/ ಸಚಿವರಿಗೆ ಸಿಎಂ ಖಡಕ್ ಸೂಚನೆ/ ಇನ್ನೊಂದು ಸುತ್ತಿನ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸೋಣ/ ಸಾರ್ವಜನಿಕರಿಗೆ ಗೊಂದಲವಾಗದಂತೆ ನೋಡಿಕೊಳ್ಳಿ

No more lockdown or curfew in Karnataka says CM BS Yediyurappa

ಬೆಂಗಳೂರು(ಜೂ. 25)  ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.  ಶುಕ್ರವಾರ ಸಹ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡೋಣ ಎಂದಿದ್ದಾರೆ.

ಕೋವಿಡ್ 19 ವಿಚಾರವಾಗಿ ತಜ್ಞರಿಂದ ಅಂತಿಮ ವರದಿ ಕೂಡ ಬರಬೇಕಿದೆ. ಹೀಗಾಗಿ ಈಗಲೇ ಲಾಕ್ ಡೌನ್ ಮಾಡುವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ.  ಸಚಿವರಾದ ನೀವು ಭಿನ್ನ ಭಿನ್ನ ಹೇಳಿಕೆಗಳನ್ನ ನೀಡಬೇಡಿ ಎಂದು ತಿಳಿಸಿದ್ದಾರೆ.

ಬೆಂಗಳೂರು ಸೀಲ್ ಡೌನ್ ಆಗಬಾರದೆಂದರೆ ಹೀಗೆ ಮಾಡಬೇಕು

SSLC ಪರೀಕ್ಷೆ ಆರಂಭವಾಗಿದೆ. ಲಾಕ್ ಡೌನ್ ವದಂತಿಗಳಿಂದ ವಿದ್ಯಾರ್ಥಿಗಳಲ್ಲಿ, ಪಾಲಕಲ್ಲಿ ಆತಂಕ ಸೃಷ್ಟಿಯಾಗುತ್ತದೆ ಹಾಗಾಗಿ ಗೊಂದಲ ಎಬ್ಬಿಸುವ ಹೇಳಿಕೆ ನೀಡಬೇಡಿ ಎಂದು ತಿಳಿಸಿದ್ದಾರೆ.

ಮಾಡ್ತೀವಿ ನೋಡ್ತೀವಿ ರೆಡಿ ಇದ್ದೀವಿ‌ ಅಲ್ಲ.  ಮಾಡಬೇಕು ನೋಡಬೇಕು ರೆಡಿ ಇರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಖಡಕ್ ಆಗಿ ಹೇಳಿದ್ದಾರೆ.  ಮುಂದಿನ 15 ದಿನಗಳ ಪ್ಲಾನ್ ರೆಡಿ‌ ಮಾಡಿ ಕೊಡಿ . ಎಲ್ಲಾ ಸೌಲಭ್ಯ ಕೋಡೋಕೆ ನಾನ್ ರೆಡಿ ಯಾವುದಕ್ಕೂ ಕೊರತೆ ಆಗಬಾರದು ಎಂದು ಸಿಎಂ ಸೂಚಿಸಿದ್ದಾರೆ. 

"

Latest Videos
Follow Us:
Download App:
  • android
  • ios