ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!

ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರಿಗೆ ಇದೀಗ ಭಾರಿ ಬೇಡಿಕೆ ಇದೆ. ಕಡಿಮೆ ನಿರ್ವಹಣಾ ವೆಚ್ಚ ಮಾತ್ರವಲ್ಲ, ಭವಿಷ್ಯದ ವಾಹನ ಎಂದೇ ಗುರಿತಿಸಿಕೊಂಡಿದೆ. ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ ವಿದ್ಯಾರ್ಥಿ ನೂತನ ಪೋರ್ಟೇಬಲ್ ಎಲೆಕ್ಟ್ರಿಕ್ ಬೈಕ್ ಆವಿಷ್ಕರಿಸಿದ್ದು, ನೂತನ ಬೈಕ್‌ಗೆ ಭಾರಿ ಬೇಡಿಕೆ ಬರುತ್ತಿದೆ.

Japana student developed Portable Inflatable MObility electric scooter

ಜಪಾನ್(ಜೂ.25): ಎಲೆಕ್ಟ್ರಿಕ್ ವಾಹನಗಳು ಭವಿಷ್ಯ ವಾಹನ ನಿಜ. ಆದರೆ ಕೈಗೆಟುಕುವ ದರದಲ್ಲಿಲ್ಲ. ಹೀಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೀಗ ಜಪಾನ್‌ನ ಟೊಕಿಯೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಾಗಿದೆ. ಸಾಗಿಸಬಲ್ಲ ಹಾಗೂ ಆಕರ್ಷಕ ಪೊರ್ಟೇಬಲ್ ಅಂಡರ್ ಇನ್‌ಫ್ಲಟೇಬಲ್ ಮೋಬಿಲಿಟಿ ಸ್ಕೂಟರ್ ನಿರ್ಮಿಸಲಾಗಿದೆ.

10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!.

ಇನ್‌ಫ್ಲಟೇಬಲ್ ಮೋಬಿಲಿಟಿ ಸ್ಕೂಟರ್  ವಿಶೇಷತೆ ಎಂದರೆ ಈ ಸ್ಕೂಟರ್ ಒಬ್ಬನೇ ಎತ್ತಿಕೊಂಡು ಬೇರೆಡೆಗೆ ಸಾಗಿಸಬಹುದು. ಬಟ್ಟೆ ತುಂಬಿದ ಸೂಟ್ ಕೇಸ್ ರೀತಿ ಮಡಚಿ ಸ್ಕೂಟರ್ ಸಾಗಿಸಬಹುದು. ಈ ನೂತನ ಆವಿಷ್ಕರಣೆಗೆ ಪೊಯಿಮೊ ಸ್ಕೂಟರ್ ಎಂದು ಹೆಸರಿಡಲಾಗಿದೆ.

ದಾಖಲೆ ಬರೆದ ಇಟಾಲ್‌ಜೆಟ್ ಸ್ಕೂಟರ್, ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್!.

ಈ ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 20 ಕಿ.ಮೀ ಮೈಲೇಜ್ ನೀಡಲಿದೆ. ಗರಿಷ್ಠ ವೇಗ 20 ಕಿ.ಮೀ ಪ್ರತಿ ಗಂಟೆಗೆ. ಚಾರ್ಜ್ ಬಳಿಕ ಪೋರ್ಟೇಬಲ್ ಚಾರ್ಜಿಂಗ್ ಪೋರ್ಟ್ ಸ್ಕೂಟರ್ ಒಳಗಿಡವು ವ್ಯವಸ್ಥೆ ಇದೆ. ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಹೆಚ್ಚಿನ ಮೈಲೇಜ್‌ಗೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಬಳಸಬೇಕು. ಸದ್ಯ ಟೋಕಿಯೋ ವಿದ್ಯಾರ್ಥಿ ಈ ಸ್ಕೂಟರ್ ಅನಾವರಣ ಮಾಡಿದ್ದು, ಜಪಾನ್ ಎಲೆಕ್ಟ್ರಿಕ್ ಕಂಪನಿಗಳು  ಪೇಟೆಂಟ್ ಖರೀದಿಗೆ ವಿದ್ಯಾರ್ಥಿ ಹಿಂದೆ ಬಿದ್ದಿದೆ.

Latest Videos
Follow Us:
Download App:
  • android
  • ios