ಏಳು ತಿಂಗಳಲ್ಲಿ ಬೆಂಗ್ಳೂರಿನ ಖಾಸಗಿ, ಸರ್ಕಾರಿ ಆಸ್ಪತ್ರೆಯಲ್ಲಿ 23 ತಾಯಂದಿರ ಮರಣ!
ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ ನಗರದಲ್ಲಿ ಹೆರಿಗೆ ಪ್ರಕರಣಗಳ ಕುರಿತು ಆಡಿಟ್ ನಡೆಸಲಾಯಿತು. ಈ ವೇಳೆ ನಗರದ ಖಾಸಗಿ, ಸರ್ಕಾರಿ ಹಾಗೂ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ 59000 ಹೆರಿಗೆ ಆಗಿವೆ. ಈ ವೇಳೆ 23 ತಾಯಿ ಮರಣ ಪ್ರಕರಣ ಆಗಿವೆ. ಈ ಪೈಕಿ 4 ತಾಯಿ ಮರಣ ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ, ಉಳಿದ 19 ಪ್ರಕರಣಗಳ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿವೆ.
ಬೆಂಗಳೂರು(ನ.27): ಬಿಬಿಎಂಪಿ ವ್ಯಾಪ್ತಿಯ ಖಾಸಗಿ, ಸರ್ಕಾರಿ ಹಾಗೂ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯಲ್ಲಿ ಏಪ್ರಿಲ್‌ನಿಂದ ಈವರೆಗೆ 59000 ಹೆರಿಗೆ ಆಗಿದ್ದು, ಈ ಪೈಕಿ 23 ಮಂದಿ ತಾಯಿ ಮರಣ ಸಂಭವಿಸಿವೆ.
ಪ್ರತಿ 3, 6 ತಿಂಗಳಿಗೊಮ್ಮೆ ತಾಯಿ ಮರಣ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಹಾಗೂ ಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಡೆತ್ ಆಡಿಟ್ ನಡೆಸಲಾಗುತ್ತದೆ.
ಇತ್ತೀಚೆಗೆ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ ನಗರದಲ್ಲಿ ಹೆರಿಗೆ ಪ್ರಕರಣಗಳ ಕುರಿತು ಆಡಿಟ್ ನಡೆಸಲಾಯಿತು. ಈ ವೇಳೆ ನಗರದ ಖಾಸಗಿ, ಸರ್ಕಾರಿ ಹಾಗೂ ಬಿಬಿಎಂಪಿ ಹೆರಿಗೆ ಆಸ್ಪತ್ರೆ ಯಲ್ಲಿ 59000 ಹೆರಿಗೆ ಆಗಿವೆ. ಈ ವೇಳೆ 23 ತಾಯಿ ಮರಣ ಪ್ರಕರಣ ಆಗಿವೆ. ಈ ಪೈಕಿ 4 ತಾಯಿ ಮರಣ ಪ್ರಕರಣಗಳು ಖಾಸಗಿ ಆಸ್ಪತ್ರೆ ಯಲ್ಲಿ, ಉಳಿದ 19 ಪ್ರಕರಣಗಳ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿವೆ.
ಬೆಳಗಾವಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?, ಬಿಮ್ಸ್ ಎದುರು ಕುಟುಂಬಸ್ಥರಿಂದ ಪ್ರತಿಭಟನೆ
ಪಾಲಿಕೆಯ ಆಸ್ಪತ್ರೆಯಲ್ಲಿ ಯಾವುದೇ ಪ್ರಕರಣ ಆಗಿಲ್ಲ. ಈ ಕುರಿತು ವಿವರಣೆ ನೀಡಿದ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ಮದಿನಿ, ತಾಯಿ ಮರಣ ಕುರಿತು ಡೆತ್ ಆಡಿಟ್ ನಲ್ಲಿ ಯಾವ ಕಾರಣದಿಂದ ಮರಣ ಸಂಭ ವಿಸಿದೆ.
ಮರಣಕ್ಕೆ ಚಿಕಿತ್ಸೆ ಸಮಸ್ಯೆಯೇ, ರೋಗಿಯ ಆರೋಗ್ಯ ಸಮಸ್ಯೆಯೇ ಕುರಿತು ಪರಿಶೀಲನೆ ನಡೆಸಲಾಗುವುದು. ಏಪ್ರಿಲ್‌ನಿಂದ ಈವರೆಗೆ 23 ತಾಯಿ ಮರಣ ನಗರದಲ್ಲಿ ಆಗಿವೆ. ಇದು ರಾಜ್ಯ ಹಾಗೂ ದೇಶದ ತಾಯಿ ಮರಣ ಪ್ರಕ ರಣಕ್ಕೆ ಹೋಲಿಕೆ ಮಾಡಿದರೆ, ಅತ್ಯಂತ ಕಡಿಮೆ ಆಗಿದೆ.
ನಗರದಲ್ಲಿ ಉತ್ತಮ ಆರೋಗ್ಯ ಸೇವೆಗಳು ದೊರೆಯುತ್ತಿರುವ ಹಿನ್ನೆಲೆ ತಾಯಿ ಮರಣದಲ್ಲಿ ಇಳಿಕೆ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್‌ನಿಂದ ಈವರೆಗೆ 90000 ಮಂದಿ ಗರ್ಭಿಣಿಯರು ನೋಂದಣಿ ಮಾಡಿಕೊಂ ಡಿದ್ದಾರೆ. ಹೈರಿಸ್ಕ್ ಇರುವ ಗರ್ಭಿಣಿಯರಿಗೆ ತಿಂಗಳಿಗೆ 2 ಬಾರಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ದುರಂತ: ಮತ್ತೊಬ್ಬ ಬಾಣಂತಿ ಸಾವು
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿ ಕೊಂಡ ಬಳಿಕ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಹೊಸಪೇಟೆ ಮೂಲದ ಮುಸ್ಕಾನ್ (22) ಮೃತರು. 15 ದಿನಗಳ ಅಂತರದಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
Post-Pregnancy: ಅಯ್ಯಾ ಪುರುಷಸಿಂಹ, ಬಾಣಂತಿ ಹೆಂಡತಿಯನ್ನು ಸೆಕ್ಸ್‌ಗಾಗಿ ಒತ್ತಾಯಿಸಬೇಡ!
ನ.10ರಂದು ಮುಸ್ಕಾನ್ ಅವರು ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡಿದ್ದರು. ಬಳಿಕ ಆರೋಗ್ಯ ದಲ್ಲಿ ಏಕಾಏಕಿ ಏರುಪೇರಾಗಿತ್ತು. ಬಳಿಕ ನ.11ರಂದು ಬಿಮ್ಸ್‌ಗೆ ದಾಖಲಿಸಲಾಗಿತ್ತು. ಬಿಮ್ಸ್‌ನಲ್ಲಿ 1 ದಿನ ಇದ್ದು ಚಿಕಿತ್ಸೆ ಪಡೆದಿದ್ದ ಮುಸ್ಕಾನ್, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸಲು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖ ಲಿಸಿದ್ದರು. ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಕಳೆದ ನ.7-13 ರವರೆಗೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾದ 9 ಬಾಣಂತಿ ಯರ ಪೈಕಿ ಮುಸ್ಕಾನ್ ಕೂಡ ಒಬ್ಬರು. ಈ ಮೊದಲು ಲಲಿತಮ್ಮ, ನಂದಿನಿ, ರೋಜಾ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಣಂತಿ ಸುಮೆಯಾ ಎಂಬುವರು ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.