ವಿವಾಹಿತ ಮಹಿಳೆಯ ಜೊತೆ ಮಾತನಾಡಿದ್ದಕ್ಕೆ 22 ವರ್ಷದ ಯುವಕನನ್ನು ಹೊಡೆದು ಕೊಂದಂತಹ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು ಸಂತ್ರಸ್ತ ಯುವಕನಿಗೆ ಹೊಸ ವರ್ಷದ ಪಾರ್ಟಿ ಮಾಡೋಣ ಎಂದು ನಂಬಿಸಿ ಕರೆದು ಈ ಕೃತ್ಯವೆಸಗಿದ್ದಾರೆ.

ವಿವಾಹಿತ ಮಹಿಳೆಯ ಜೊತೆ ಮಾತನಾಡಿದ್ದಕ್ಕೆ 22 ವರ್ಷದ ಯುವಕನನ್ನು ಹೊಡೆದು ಕೊಂದಂತಹ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತ ಮಹಿಳೆಯ ಸೋದರ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯವೆಸಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ಸಂತ್ರಸ್ತ ಯುವಕನಿಗೆ ಹೊಸ ವರ್ಷದ ಪಾರ್ಟಿ ಮಾಡೋಣ ಎಂದು ನಂಬಿಸಿ ಕರೆದು ಈ ಕೃತ್ಯವೆಸಗಿದ್ದಾರೆ.

ವಿವಾಹಿತ ಮಹಿಳೆಯ ಜೊತೆ ಆ ಯುವಕ ಫೋನ್‌ನಲ್ಲಿ ಮಾತನಾಡುವುದಕ್ಕೆ ಮಹಿಳೆಯ ಸೋದರ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಹನುಮಾನ್‌ಗಢದ ಪಾಲರಾಮ್ ಕೊಲೆಯಾದ ಯುವಕ. ಹೊಸ ವರ್ಷದ ಪಾರ್ಟಿ ಮಾಡುವುದಾಗಿ ಆತನನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯವೆಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸದರ್ ಸ್ಟೇಷನ್‌ ಹೌಸ್ ಅಧಿಕಾರಿ ಸುಭಾಷ್ ಚಂದ್ರ ಹೇಳಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ತನ್ನ ಸ್ಣೇಹಿತರ ಜೊತೆ ಸೇರಿಕೊಂಡು ಸಂತ್ರಸ್ತ ಪಲರಾಮ್‌ನನ್ನು ಡಿಸೆಂಬರ್ 31ರ ರಾತ್ರಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನಿಗೆ ಮದ್ಯ ಕುಡಿಸಿದ್ದಾರೆ. ಆತ ಕುಡಿದು ಸಂಪೂರ್ಣ ಪಾನಮತ್ತನಾದ ನಂತರ ಪೈಪ್‌ನಿಂದ ಆತನನ್ನು ಥಳಿಸಿದ್ದಾರೆ ಎಂದು ಎಸ್‌ಹೆಚ್‌ಒ ಹೇಳಿದ್ದಾರೆ.

ಇದನ್ನೂ ಓದಿ: 2026 ರಲ್ಲಿ 10 ರಿಂದ 12 ಮಿಲಿಯನ್ ಹೊಸ ಉದ್ಯೋಗಿಗಳ ನೇಮಿಸಿಕೊಳ್ಳಲಿವೆ ಈ ಭಾರತೀಯ ಕಂಪನಿಗಳು

ಪಲರಾಮ್‌ನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆರೋಪಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಆತ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ನಂತರ ಆರೋಪಿಗಳು ಆತನ ಶವವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಹನುಮಾನ್‌ಗಢದ ಶ್ರೀ ಗಂಗಾನಗರ ಹೆದ್ದಾರಿಯ ಸೆಕ್ಟರ್ 17ರಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪಲರಾಮ್‌ನ ಶವ ಪತ್ತೆಯಾಗಿದೆ. ದಾರಿಹೋಕರು ಕಾರಿನಲ್ಲಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪಲರಾಮ್ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕರೆದೊಯ್ದು ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ