1 ಬಿಜೆಪಿ ನಾಟಕ ಮಂಡಳಿಯ ಕಾಮಿಡಿ ಪೀಸ್ ಕಟೀಲ್: ಸಿದ್ದರಾಮಯ್ಯ ತಿರುಗೇಟು


ಡಿಕೆಶಿ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮಾಜಿ ಸಿಎಂ ಟ್ವಿಟರ್ ನ್ಲಲೇ ಛಾಟಿ ಬೀಸಿದ್ದಾರೆ. ರಾಜ್ಯ ಬಿಜೆಪಿಗೆ ಒಂದು ಕಾಮಿಡಿ ಪಾತ್ರದ ಅಗತ್ಯವಿತ್ತು. ಹೀಗಾಗಿ ನಾಟಕ ಮಂಡಳಿಗೆ ಕಟೀಲ್ ರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.


2 ಕಪ್ಪು ಕುಳಗಳಿಗೆ ಡವ ಡವ ಶುರು, ಅಕೌಂಟ್ ಕ್ಲೋಸ್ ಮಾಡಿದ್ರೂ ತಪ್ಪದು ಕಷ್ಟ!

ಅಪಾರ ಪ್ರಮಾಣದ ಕಪ್ಪು ಹಣ ಸಂಪಾದಿಸಿ, ಅದನ್ನು ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಕರೆಯಲಾಗುತ್ತಿದ್ದ ಸ್ವಿಸ್‌ ಬ್ಯಾಂಕುಗಳಲ್ಲಿ ದಾಸ್ತಾನು ಮಾಡುವ ಚಾಳಿ ಹೊಂದಿದ್ದ ಕಾಳಧನಿಕರಿಗೆ ಈಗ ಆತಂಕ ಶುರುವಾಗಿದೆ. ಭಾರತ ಹಾಗೂ ಸ್ವಿಜರ್ಲೆಂಡ್‌ ನಡುವೆ ಏರ್ಪಟ್ಟಿರುವ ಒಪ್ಪಂದದ ಅನುಸಾರ, ತಮ್ಮಲ್ಲಿ ಖಾತೆ ಹೊಂದಿರುವ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಯನ್ನು ಮೊದಲ ಬಾರಿಗೆ ಇದೇ ತಿಂಗಳು ಸ್ವಿಸ್‌ ಬ್ಯಾಂಕುಗಳು ಭಾರತಕ್ಕೆ ಹಸ್ತಾಂತರಿಸಲಿವೆ.

3 ‘ನಾನು ಇಂದಿರಾ ಗಾಂಧಿ ಅವರನ್ನೂ ಬಿಟ್ಟಿರಲಿಲ್ಲ : ದಂಡ ವಸೂಲಿ ಮಾಡಿದ್ದೆ’

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಸರ್ಕಾರದ ಕ್ರಮ ತಪ್ಪು ಅಲ್ಲ. ದುಬಾರಿ ದಂಡದಿಂದ ಜನರಲ್ಲಿ ಭಯ ಮೂಡುತ್ತದೆ. ಹೀಗಾಗಿ ಇಂತಹ ಕಠಿಣ ನಿಯಮಗಳಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಪುದುಚೆರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

4 ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ನೂತನ ಸ್ಯಾಲರಿ ಕೇಳಿದರೆ ಒಂದು ಬಾರಿ ದಂಗಾಗುವುದು ಖಚಿತ. ವಿಶ್ವದ ಇತರ ಯಾವ ಕ್ರಿಕೆಟ್ ಕೋಚ್‌ಗೂ ಈ ಮಟ್ಟದ ಸ್ಯಾಲರಿ ಇಲ್ಲ. ಅದರಲ್ಲೂ 2ನೇ ಅವಧಿಗೆ ಕೋಚ್ ಆಗಿರುವ ಶಾಸ್ತ್ರಿ ಸ್ಯಾಲರಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. 1983ರ ವಿಶ್ವಕಪ್ ಟೂರ್ನಿ ಗೆದ್ದ ತಂಡದ ಸದಸ್ಯ ಶಾಸ್ತ್ರಿ ಒಟ್ಟು 2,100 ರೂಪಾಯಿ ವೇತನ ಪಡೆದಿದ್ದರು. ಇದೀಗ ಊಹಿಸಲು ಅಸಾಧ್ಯವಾದ ಮೊತ್ತ ಸಂಭಾವನೆ ಪಡೆಯುತ್ತಿದ್ದಾರೆ. 


5 US ಓಪನ್ 2019 ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್

ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ಸ್ಪೇನ್’ನ ರಾಫೆಲ್ ನಡಾಲ್ 2019ನೇ ಸಾಲಿನ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾ ಡಾನಿಲ್‌ ಮೆಡ್ವೆಡೆವ್‌ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 33 ವರ್ಷದ ನಡಾಲ್ ಸಿಂಗಲ್ಸ್’ನಲ್ಲಿ ಗೆದ್ದ 19ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಇದಾಗಿದೆ.  


6 ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!

ಕರಾವಳಿ ಬೆಡಗಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಸೌತ್ ಇಂಡಿಯನ್ ಬಹುಬೇಡಿಕೆ ನಟಿ. ಬಾಹುಬಲಿ, ಅರುಂಧತಿ, ಸೂಪರ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಸಿನಿಮಾಗಳನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ಚೂಸಿ. ಮಾಡುವ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಪಾತ್ರಕ್ಕೆ ತಕ್ಕಂತೆ ದೇಹದ ತೂಕವನ್ನು ಸರಿದೂಗಿಸುವ ಈ ನಟಿಯ ಅಂದ ಪದಗಳ ಬದಲು ಫೋಟೋಗಳು ಕಟ್ಟಿಕೊಡುತ್ತೆ ಸ್ಪಷ್ಟ ಚಿತ್ರಣ.


7 ‘ಪೈಲ್ವಾನ್’ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿವೀಲ್

ಕಿಚ್ಚ ಸುದೀಪ್ ಪೈಲ್ವಾನ್ ಆಗಿದ್ದು ಹೇಗೆ? ಚಿತ್ರದ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಬರೋಬ್ಬರಿ 25 ದಿನಗಳ ಕಾಲ ಬಾಕ್ಸಿಂಗ್ ಶೂಟಿಂಗ್ ನಡೆದಿತ್ತು. ಇಂಡಸ್ಟ್ರಿಯ ಇಷ್ಟು ದೊಡ್ಡ ಬಾಕ್ಸಿಂಗ್ ಇದೇ ಫಸ್ಟ್ ಟೈಂ. ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

8 'ಮಗಳು ಸ್ಕೂಟಿ ಓಡಿಸ್ತಾಳೆ ಅಂತ ಬೀಗಬೇಡಿ'..!

ಮಕ್ಕಳು ಕೇಳಿದ ತಕ್ಷಣ ಸ್ಕೂಟಿ ಕೊಡಿಸಿ ಮಾರ್ಕೆಟ್‌ಗೆ ಹೋಗೋದು, ಬಸ್‌ಸ್ಟಾಪ್‌ಗೆ ಡ್ರಾಪ್ ಮಾಡಿಸಿಕೊಂಡು ಮಗ, ಮಗಳು ಸ್ಕೂಟಿ ಓಡಿಸ್ತಿದ್ದಾಳೆ ಅಂತ ಬೀಗುತ್ತಿದ್ದವರು ಸ್ವಲ್ಪ ಆಲೋಚಿಸಬೇಕಿದೆ. ಹೊಸ ಸಂಚಾರಿ ನಿಯಮಗಳು ಬಂದಿದ್ದು, ಚಾಲನಾ ಪರವಾನಗಿ ಸೇರಿ ಇತರ ದಾಖಲೆ ಇಲ್ಲದೆ ಓಡಾಡಿದ್ರೆ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

9 ಚಂದ್ರಯಾನ 2: ಕಳೆದುಕೊಂಡಿದ್ದು ಅತ್ಯಲ್ಪ, ದೊರೆತಿದ್ದು ಅತ್ಯಧಿಕ!

ಸೆಪ್ಟೆಂಬರ್ 6 ಮತ್ತು 7 ರ ರಾತ್ರಿಯ ಒಂದು ಗಂಟೆಯ ಸಮಯ, ಇಡೀ ಜಗತ್ತು ಭಾರತದತ್ತ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕ್ಷಣಗಳು. ಬೆಂಗಳೂರಿನ ಇಸ್ಟ್ರಾಕ್‌ನ ಮಿಶನ್ ಕಂಟ್ರೋಲ್ ಕಾಂಪ್ಲೆಕ್ಸ್ ನಲ್ಲಿ ಆತಂಕ ಕುತೂಹಲಗಳು ಮನೆ ಮಾಡಿದ್ದವು. ಈ ಪಯಣದಲ್ಲಿ ನಾವು ಕಳೆದುಕೊಂಡಿದ್ದು ಅತ್ಯಲ್ಪ, ಆದರೆ ಸಂಪಾದನೆ ಅತ್ಯಧಿಕವಾಗಿದೆ.

10 ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 86,500 ರು. ದಂಡ

ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಟ್ರಕ್‌ ಚಾಲಕರೊಬ್ಬರಿಗೆ ಒಡಿಶಾ ಸಂಬಾಲ್‌ಪುರ ಜಿಲ್ಲೆಯಲ್ಲಿ ಬರೋಬ್ಬರಿ 86,500 ರು. ದಂಡ ವಿಧಿಸಲಾಗಿದೆ. ನೂತನ ಮೋಟಾರ್‌ ಕಾಯ್ದೆ ಜಾರಿಯಾದ ಬಳಿಕ ವ್ಯಕ್ತಿಯೊಬ್ಬರಿಗೆ ವಿಧಿಸಲಾದ ಅತಿಹೆಚ್ಚು ಪ್ರಮಾಣದ ದಂಡದ ಮೊತ್ತ ಇದಾಗಿದೆ ಎಂದು ಹೇಳಲಾಗಿದೆ