ವಿವಾದಿತ ಪ್ರದೇಶದಿಂದ ಹಿಂದೆ ಸರಿದ ಚೀನಾ: ಡ್ರ್ಯಾಗನ್‌ ಟೆಂಟ್‌ಗಳೂ ಸ್ಥಳಾಂತರ!

ಸದ್ಯ ವಿವಾದಿತ ಗಾಲ್ವಾನ್​ ಕಣಿವೆಯ ಪ್ರದೇಶ ಮತ್ತಿತರೆ ಎರಡು ಪ್ರದೇಶಗಳಿಂದ ಚೀನಾ ಸೇನೆ ಹಿಂದೆ ಸರಿದಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಕೊಂಚ ಮಟ್ಟಿಗೆ ಬಗೆಹರಿದಂತಾಗಿದೆ.

ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ನೇಪಾಳ ಪ್ರಧಾನಿ 

ಭಾರತದ ಭೂ ಪ್ರದೇಶವನ್ನು ಒಳಗೊಂಡ ಹೊಸ ನಕಾಶೆಯನ್ನು ಬಿಡುಗಡೆ ಮಾಡಿ ಆಕ್ರೋಶಕ್ಕೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಈಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪ ಕಮಲ್‌ ದಹಲ್‌ ‘ಪ್ರಚಂಡ’ ನೇತೃತ್ವದ ಬಣ ಓಲಿ ವಿರುದ್ಧ ಬಂಡಾಯ ಸಾರಿದೆ. 

2021ರವರೆಗೂ ಕೊರೋನಾ ಲಸಿಕೆ ಡೌಟ್‌: ಕೇಂದ್ರ ಸರ್ಕಾರ!

ಇದೇ ಆ.15ರೊಳಗೆ ಕೊರೋನಾ ಲಸಿಕೆ ಬಿಡುಗಡೆಗೆ ಸಜ್ಜಾಗಿರುವ ಕುರಿತ ಐಸಿಎಂಆರ್‌ ಹೇಳಿಕೆಯಿಂದ ಸೃಷ್ಟಿಯಾಗಿದ್ದ ವಿವಾದದ ಬೆನ್ನಲ್ಲೇ, 2021ಕ್ಕೂ ಮೊದಲು ವಿಶ್ವದ ಯಾವುದೇ ಭಾಗದಿಂದಲೂ ಕೊರೋನಾಗೆ ಔಷಧ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ಕೇಂದ್ರ ವಿಜ್ಞಾನ ಸಚಿವಾಲಯ ಅಚ್ಚರಿಯ ಹೇಳಿಕೆ ನೀಡಿದೆ. ಇದು ಆ.15ರೊಳಗೆ ವಿಶ್ವದ ಮೊದಲ ಕೊರೋನಾ ಲಸಿಕೆ ಭಾರತದಲ್ಲೇ ಸಿದ್ಧವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಉಂಟು ಮಾಡಿದೆ.

ತನ್ನ ಉದ್ಯೋಗಿಯನ್ನೇ ಕಿಡ್ನಾಪ್ ಮಾಡಿ ಜನನೇಂದ್ರಿಯಕ್ಕೆ ಸಾನಿಟೈಸರ್ ಸ್ಪ್ರೆ!

ಕೊರೋನಾ  ಎಫೆಕ್ಟ್ ಒಂದೆಲ್ಲಾ ಒಂದು ಬೇರೆ ಬೇರೆ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ  30  ವರ್ಷದ  ಉದ್ಯೋಗಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ.

ಫ್ಯಾಮಿಲಿ ಜೊತೆ ಮನಾಲಿಯಲ್ಲಿ ಮಸ್ತಿ ಮಾಡುತ್ತಿರುವ ಕಂಗನಾ

ಕಂಗನಾ ರಣಾವತ್‌ ಪ್ರಸ್ತುತ ತನ್ನ ಕುಟುಂಬದೊಂದಿಗೆ ಮನಾಲಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಕಂಗನಾ ಬೆಟ್ಟಗಳು ಮತ್ತು ಸುಂದರವಾದ ಬಯಲು ಪ್ರದೇಶಗಳ ನಡುವೆ  ಇಡೀ ಕುಟುಂಬದೊಂದಿಗೆ ಪಿಕ್‌ನಿಕ್‌ ಹೋಗಿದ್ದರು. 

ಬಂದಿದೆ ದೇಶದ ಮೊದಲ ದೇಸಿ ಸೋಷಿಯಲ್‌ ಮೀಡಿಯಾ ಆ್ಯಪ್‌ ‘ಎಲಿಮೆಂಟ್ಸ್‌’!

ಚೀನಾದ ಆ್ಯಪ್‌ಗಳಿಗೆ ನಿಷೇಧ ಹೇರಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದ ದೇಸಿ ಆ್ಯಪ್‌ಗಳನ್ನು ರೂಪಿಸಲು ಕರೆ ನೀಡಿದ ಬೆನ್ನಲ್ಲೇ ದೇಶದ ಮೊದಲ ಮೇಡ್‌ ಇನ್‌ ಇಂಡಿಯಾ ಸೋಷಿಯಲ್‌ ಮೀಡಿಯಾ ಆ್ಯಪ್‌ ಬಿಡುಗಡೆಯಾಗಿದೆ. ‘ಎಲಿಮೆಂಟ್ಸ್‌’ ಹೆಸರಿನ ಈ ಆ್ಯಪ್‌ನಲ್ಲಿ ಆಡಿಯೋ, ವಿಡಿಯೋ ಶೇರ್‌ ಮಾಡಿಕೊಳ್ಳುವುದು, ಸಂದೇಶ ವಿನಿಮಯ, ವಸ್ತುಗಳ ಮಾರಾಟ, ಸ್ನೇಹಿತರ ಜೊತೆ ಸಂಪರ್ಕದಿಂದ ಹಿಡಿದು ಹಣ ವರ್ಗಾವಣೆಯವರೆಗೆ ಹತ್ತಾರು ಚಟುವಟಿಕೆಗಳನ್ನು ನಡೆಸಬಹುದು.

i20, ಪೊಲೋ ಹಿಂದಿಕ್ಕಿ ದಾಖಲೆ ಬರೆದ ಟಾಟಾ ಅಲ್ಟ್ರೋಜ್ ಕಾರು!

 ಆಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಎಲ್ಲಕ್ಕಿಂತ ಮುಖ್ಯ ಗರಿಷ್ಠ ಸುರಕ್ಷತೆ ನೀಡುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿದೇಶಿ ಕಾರುಗಳು ಅಬ್ಬರದ ನಡುವೆ ದೇಶಿಯ ಟಾಟಾ ಇದೀಗ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ಟಾಟಾ ಅಲ್ಟ್ರೋಜ್ ಇದೀಗ ಹ್ಯುಂಡೈ ಐ20, ಫೋಕ್ಸ್‌‌ವ್ಯಾಗನ್ ಪೊಲೋ ಕಾರನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!...

ಕಲಿಯುವ ಛಲವೊಂದಿದ್ದರೆ ಎಂತಹ ಅಡೆತಡೆಗಳನ್ನೂ ದಾಟಿ ಸಾಧನೆ ಮಾಡಬಹುದು ಎಂಬುದನ್ನು ಮಧ್ಯಪ್ರದೇಶದ ಬಾಲಕಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ.

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!...

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ನಿಂದ ಅತಿ ಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಅಮೆರಿಕ ಮತ್ತು ಬ್ರೆಜಿಲ್‌ ಬಳಿಕ ಭಾರತ ಈಗ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಿದೆ. ಭಾರತದಲ್ಲಿ ಭಾನುವಾರ ಒಂದೇ ದಿನ 23205 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 690349ಕ್ಕೆ ತಲುಪಿದೆ.

ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ 16 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಈ ನಟ?

ಬಿಗ್ ಬಾಸ್‌ ಸೀಸನ್ ಶುರು ಮಾಡಿ ಪ್ಲೀಸ್‌ ಎಂದು ಮನವಿ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಕಾದಿದೆ.  ಅದುವೇ ನಿರೂಪಕ ಬೇಡಿಕೆ ಇಟ್ಟಿರುವ ಸಂಭಾವನೆಯ ಮೊತ್ತ !