ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ನೇಪಾಳ ಪ್ರಧಾನಿ
ಭಾರತದ ಭೂ ಪ್ರದೇಶವನ್ನು ಒಳಗೊಂಡ ಹೊಸ ನಕಾಶೆಯನ್ನು ಬಿಡುಗಡೆ ಮಾಡಿ ಆಕ್ರೋಶಕ್ಕೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಈಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ನೇತೃತ್ವದ ಬಣ ಓಲಿ ವಿರುದ್ಧ ಬಂಡಾಯ ಸಾರಿದೆ.
ಕಾಠ್ಮಂಡು (ಜು. 06): ಭಾರತದ ಭೂ ಪ್ರದೇಶವನ್ನು ಒಳಗೊಂಡ ಹೊಸ ನಕಾಶೆಯನ್ನು ಬಿಡುಗಡೆ ಮಾಡಿ ಆಕ್ರೋಶಕ್ಕೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಈಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ನೇತೃತ್ವದ ಬಣ ಓಲಿ ವಿರುದ್ಧ ಬಂಡಾಯ ಸಾರಿದೆ. ಇದೇ ವೇಳೆ ಅಧಿಕಾರ ಹಂಚಿಕೆ ಕುರಿತಂತೆ ಪ್ರಚಂಡ ಮತ್ತು ಓಲಿ ಬಣದ ನಡುವೆ ಭಾನುವಾರ ನಡೆದ ಮಾತುಕತೆ ವಿಫಲವಾಗಿದೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸಜ್ಜಿತ 4 ಡ್ರೋನ್ ನೀಡಲಿದೆ ಚೀನಾ; ಅಲರ್ಟ್ ಆದ ಭಾರತ!
ಇಂದು ಮತ್ತೊಂದು ಮಾತುಕತೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಓಲಿ ರಾಜೀನಾಮೆಗೆ ಈಗಾಗಲೇ ವಿರೋಧಿ ಬಣ ಒತ್ತಾಯಿಸಿದೆ. ಹೊಸ ನಕಾಶೆ ರಚಿಸಿದ್ದಕ್ಕೆ ತಮ್ಮ ಸರ್ಕಾರವನ್ನು ಉರುಳಿಸಲು ಭಾರತ ಯತ್ನಿಸುತ್ತಿದೆ ಎಂದು ಓಲಿ ಆರೋಪಿದ್ದರು. ಆದರೆ, ಈ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.