Asianet Suvarna News Asianet Suvarna News

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ 10ನೇ ಕ್ಲಾಸ್‌ ಟಾಪರ್‌!| ಬಸ್‌ ವ್ಯವಸ್ಥೆ ಇಲ್ಲದ ಕಾರಣ ಕಷ್ಟಪಟ್ಟಿದ್ದ ವಿದ್ಯಾರ್ಥಿನಿ

Madhya Pradesh Village girl who cycles 24km to school and back gets 98 5 percent
Author
Bangalore, First Published Jul 6, 2020, 8:37 AM IST

ಭಿಂಡ್‌ (ಜು.06): ಕಲಿಯುವ ಛಲವೊಂದಿದ್ದರೆ ಎಂತಹ ಅಡೆತಡೆಗಳನ್ನೂ ದಾಟಿ ಸಾಧನೆ ಮಾಡಬಹುದು ಎಂಬುದನ್ನು ಮಧ್ಯಪ್ರದೇಶದ ಬಾಲಕಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ.

ಶಾಲೆಗೆ ತೆರಳಲು ಬಸ್‌ ವ್ಯವಸ್ಥೆ ಇಲ್ಲದ ಕಾರಣ ಪ್ರತಿನಿತ್ಯ ಸುಮಾರು 24 ಕಿ.ಮೀ. ಸೈಕಲ್‌ ತುಳಿದು ಶಾಲೆಗೆ ಹೋಗಿ ಬರುತ್ತಿದ್ದ 15 ವರ್ಷದ ರೋಶನಿ ಭದೋರಿಯಾ ಎಂಬ ಬಾಲಕಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.98.75ರಷ್ಟುಅಂಕ ಗಳಿಸಿ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಛಂಬಲ್‌ ಪ್ರದೇಶದ ಭಿಂಡ್‌ ಜಿಲ್ಲೆಯ ಅಂಜೋಲ್‌ ಗ್ರಾಮದ ನಿವಾಸಿಯಾದ ರೋಶನಿ ಮಧ್ಯಪ್ರದೇಶ ರಾಜ್ಯದಲ್ಲಿ 8ನೇ ರಾರ‍ಯಂಕ್‌ ಪಡೆದಿದ್ದಾಳೆ.

ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!

ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ರೋಶನಿ ತಂದೆ ಪುರುಷೋತ್ತಮ್‌ ಭದೋರಿಯಾ, 8ನೇ ತರಗತಿಯವರೆಗೆ ತನ್ನ ಮಗಳು ಬಸ್‌ನಲ್ಲಿ ಶಾಲೆಗೆ ಹೋಗಿಬಂದು ಮಾಡುತ್ತಿದ್ದಳು. ಆದರೆ, 9ನೇ ತರಗತಿಗೆ ಅಂಜೋಲ್‌ನಿಂದ 12 ಕಿ.ಮೀ. ದೂರದ ಮೆಹಗಾಂವ್‌ ಗ್ರಾಮದ ಶಾಲೆಗೆ ಹೋಗಬೇಕಾಯಿತು. ಶಾಲೆಗೆ ಹೋಗಲು ಯಾವುದೇ ಬಸ್‌ ಸೌಲಭ್ಯ ಇರಲಿಲ್ಲ. ಇದೀಗ ಆಕೆ ಕಾಲೇಜಿಗೆ ಹೋಗಲು ಬಯಸುತ್ತಿದ್ದು, ಮಗಳಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ.

Follow Us:
Download App:
  • android
  • ios