ಡಿಸೆಂಬರ್ 6ರಿಂದ ಮಂದಿರ ನಿರ್ಮಾಣ ಶುರು: ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದರು!

ಸುಪ್ರೀಂಕೋರ್ಟ್'ನಲ್ಲಿ ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆ ಅಂತ್ಯ| ಅಯೋಧ್ಯೆ ಭೂವಿವಾದ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂಕೊರ್ಟ್| ಡಿ.06ರಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಎಂದ ಸಾಕ್ಷಿ ಮಹಾರಾಜ್| ಮಂದಿರ ಪರ ಸುಪ್ರೀಂಕೋರ್ಟ್ ತೀರ್ಪು ಎಂದ ಸಾಕ್ಷಿ ಮಹಾರಾಜ್| ಬಾಬ್ರಿ ಮಸೀದಿ ಧ್ವಂಸಗೊಳಿಸಿದ ದಿನದಂದೇ ಮಂದಿರ ನಿರ್ಮಾಣ ಕಾರ್ಯ ಆರಂಭ ಎಂದ ಬಿಜೆಪಿ ಸಂಸದ|

Sakshi Maharaj Says Ram temple construction from December 6

ಲಕ್ನೋ(ಅ.16): ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್'ನಲ್ಲಿ ಪ್ರತಿದಿನದ ವಿಚಾರಣೆ ಅಂತ್ಯವಾಗುತ್ತಿದ್ದಂತೇ, ರಾಮ ಮಂದಿರ ನಿರ್ಮಾಣದ ಮಾತುಗಳು ಕೇಳಿ ಬರತೊಡಗಿವೆ.

ಸುಪ್ರೀಂಕೋರ್ಟ್'ನಲ್ಲಿ ಇಂದು ಅಯೋಧ್ಯೆ ಪ್ರಕರಣದ ಕೊನೆಯ ದಿನದ ವಿಚಾರಣೆ ಮುಗಿಯುತ್ತಿದ್ದಂತೇ, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಇದೇ ಡಿ.06ರಿಂದ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ನವೆಂಬರ್‌ನಲ್ಲಿ ಅಯೋಧ್ಯೆ ತೀರ್ಪು ಹೊರ ಬೀಳಲಿದ್ದು, ಡಿ.06ರಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದಿದ್ದಾರೆ.

ಮಂದಿರ ನಿರ್ಮಾಣ ಪರವಾಗಿಯೇ ಸುಪ್ರೀಂಕೋರ್ಟ್ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಾಕ್ಷಿ ಮಹಾರಾಜ್, ತೀರ್ಪು ಪ್ರಕಟವಾಗುತ್ತಿದ್ದಂತೇ ಸಮಸ್ತ ಭಾರತೀಯರ ಕನಸನ್ನು ನನಸುಗೊಳಿಸುವ ಕಾರ್ಯ ಆರಂಭವಾಗಲಿರಿವುದಾಗಿ ಘೋಷಿಸಿದ್ದಾರೆ.

ಕಾಕತಾಳೀಯವಾಗಿ ಡಿ.06, 1992 ರಂದೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು.

Latest Videos
Follow Us:
Download App:
  • android
  • ios