ಭಾರತದ ಮುಸ್ಲಿಮರ ಸಂತೋಷಕ್ಕೆ ಕಾರಣ ಹೇಳಿದ RSS ಮುಖ್ಯಸ್ಥ| ‘ಭಾರತೀಯ ಮುಸ್ಲಿಮರು ಸುರಕ್ಷಿತವಾಗಿರಲು ಹಿಂದೂ ಸಂಸ್ಕೃತಿ ಕಾರಣ’|‘ಹಿಂದೂ ಸಂಸ್ಕೃತಿ ಭಾರತದಲ್ಲಿ ಜೀವಿಸುತ್ತಿರುವ ಎಲ್ಲರ ಸಾಂಸ್ಕೃತಿಕ ಆಸ್ತಿ’|ಪಾರ್ಸಿಗಳಿಗೆ ಆಶ್ರಯ ಕೊಟ್ಟಿದ್ದು ಭಾರತ ಮಾತ್ರ ಎಂದ ಮೋಹನ್ ಭಾಗವತ್| ‘ಹಿಂದೂ ಸಂಸ್ಕೃತಿ ವಿವಿಧತೆಯನ್ನು ಗೌರವಿಸುವ ಹಾಗೂ ಒಪ್ಪಿಕೊಳ್ಳುತ್ತದೆ’|‘ಇಡೀ ಪ್ರಪಂಚದಲ್ಲೇ ಮುಸ್ಲಿಮರು ಅತ್ಯಂತ ಸಂತೋಷವಾಗಿರುವುದು ಭಾರತದಲ್ಲಿ’|

ಭುವನೇಶ್ವರ್(ಅ13): ಇಡೀ ವಿಶ್ವದಲ್ಲೇ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವ ದೇಶ ಭಾರತವಾಗಿದ್ದು, ಇದಕ್ಕೆ ಹಿಂದೂ ಸಂಸ್ಕೃತಿ ಕಾರಣ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

 9 ದಿನಗಳ ಕಾಲ ಒಡಿಶಾ ಪ್ರವಾಸದಲ್ಲಿರುವ ಮೋಹನ್ ಭಾಗವತ್, ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ಭಾಗಿಯಾಗಿ ಮಾತನಾಡಿದರು.

ಹಿಂದೂ ಎನ್ನುವುದು ಧರ್ಮ ಅಥವಾ ಭಾಷೆಯಲ್ಲ. ಅದು ದೇಶದ ಹೆಸರೂ ಅಲ್ಲ. ಹಿಂದೂ ಎನ್ನುವುದು ಭಾರತದಲ್ಲಿ ಜೀವಿಸುತ್ತಿರುವ ಜನರ, ವಿವಿಧತೆಯನ್ನು ಗೌರವಿಸುವ ಒಪ್ಪಿಕೊಳ್ಳುವ ಸಂಸ್ಕೃತಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

Scroll to load tweet…

ವಿಶ್ವದ ಇತರ ದೇಶಗಳು ಸತ್ಯದ ಶೋಧನೆಗಾಗಿ ಭಾರತಕ್ಕೆ ಬರುತ್ತವೆ, ಪಾರ್ಸಿ ಜನಾಂಗ ಆಶ್ರಯಕ್ಕಾಗಿ ಅಲೆಯುತ್ತಿದ್ದಾಗ ಇಡೀ ಪ್ರಪಂಚದಲ್ಲಿ ಅದಕ್ಕೆ ಕಂಡಿದ್ದು ಭಾರತ ಮಾತ್ರ ಎಂದು ಭಾಗವತ್ ನುಡಿದರು.

ಅದರಂತೆ ಇಡೀ ಪ್ರಪಂಚದಲ್ಲೇ ಮುಸ್ಲಿಮರು ಅತ್ಯಂತ ಸಂತೋಷವಾಗಿರುವುದು ಭಾರತದಲ್ಲಿ ಮಾತ್ರ ಎಂದಿರುವ RSS ಮುಖ್ಯಸ್ಥ, ಇದಕ್ಕೆ ಕಾರಣ ನಮ್ಮ ಹಿಂದೂ ಸಂಸ್ಕೃತಿ ಎಂದು ಅಭಿಪ್ರಾಯಪಟ್ಟಿದ್ದಾರೆ.