ಮೀಸಲಾತಿ ಚರ್ಚೆ ಆಗ್ಬೇಕೆಂದ ಭಾಗವತ್: ಸಂಕಷ್ಟದಲ್ಲಿ ಬಿಜೆಪಿ!
‘ಮೀಸಲಾತಿ ಕುರಿತು ಸೌಹಾರ್ದಯುತ ಚರ್ಚೆ ನಡೆಯಬೇಕು’| RSS ಮುಖ್ಯಸ್ಥ ಮೋಹನ್ ಭಾಗವತ್ ಆಭಿಮತ| ಭಾಘವತ್ ಹೇಳಿಕೆಯಿಂದ ಸಂಕಷ್ಟದಲ್ಲಿ ಸಿಲುಕಿದ ಬಿಜೆಪಿ| ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆ| ಭಾಗವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ ನಾಯಕರು| ಭಾಗವತ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ RSS|
ನವದೆಹಲಿ(ಆ.20): ಮೀಸಲಾತಿ ಕುರಿತು ಈ ದೇಶದಲ್ಲಿ ಸೌಹಾರ್ದಯುತ ಚರ್ಚೆ ನಡೆಯಬೇಕು ಎಂಬ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.
ಮೀಸಲಾತಿ ಪರ ಇರುವವರು ಹಾಗೂ ಮೀಸಲಾತಿಯನ್ನು ವಿರೋಧಿಸುವವರ ನಡುವೆ ಸೌಹಾರ್ದಯುತ ಚರ್ಚೆ ನಡೆಯಬೇಕು ಎಂದು RSS ಮುಖ್ಯಸ್ಥ ಅಭಿಪ್ರಾಯಪಟ್ಟಿದ್ದರು.
ಇನ್ನು ಮೋಹನ್ ಭಾಘವತ್ ಅವರ ಈ ಹೇಳಿಕೆಯಿಂದಾಗಿ ಬಿಜೆಪಿ ಪೇಚಿಗೆ ಸಿಲುಕಿದ್ದು, ಮುಂಬರುವ ಹರಿಯಾಣ, ಮಹಾರಾಷ್ಟ್ರ, ಹಾಗೂ ಜಾರ್ಖಂಡ್ ವಿಧಾನಸಭೆ ಹಿನ್ನೆಲೆಯಲ್ಲಿ ಪಕ್ಷದ ಮೇಲಾಗುವ ಪರಿಣಾಮಗಳ ಕುರಿತು ಚಿಂತಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿರಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ, ನಾಯಕರು ನೀಡುವ ಯಾವುದೇ ಹೇಳಿಕೆ ಪಕ್ಷಕ್ಕೆ ಧಕ್ಕೆ ತರಬಲ್ಲದು ಎಂಬ ಭಯ ಪಕ್ಷವನ್ನು ಕಾಡುತ್ತಿದೆ ಎನ್ನಲಾಗಿದೆ.
ಈ ಮಧ್ಯೆ ಮೋಹನ್ ಭಾಗವತ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ RSS, ಮೀಸಲಾತಿ ಕುರಿತು ಭಾಗವತ್ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ಅನಗತ್ಯವಾಗಿ ವಿವಾದ ಮಾಡುತ್ತಿವೆ ಎಂದು ದೂರಿದೆ.
ಕಳೆದ ಭಾನುವಾರ ಜ್ಞಾನ್ ಉತ್ಸವದಲ್ಲಿ ಮಾತನಾಡಿದ ಮೋಹನ್ ಭಾಗವತ್, ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಹೇಳಿದ್ದರು.