MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ

ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು.

1 Min read
Author : Mahmad Rafik
Published : Mar 03 2026, 01:49 PM IST
Share this Photo Gallery
  • FB
  • TW
  • Linkdin
  • Whatsapp
15
 ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ
Image Credit : Asianet News

ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ

ಇಂದು ಕೇತುಗ್ರಸ್ಥ ರಕ್ತ ಚಂದ್ರಗ್ರಹಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾಗಿದ್ದರಿಂದ ಪ್ರತಿ ವರ್ಷ ಕಾಣುವ ಗರುಡ ಕಾಣಿಸುತ್ತಾ ಅನ್ನೋ ಆತಂಕ ಭಕ್ತರಲ್ಲಿ ಎದುರಾಗಿತ್ತು. ಸಮಯ ಬದಲಾದ್ರೂ ಗರುಡ ಕಾಣಿಸಿಕೊಂಡಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ.

25
ಸಮಯ ಬದಲಾವಣೆ ಯಾಕೆ?
Image Credit : Asianet News

ಸಮಯ ಬದಲಾವಣೆ ಯಾಕೆ?

ಸಾಮಾನ್ಯವಾಗಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ನಡೆಯುತ್ತಿತ್ತು. ಆದ್ರೆ ಇಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯವನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲ್ಲ. ಆದ್ದರಿಂದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು.

Related Articles

Related image1
ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ರೈಲ್ವೆ ಹಳಿ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್
Related image2
ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ
35
12 ಗಂಟೆಗೆ ರಥೋತ್ಸವ ಆರಂಭ
Image Credit : Asianet News

12 ಗಂಟೆಗೆ ರಥೋತ್ಸವ ಆರಂಭ

ಮಧ್ಯಾಹ್ನ 3 ಗಂಟೆ ಬದಲಾಗಿ 12 ಗಂಟೆಗೆಯೇ ರಥೋತ್ಸವ ಆರಂಭವಾಗಿತ್ತು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಆದ್ರೆ ಗರುಡ ಕಾಣಿಸುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು.

45
ಸಾವಿರಾರು ಭಕ್ತರಲ್ಲಿ ಸಂತಸ
Image Credit : Asianet News

ಸಾವಿರಾರು ಭಕ್ತರಲ್ಲಿ ಸಂತಸ

ರಥೋತ್ಸವ ನಡೆಯುವ ಸರಿಯಾದ ಸಂದರ್ಭಕ್ಕೆ ಗರುಡ ಕಾಣಿಸಿಕೊಂಡಿದೆ. ನೆರೆದಿದ್ದ ಭಕ್ತರು ಗರುಡ ದರ್ಶನವನ್ನು ಪವಾಡ ಎಂದು ಉಲ್ಲೇಖಿಸುತ್ತಾರೆ. ರಥೋತ್ಸವಕ್ಕೆ ಹೆಚ್ ಡಿ ಪುರದ ಸುತ್ತಲಿನ ಗ್ರಾಮದ ಜನರು, ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚಂದ್ರಗ್ರಹಣ ಆರಂಭಕ್ಕೂ ಮುನ್ನವೇ ಅದ್ಧೂರಿಯಾಗಿ ರಥೋತ್ಸವ ನಡೆದಿದೆ.

ಇದನ್ನೂ ಓದಿ: Shivamogga: 1 ಸಾವಿರ ಆಗಲ್ಲ, 500 ಕೊಡ್ತೀವಿ; ರಂಜಾನ್ ದೇಣಿಗೆಗಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

55
ಚಂದ್ರಗ್ರಹಣದ ಸಮಯ
Image Credit : Asianet News

ಚಂದ್ರಗ್ರಹಣದ ಸಮಯ

ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಸಂಜೆ 06:30ರ ಸುಮಾರಿಗೆ ಚಂದ್ರೋದಯದ ನಂತರ ಕೇವಲ 10-15 ನಿಮಿಷಗಳ ಕಾಲ ಭಾಗಶಃ ಗೋಚರಿಸಲಿದೆ. ಭಾರತದಲ್ಲಿ ಕೇವಲ 9 ರಿಂದ 12 ನಿಮಿಷಗಳ ಕಾಲ ಗ್ರಹಣ ಗೋಚರವಾಗಲಿದೆ. ಇದು ವರ್ಷದ ಮೊದಲ ಖಗ್ರಾಸ ಚಂದ್ರಗ್ರಹಣವಾಗಿದೆ. ಹೋಳಿ ದಹನಕ್ಕೆ ಶುಭ ಸಮಯ ಸಂಜೆ 6:25 ರಿಂದ ರಾತ್ರಿ 8:50 ರವರೆಗೆ ಇರುತ್ತದೆ.

ಇದನ್ನೂ ಓದಿ: Tumakuru: ಸಾಲ ಪಡೆದಿದ್ದಾನೆಂದು ಊರು ತುಂಬೆಲ್ಲಾ ಪೋಸ್ಟರ್ ಅಂಟಿಸಿ ವ್ಯಕ್ತಿಗೆ ಅವಮಾನ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿತ್ರದುರ್ಗ
ದೇವಸ್ಥಾನ
ಚಂದ್ರ ಗ್ರಹಣ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ: 4 ಲಕ್ಷ ಕೇಳಿ 1 ಲಕ್ಷ ವಸೂಲಿ ವೇಳೆ ರೆಡ್‌ಹ್ಯಾಂಡಾಗಿ ಸೆರೆ
Recommended image2
ಸಂಚಾರ ದಟ್ಟಣೆಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಟನಲ್ ರೋಡ್, ವೆಚ್ಚ ಲೆಕ್ಕಚಾರ ಮಾತ್ರ ಬಾಕಿ!
Recommended image3
ದೇವತೆಗಳ ಫೋಟೋ ಬಳಸಿ ಡ್ರಗ್ಸ್ ದಂಧೆ, ಕೇರಳ ಖದೀಮರು ಬಂಧನ, ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!
Related Stories
Recommended image1
ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ರೈಲ್ವೆ ಹಳಿ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್
Recommended image2
ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved