ನವ​ದೆ​ಹ​ಲಿ[ಜು.29]: ಧರ್ಮಾಧಾರಿತ ಹಿಂಸೆ, ಅಮಾಯಕರ ಬಡಿದು ಹತ್ಯೆ ಪ್ರಕರಣಗಳನ್ನು ತಡೆಯುವಂತೆ ಸೆಲೆಬ್ರಿಟಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ, ಗೋವು ಮತ್ತು ಬಡಿದು ಹತ್ಯೆಯ ಹೆಸರಿನಲ್ಲಿ ಹಿಂದೂ ಧರ್ಮವನ್ನು ಹಾನಿಗೊಳಿಸಲು ಸಂಚು ನಡೆದಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ವೃಂದಾವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ದೇಶದೆಲ್ಲೆಡೆ ಹಾನಿಗೊಳಿಸಲು ಭಾರೀ ದೊಡ್ಡ ಸಂಚೊಂದು ನಡೆದಿದೆ. ಕೆಲ ಸಮಾಜಘಾತುಕ ಶಕ್ತಿಗಳು ಗೋವು ಮತ್ತು ಬಡಿದು ಹತ್ಯೆಯ ಹೆಸರಿನಲ್ಲಿ ದ್ವೇಷವನ್ನು ಹರಡಲು ಯತ್ನಿಸುತ್ತಿದ್ದಾರೆ. ನಿರ್ದಿಷ್ಟ ಉದ್ದೇಶದೊಂದಿಗೆ ಕೆಲವು ರಾಜ್ಯಗಳಲ್ಲಿ ಧಾರ್ಮಿಕ ಮತಾಂತರವೂ ನಡೆಯುತ್ತಿದೆ. ಎಲ್ಲಾ ಸಂಘ ಪ್ರಚಾರಕರು ದೇಶದ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.