Asianet Suvarna News Asianet Suvarna News

ರಾಹುಲ್ ತಿಳುವಳಿಕೆ ಇಲ್ಲದ ನಾಯಕ: ಬಿಜೆಪಿ ತಿರುಗೇಟು!

ಪ್ರಧಾನಿ ಮೋದಿ ಅವರನ್ನು ‘ಕಳ್ಳ’ ಎಂದ ರಾಹುಲ್! ರಾಹುಲ್ ಗೆ ತಿಳುವಳಿಕೆ ಕಡಿಮೆ ಎಂದ ಬಿಜೆಪಿ! ಪ್ರಧಾನಿ ಕುರಿತು ಲಘುವಾಗಿ ಮಾತನಾಡುವುದು ಸಲ್ಲ! ಎರಡೂ ಕಂಪನಿಗಳ ನಡುವೆ ಯುಪಿಎ ಅವಧಿಯಲ್ಲೇ ಒಪ್ಪಂದ! ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು

Reliance, Dassault sealed the deal during UPA rule says BJP
Author
Bengaluru, First Published Sep 22, 2018, 8:43 PM IST
  • Facebook
  • Twitter
  • Whatsapp

ನವದೆಹಲಿ(ಸೆ.22): ರಫೆಲ್ ಒಪ್ಪಂದ ವಿಚಾರಕ್ಕೆ ಸಂಬಂದಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಳ್ಳ' ಎಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. 

ದೇಶದ ಪ್ರಧಾನಿ ಕುರಿತು ರಾಹುಲ್ ಇಂತಹ ಕೀಳು ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆಗೇಡಿನ ಮತ್ತು ಬೇಜವಾಬ್ದಾರಿತನದ ಪರಮಾವಧಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿ ವಿರುದ್ಧ ಯಾವುದೇ ಪಕ್ಷದ ಅಧ್ಯಕ್ಷರು ಇದುವರೆಗೂ ಇಂತಹ ಪದ ಬಳಸಿಲ್ಲ. 2012ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗಲೇ ರಿಲಯನ್ಸ್ ಡಿಫೆನ್ಸ್ ಮತ್ತು ಡಸಾಲ್ಟ್ ಏವಿಯೇಷನ್ ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

ರಫೆಲ್ ಡೀಲ್ ಅನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂಬ ಕಾಂಗ್ರೆಸ್ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಚಿವರು, ತಿಳುವಳಿಕೆ ಇಲ್ಲದ ಪ್ರತಿಪಕ್ಷದ ನಾಯಕನ ತೃಪ್ತಿಪಡಿಸಲು  ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಪಾಕಿಸ್ತಾನ ಮತ್ತು ಚೀನಾದಿಂದ ರಫೆಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದ ಮಾಹಿತಿ ಪಡೆದು ಆಟವಾಡುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ರಫೆಲ್ ಡೀಲ್: ಮೋದಿಗೆ ಮುಜುಗರ ತಂದಿತ್ತ ಫ್ರಾನ್ಸ್ ಮಾಜಿ ಅಧ್ಯಕ್ಷ!

ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!

ಮೋದಿ-ಅಂಬಾನಿಯಿಂದ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್: ರಾಹುಲ್!

ಮೋದಿ ವಿರುದ್ಧ ನಿಂತ್ರಾ ಸ್ವಾಮಿ?: 'ಗಂಭೀರ' ಎಚ್ಚರಿಕೆ!

ವಿದೇಶಿ ನಾಯಕರೊಬ್ಬರು ನಮ್ಮ ಪ್ರಧಾನಿಯನ್ನು ‘ಕಳ್ಳ’ ಎಂದಿದ್ದಾರೆ: ರಾಹುಲ್!

ರಫೆಲ್ ಒಪ್ಪಂದ: ‘ಪಾತ್ರ’ ನಿರಾಕರಿಸಿದ ರಕ್ಷಣಾ ಇಲಾಖೆ!

Follow Us:
Download App:
  • android
  • ios