ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷವು ನಿಜವಾದ ಬೆದರಿಕೆಯಿಂದ ಉಂಟಾಗಿದೆಯೇ ಅಥವಾ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಚಾಣಾಕ್ಷ ತಂತ್ರವೇ ಎಂಬ ಪ್ರಶ್ನೆ ಎದ್ದಿದೆ. ಟ್ರಂಪ್ ಯುದ್ಧಕ್ಕೆ ಪ್ರಚೋದಿಸಿ, ಇಸ್ರೇಲ್‌ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನೆತನ್ಯಾಹು ಯತ್ನಿಸಿದ್ದಾರೆ?

ಇದು ದೇಶಗಳ ನಡುವಿನ ಸಂಘರ್ಷವೋ ಅಥವಾ ನೆತನ್ಯಾಹು ತಂತ್ರವೋ?

ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳ ಸುರಿಮಳೆಯಾಗುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿದ್ದರೆ, ಪ್ರತಿಯಾಗಿ ಟೆಹ್ರಾನ್ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮಳೆ ಸುರಿಸುತ್ತಿದೆ. ಇರಾನ್‌ನ ಪರಮಾಣು ಬಾಂಬ್ ಕನಸನ್ನು ನುಚ್ಚುನೂರು ಮಾಡಲು ಈ ದಾಳಿ ಅನಿವಾರ್ಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾದಿಸುತ್ತಾರೆ. ಆದರೆ ಇಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆಯೆಂದರೆ, ಇರಾನ್‌ನಿಂದ ನಿಜವಾಗಿಯೂ ಅಮೆರಿಕಕ್ಕೆ ಸಂಕಷ್ಟವಿತ್ತೇ? ಅಥವಾ ತನ್ನ ಸ್ವಂತ ಹಿತಾಸಕ್ತಿಗಾಗಿ ನೆತನ್ಯಾಹು ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಾರಿ ತಪ್ಪಿಸಿದ್ದಾರೆಯೇ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: Dubai Attack: ಅಮೆರಿಕ ರಾಯಭಾರ ಕಚೇರಿ ಬಳಿ ಡ್ರೋನ್ ದಾಳಿ, ಬೆಂಕಿ! ಅಧಿಕಾರಿಗಳು ಹೇಳಿದ್ದೇನು?

ಯುದ್ಧದ ಗುಟ್ಟು ರಟ್ಟು ಮಾಡಿದ ಮಾರ್ಕೊ ರುಬಿಯೊ!

ಯುದ್ಧ ಆರಂಭವಾದ ನಾಲ್ಕನೇ ದಿನವೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 'ಇಸ್ರೇಲ್ ಈಗಾಗಲೇ ದಾಳಿಗೆ ಸಿದ್ಧವಾಗಿತ್ತು, ನಾವು ಕೇವಲ ಬೆಂಬಲಕ್ಕೆ ನಿಂತಿದ್ದೇವೆ' ಎಂಬರ್ಥದ ಅವರ ಮಾತುಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಇಸ್ರೇಲ್ ದಾಳಿ ಮಾಡಿದರೆ ಇರಾನ್ ಸುಮ್ಮನಿರುವುದಿಲ್ಲ, ಅದು ಅಮೆರಿಕದ ನೆಲೆಗಳನ್ನು ಗುರಿ ಮಾಡುತ್ತದೆ ಎಂಬ ಆತಂಕದಿಂದ ಅಮೆರಿಕವೇ ಮೊದಲು ದಾಳಿ ಮಾಡಿತು ಎಂಬುದು ಅವರ ವಾದ. ಅಂದರೆ, ಇಸ್ರೇಲ್ ಹಚ್ಚಿದ ಬೆಂಕಿಗೆ ಅಮೆರಿಕ ತುಪ್ಪ ಸುರಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತೇ?

ಇದನ್ನೂ ಓದಿ:US-Iran Conflict: ಹಲ್ಲು ಕಿತ್ತಿದ ಹಾವಿನಂತಾದ UN, ಇರಾನ್ ಮೇಲಿನ ದಾಳಿಯನ್ನ ವಿಶ್ವಸಂಸ್ಥೆ ಏಕೆ ತಡೆಯುತ್ತಿಲ್ಲ?

ಇಸ್ರೇಲ್ ಬೆದರಿಕೆಯನ್ನು ಅಮೆರಿಕಕ್ಕೆ ಅನ್ವಯಿಸಿದ ತಪ್ಪು ಹಾದಿ

ಸದ್ಯ ಟ್ರಂಪ್ ಅವರು ಅಮೆರಿಕದಲ್ಲಿ ತೀವ್ರ ಮುಜುಗರ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ. ನೆತನ್ಯಾಹು ಅವರ ಪ್ರಚೋದನೆಗೆ ಬಲಿಯಾಗಿ ಟ್ರಂಪ್ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುಎಸ್ ಕಾಂಗ್ರೆಸ್ ಸದಸ್ಯ ಮಾರ್ಕ್ ವಾರ್ನರ್ ಅವರಂತೂ ನೇರವಾಗಿಯೇ ಕಿಡಿಕಾರಿದ್ದಾರೆ. 'ಇರಾನ್‌ನಿಂದ ಇಸ್ರೇಲ್‌ಗೆ ಮಾತ್ರ ಬೆದರಿಕೆ ಇತ್ತು, ಅಮೆರಿಕಕ್ಕಲ್ಲ. ಇಸ್ರೇಲ್‌ನ ವೈಯಕ್ತಿಕ ಶತ್ರುಗಳನ್ನು ಅಮೆರಿಕದ ಶತ್ರುಗಳೆಂದು ಬಿಂಬಿಸುವುದು ನಾವು ತುಳಿಯುತ್ತಿರುವ ತಪ್ಪು ಹಾದಿ' ಎಂದು ಅವರು ಎಚ್ಚರಿಸಿದ್ದಾರೆ.

ನೆತನ್ಯಾಹು ಎಂಬ ಚಾಣಾಕ್ಷ 'ಬ್ರೈನ್‌ವಾಶರ್'

ಪರಿಣಿತರ ಪ್ರಕಾರ, ಇಸ್ರೇಲ್ ಮೊದಲಿನಿಂದಲೂ ಅಮೆರಿಕ ಮತ್ತು ಇರಾನ್ ನಡುವಿನ ಯಾವುದೇ ಪರಮಾಣು ಮಾತುಕತೆಗಳನ್ನು ಸಹಿಸುತ್ತಿರಲಿಲ್ಲ. ಇರಾನ್‌ನಲ್ಲಿ ಆಡಳಿತ ಬದಲಾವಣೆ ತರಲು ನೆತನ್ಯಾಹು ಅವರು ಟ್ರಂಪ್ ಅವರ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದರು ಎನ್ನಲಾಗಿದೆ. 'ಇರಾನ್ 47 ವರ್ಷಗಳಿಂದ ಅಮೆರಿಕಕ್ಕೆ ಸಾವು ಎಂದು ಜಪಿಸುತ್ತಿದೆ, ನಿಮ್ಮ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಿದೆ, ಅಷ್ಟೇ ಅಲ್ಲ ನಿಮ್ಮನ್ನೇ ಕೊಲ್ಲಲು ಪ್ರಯತ್ನಿಸಿದೆ' ಎಂಬ ಮಾತುಗಳ ಮೂಲಕ ಟ್ರಂಪ್ ಅವರನ್ನು ನೆತನ್ಯಾಹು ಉದ್ರೇಕಿಸಿದ್ದರು. 'ಖಮೇನಿಯನ್ನು ಮಟ್ಟಹಾಕಿದರೆ ನೀವು ಇತಿಹಾಸದ ಪುಟಗಳಲ್ಲಿ ಅಜರಾಮರವಾಗುತ್ತೀರಿ' ಎಂಬ ಆಸೆಯನ್ನು ತೋರಿಸುವ ಮೂಲಕ ಟ್ರಂಪ್‌ರನ್ನು ಯುದ್ಧದ ಅಖಾಡಕ್ಕೆ ತಳ್ಳಲಾಯಿತು ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ:ನೆತನ್ಯಾಹು ದೊಡ್ಡ ಕೊಲೆಗಡುಕ: ಖಮೇನಿ ಸಾವಿಗೆ ಸಂತಾಪ ಸೂಚಿಸದ ಪ್ರಧಾನಿ ಮೋದಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ವರದಿಗಳಲ್ಲಿ ಬಯಲಾದ ಟ್ರಂಪ್ ಅವರ 'ಸುಳ್ಳಿನ ಕಂತೆ'!

ಇರಾನ್ ಬಳಿ ಅಮೆರಿಕವನ್ನು ತಲುಪುವ ಕ್ಷಿಪಣಿಗಳಿವೆ ಎಂಬ ಟ್ರಂಪ್ ವಾದಕ್ಕೆ ಸ್ವತಃ ಅಮೆರಿಕದ ರಕ್ಷಣಾ ಇಲಾಖೆಯೇ (DIA) ತಣ್ಣೀರೆರಚಿದೆ. ಇರಾನ್ ಅಂತಹ ಕ್ಷಿಪಣಿ ತಯಾರಿಸಲು 2035ರವರೆಗೂ ಕಾಲಾವಕಾಶ ಬೇಕು ಎಂದು ವರದಿ ಹೇಳಿದೆ. ಇನ್ನು ಪರಮಾಣು ಬಾಂಬ್ ವಿಷಯಕ್ಕೆ ಬಂದರೆ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಪ್ರಕಾರ ಇರಾನ್ ಅಂತಹ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಅಂತಿಮವಾಗಿ, 'ನಾವು ದಾಳಿ ಮಾಡದಿದ್ದರೆ ಇರಾನ್ ಮಾಡುತ್ತಿತ್ತು' ಎಂಬ ಟ್ರಂಪ್ ಹೇಳಿಕೆಗೆ ಪೆಂಟಗನ್ ಬಳಿಯೇ ಯಾವುದೇ ಪುರಾವೆಗಳಿಲ್ಲ. ಅಂದರೆ, ಅಮೆರಿಕದ ಗುಪ್ತಚರ ವರದಿಗಳಿಗಿಂತಲೂ ನೆತನ್ಯಾಹು ಅವರ ಮಾತುಗಳನ್ನೇ ಟ್ರಂಪ್ ಹೆಚ್ಚು ನಂಬಿದಂತಿದೆ.