ರಫೆಲ್ ಒಪ್ಪಂದದಲ್ಲಿ ಅನಿಲ್ ಹೆಸರು ಸೇರ್ಪಡೆ! ತನ್ನ ಪಾತ್ರವೇನೂ ಇಲ್ಲ ಎಂದ ರಕ್ಷಣಾ ಇಲಾಖೆ! ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆಗೆ ಸ್ಪಷ್ಟನೆ! ರಕ್ಷಣಾ ಇಲಾಖೆ ಹೆಸರು ಅನಗತ್ಯವಾಗಿ ಎಳೆದು ತರಲಾಗುತ್ತಿದೆ
ನವದೆಹಲಿ(ಸೆ.22): ರಫೆಲ್ ಒಪ್ಪಂದದಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಹೆಸರು ಸೇರಿಸುವಲ್ಲಿ ತನ್ನ ಪಾತ್ರ ಇಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ರಿಲಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿದ್ದು ಭಾರತ ಎಂದು ನಿನ್ನೆ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ರಫೆಲ್ ಒಪ್ಪಂದದಲ್ಲಿ ತನ್ನ ಪಾತ್ರದ ಕುರಿತಂತೆ ಸ್ಪಷ್ಟನೆ ನೀಡಿರುವ ರಕ್ಷಣಾ ಸಚಿವಾಲಯ, ಹೊಲಾಂಡೆ ಹೇಳಿಕೆಗೆ ಸಂಬಂಧಿಸಿದಂತೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ರಿಲಯನ್ಸ್ ಆಯ್ಕೆಯಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದೂ ರಕ್ಷಣಾ ಸಚಿವಾಲಯ ಪುನರುಚ್ಚಿರಿಸಿದೆ.
ಈ ಹಿಂದೆಯೂ ಕೇಂದ್ರ ಸರ್ಕಾರ, ರಿಲಯನ್ಸ್ ಮತ್ತು ಡಸಾಲ್ಟ್ ನಡುವೆ ವಾಣಿಜ್ಯ ಒಪ್ಪಂದವಾಗಿದ್ದು, ಅದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹೇಳಿತ್ತು.
ರಫೆಲ್ ಡೀಲ್: ಮೋದಿಗೆ ಮುಜುಗರ ತಂದಿತ್ತ ಫ್ರಾನ್ಸ್ ಮಾಜಿ ಅಧ್ಯಕ್ಷ!
ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!
ಮೋದಿ-ಅಂಬಾನಿಯಿಂದ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್: ರಾಹುಲ್!
ಮೋದಿ ವಿರುದ್ಧ ನಿಂತ್ರಾ ಸ್ವಾಮಿ?: 'ಗಂಭೀರ' ಎಚ್ಚರಿಕೆ!
ವಿದೇಶಿ ನಾಯಕರೊಬ್ಬರು ನಮ್ಮ ಪ್ರಧಾನಿಯನ್ನು ‘ಕಳ್ಳ’ ಎಂದಿದ್ದಾರೆ: ರಾಹುಲ್!
