Asianet Suvarna News Asianet Suvarna News

ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!

ರಫೆಲ್ ಒಪ್ಪಂದ ಕುರಿತು ಭುಗಿಲೆದ್ದಿರುವ ವಿವಾದ! ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಹೇಳಿಕೆ! ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರಿ ಆಯ್ಕೆ ಮಾಡಿದ್ದು ನಾನೇ ಎಂದ ಡಸ್ಸಾಲ್ಟ್! ಸ್ಥಳೀಯ ಸಹಭಾಗಿತ್ವಕ್ಕಾಗಿ ಉತ್ತಮ ಕಂಪನಿ ಆಯ್ಕೆ! ನಾಗಪುರದಲ್ಲಿ ಉತ್ಪಾದನಾ ಘಟಕ ಹೊಂದಿರುವ ಉಭಯ ಕಂಪನಿಗಳು

Picking Reliance was our choice in Rafale deal, says  Dassault Aviation
Author
Bengaluru, First Published Sep 22, 2018, 2:51 PM IST

ಪ್ಯಾರಿಸ್(ಸೆ.22): ತೀವ್ರ ವಿವಾದಕ್ಕೆ ಕಾರಣವಾಗಿರುವ ರಾಫೆಲ್ ಯುದ್ದ ವಿಮಾನ ಒಪ್ಪಂದ ಕುರಿತು, ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ತೆರೆ ಎಳೆಯುವ ಪ್ರಯತ್ನ ಮಾಡಿದೆ. ರಾಫೆಲ್ ಯುದ್ಧ ವಿಮಾನ ಒಪ್ಪಂದಕ್ಕಾಗಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಸಂಸ್ಥೆಯನ್ನು ತಾನೇ ಖುದ್ದಾಗಿ ಆಯ್ಕೆ ಮಾಡಿದ್ದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರ ಹೇಳಿಕೆಯಿಂದ ರಫೆಲ್ ಒಪ್ಪಂದ ಕುರಿತು ಭಾರೀ ವಿವಾದ ಭುಗಿಲೆದ್ದಿದೆ. ಈ ಕುರಿತು ಇದೇ ಮೊದಲ ಬಾರಿಗೆ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ತಾನೇ ಎಂದು ಹೇಳಿಕೊಂಡಿದೆ.

ಭಾರತ ಸರ್ಕಾರದೊಂದಿಗಿನ ಒಪ್ಪಂದದ ಅನ್ವಯ ಯುದ್ಧ ವಿಮಾನಗಳ ನಿರ್ಮಾಣಕ್ಕೆ ನಮಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವ ಬೇಕಿತ್ತು. ಈ ಪೈಕಿ ಉತ್ತಮ ಸಂಸ್ಥೆಗಳ ಹುಡುಕಾಟದಲ್ಲಿದ್ದಾಗ ರಿಲಯನ್ಸ್ ಡಿಫೆನ್ಸ್ ಆಯ್ಕೆ ಉತ್ತಮ ಎನಿಸಿತು. ಇದೇ ಕಾರಣಕ್ಕೆ ಅದೇ ಸಂಸ್ಥೆಯನ್ನುಸಹಭಾಗಿ ಸಂಸ್ಛೆಯನ್ನಾಗಿ ಆಯ್ಕೆ ಮಾಡಿಕೊಂಡೆವು ಎಂದು ಡಸ್ಸಾಲ್ಟ್ ಏವಿಯೇಷನ್ ಸ್ಪಷ್ಟಪಡಿಸಿದೆ.

2017ರಲ್ಲಿ ಉಭಯ ಸಂಸ್ಥೆಗಳೊಂದಿಗೆ ಒಪ್ಪಂದವಾಗಿದ್ದು, ಡಿಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ಎಂಬ ಜಂಟಿ ಸಂಸ್ಥೆ ಉದಯವಾಗಿದ್ದು, ಉಭಯ ಸಂಸ್ಥೆಗಳು ನಾಗಪುರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿವೆ. ಇಲ್ಲಿ ಫಾಲ್ತನ್ ಮತ್ತು ರಾಫೆಲ್ ಯುದ್ಧ ವಿಮಾನಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ರಫೆಲ್ ಡೀಲ್: ಮೋದಿಗೆ ಮುಜುಗರ ತಂದಿತ್ತ ಫ್ರಾನ್ಸ್ ಮಾಜಿ ಅಧ್ಯಕ್ಷ!

Follow Us:
Download App:
  • android
  • ios