Asianet Suvarna News Asianet Suvarna News

ವಿದೇಶಿ ನಾಯಕರೊಬ್ಬರು ನಮ್ಮ ಪ್ರಧಾನಿಯನ್ನು ‘ಕಳ್ಳ’ ಎಂದಿದ್ದಾರೆ: ರಾಹುಲ್!

ರಫೆಲ್ ಒಪ್ಪಂದ ಕುರಿತು ಮತ್ತೆ ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್! ವಿದೇಶಿ ನಾಯಕರೊಬ್ಬರು ಪ್ರಧಾನಿಯನ್ನು ಕಳ್ಳ ಎಂದಿದ್ದಾರೆ! ಹೊಲಾಂಡೆ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ರಾಹುಲ್ ಒತ್ತಾಯ! ನಮ್ಮ ದೇಶ ಸವಕ ಕಳ್ಳ, ದರೋಡೆಕೋರ ಎಂದ ರಾಹುಲ್
 

Hollande Saying PM Of India Is A Thief Rahul Gandhi On Rafale Deal
Author
Bengaluru, First Published Sep 22, 2018, 7:08 PM IST

ನವದೆಹಲಿ(ಸೆ.22): ವಿವಾದಿತ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಪ್ರಧಾನಿ ಮೋದಿ ಓರ್ವ ಕಳ್ಳ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ. 
 
ಇದೇ ವೇಳೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನಿಂದ ಒಪ್ಪಂದವನ್ನು ರಿಲಯನ್ಸ್ ಸಂಸ್ಥೆಗೆ ವರ್ಗಾಯಿಸಿದ್ದರ ಕುರಿತು ಮಾಹಿತಿಯೇ ಇರಲಿಲ್ಲ ಎಂದೂ ರಾಹುಲ್ ಆರೋಪಿಸಿದ್ದಾರೆ. 

ಮನೋಹರ್ ಪರಿಕ್ಕರ್ ಅವರಿಗೆ ಬದಲಾವಣೆ ಬಗ್ಗೆ ಅರಿವಿರಲಿಲ್ಲ. ಅವರು ಗೋವಾದ ಮಾರುಕಟ್ಟೆಯಲ್ಲಿ ಮೀನು ಖರೀದಿಸುವುದರಲ್ಲಿಯೇ ಬ್ಯುಸಿಯಾಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿರುವ ರಾಹುಲ್ ಗಾಂಧಿ, ಇದೇ ಮೊದಲ ಬಾರಿಗೆ ವಿದೇಶದ ಮಾಜಿ ಅಧ್ಯಕ್ಷರೊಬ್ಬರು ನಮ್ಮ ಪ್ರಧಾನಿಯನ್ನು ಕಳ್ಳ ಎಂದು ಕರೆಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. 

ನಮ್ಮ ದೇಶದ ಪ್ರಧಾನಿ ಭ್ರಷ್ಟ ಎಂಬುದು ನಮಗೆ ಮನದಟ್ಟಾಗಿದೆ. ಭಾರತೀಯರ ಮನಸ್ಸಿನಲ್ಲಿ ಒಂದು ಅಭಿಪ್ರಾಯವಂತೂ ಸ್ಪಷ್ಟವಾಗಿ ಮೂಡಿದೆ ಅದೆಂದರೆ ದೇಶ ಸೇವಕ ಕಳ್ಳ, ದರೋಡೆಕೋರ ಎಂದು ಟೀಕಿಸಿದ್ದಾರೆ.

ರಫೆಲ್ ಡೀಲ್: ಮೋದಿಗೆ ಮುಜುಗರ ತಂದಿತ್ತ ಫ್ರಾನ್ಸ್ ಮಾಜಿ ಅಧ್ಯಕ್ಷ!

ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!

ಮೋದಿ-ಅಂಬಾನಿಯಿಂದ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್: ರಾಹುಲ್!

ಮೋದಿ ವಿರುದ್ಧ ನಿಂತ್ರಾ ಸ್ವಾಮಿ?: 'ಗಂಭೀರ' ಎಚ್ಚರಿಕೆ!

Follow Us:
Download App:
  • android
  • ios