ಭಾರತ-ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ರಾಜ್‌ಗಢದ ವಾಯುಸೇನಾ ಯೋಧ ಮೋಹಿತ್ ರಾಥೋಡ್ ಮದುವೆಯಾದ ಮರುದಿನವೇ ಕರ್ತವ್ಯಕ್ಕೆ ಹಾಜರಾದರು. ರಜೆ ರದ್ದಾದ ಹಿನ್ನೆಲೆಯಲ್ಲಿ, ದೇಶಸೇವೆಯೇ ಮುಖ್ಯವೆಂದು ಶನಿವಾರವೇ ಕಾರ್ಯ ನಿರ್ವಹಿಸಲು ಮೋಹಿತ್ ಮುಂದಾದರು.
ರಾಜಗಢ: ವಧು-ವರರಿಬ್ಬರ ಕೈಗಳ ಮೇಲಿದ್ದ ಗೋರಂಟಿ ಇನ್ನೂ ಮಸುಕಾಗಿರಲಿಲ್ಲ. ಗುರುವಾರ ವಿವಾಹ ಪೂರ್ವ ಸಮಾರಂಭ ನಡೆಯಿತು. ಶುಕ್ರವಾರ ಮದುವೆ ಶಾಸ್ತ್ರಗಳು ಮುಗಿದ ನಂತರ ಆ ಯೋಧ ದೇಶ ಸೇವೆ ಮಾಡಲು ಹೊರಟರು. ಭಾರತೀಯ ವಾಯುಪಡೆಯ ಸೈನಿಕ ಮೋಹಿತ್ ರಾಥೋಡ್ ಅವರ ರಜೆ ರದ್ದಾದ ತಕ್ಷಣ, ಅವರಿಗೆ ಶನಿವಾರ ಕೆಲಸಕ್ಕೆ ಸೇರಲು ಆದೇಶಗಳು ಬಂದವು. ಮೋಹಿತ್ ಹೇಳುವಂತೆ "ತಾನು ಈಗ ಮದುವೆಯಾಗಿದ್ದೇನೆ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದರಿಂದ ಇದು ಮದುವೆಗಿಂತ ಮುಖ್ಯ" ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಿ ಭಾರತವು ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡಿದೆ. ಅದಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿರುವ ಭಾರತೀಯ ನಗರಗಳನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ವಸತಿ ಪ್ರದೇಶಗಳ ಮೇಲೆ ನಿರಂತರವಾಗಿ ಮದ್ದುಗುಂಡುಗಳಿಂದ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಕ್ರಮ ಕೈಗೊಳ್ಳುತ್ತಿದೆ. ಭಾರತ ಸರ್ಕಾರ ಮತ್ತು ಸೇನೆ ಜಾಗರೂಕತೆಯಿಂದ ಇವೆ. ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೇನಾ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸಲಾಗಿದೆ. ಸೈನಿಕರನ್ನು ಮತ್ತೆ ಕೆಲಸಕ್ಕೆ ಕರೆಸಿಕೊಳ್ಳಲಾಗಿದೆ.
ಮದುವೆಯಾದ ಮರುದಿನವೇ ಗಡಿಯತ್ತ ಹೊರಟ ಆ ಸೈನಿಕ
ಮದುವೆಗೆಂದು ಎರಡು ದಿನಗಳ ಕಾಲಾವಕಾಶ ನೀಡಲಾಯಿತು. ಮಧ್ಯಪ್ರದೇಶದ ರಾಜ್‌ಗಢ ನಿವಾಸಿಯಾದ ವಾಯುಪಡೆಯ ಸೈನಿಕ ಮೋಹಿತ್ ರಾಥೋಡ್ ತಮ್ಮ ಮದುವೆಗೆ ರಜೆಯ ಮೇಲೆ ಬಂದಿದ್ದರು. ಅವರು ಏಪ್ರಿಲ್ 17 ರಿಂದ ಮೇ 15 ರವರೆಗೆ ರಜೆಯಲ್ಲಿದ್ದರು. ಆದರೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ, ಬುಧವಾರ ಅವರ ರಜೆಯನ್ನು ರದ್ದುಪಡಿಸಲಾಯಿತು ಮತ್ತು ಶುಕ್ರವಾರದೊಳಗೆ ಕೆಲಸಕ್ಕೆ ಮರಳಲು ಅವರನ್ನು ಕೇಳಲಾಯಿತು. ನಂತರ ಅವರು ಗುರುವಾರ ನಡೆಯಲಿರುವ ತಮ್ಮ ಮದುವೆಯ ಬಗ್ಗೆ ತಿಳಿಸಿದರು ಮತ್ತು ಶನಿವಾರದೊಳಗೆ ಕರ್ತವ್ಯಕ್ಕೆ ಸೇರಲು ಅವರಿಗೆ ಆದೇಶ ಬಂದಿತು.
ಮದುವೆಯಾದ ತಕ್ಷಣ ಕರ್ತವ್ಯಕ್ಕೆ ಹಾಜರು
ಕುರಾವರ್ ನಿವಾಸಿಯಾದ ಮೋಹಿತ್ 6 ವರ್ಷಗಳ ಹಿಂದೆ ವಾಯುಪಡೆಗೆ ಸೇರಿದರು. ಅವರನ್ನು ದೆಹಲಿ ಬಳಿಯ ಇಸಾಪುರ ವಾಯುಪಡೆ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ. ಮೋಹಿತ್ ರಾಥೋಡ್ ಅವರ ವಿವಾಹವು ಲಸುದಲಿಯಾ ರಾಮನಾಥ್ ನಿವಾಸಿ ಗೋಪಾಲ್ ರಾಥೋಡ್ ಅವರ ಪುತ್ರಿ ವಂದನಾ ಅವರೊಂದಿಗೆ ನಿಶ್ಚಯವಾಗಿತ್ತು. ಅವರು ಗುರುವಾರ, ಅಂದರೆ ಮೇ 8 ರಂದು ಸಪ್ತಪದಿ ತುಳಿದು, ಹೆಂಡತಿಗೆ ಸಮಾಧಾನ ಹೇಳಿ ಹೊರಟರು. ಶುಕ್ರವಾರ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಎಲ್ಲರ ರಜೆ ರದ್ದುಗೊಂಡಿರುವುದರಿಂದ ಅವರು ತಕ್ಷಣ ಹೊರಡಲು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದರು.
ನಮಗೆ ದೇಶ ಮೊದಲು: ಯೋಧನ ಮಾವ
"ನನ್ನ ಅಳಿಯ ಮದುವೆಯಾದ ತಕ್ಷಣ ದೇಶವನ್ನು ರಕ್ಷಿಸಲಿದ್ದಾರೆ ಎಂದು ನನಗೆ ಹೆಮ್ಮೆಯಿದೆ. ನಮಗೆ ದೇಶವೇ ಮೊದಲು ಮತ್ತು ಮದುವೆ ನಡೆಯುವವರೆಗೂ ನಮ್ಮ ಮಗಳಿಗೆ ಇದನ್ನು ಹೇಳದಿರಲು ನಾವು ನಿರ್ಧರಿಸಿದ್ದೆವು. ಮೋಹಿತ್ ಅವರ ಪೋಷಕರು ಸಹ ತಮ್ಮ ಮಗ ದೇಶ ಸೇವೆ ಮಾಡಲು ಮರಳುತ್ತಿದ್ದಾನೆ ಎಂದು ಸಂತೋಷಪಟ್ಟಿದ್ದಾರೆ. ದೇಶ ಮತ್ತು ಮಗ ಇಬ್ಬರೂ ಸುರಕ್ಷಿತವಾಗಿರಲಿ ಎಂದು ಅವರು ಪ್ರಾರ್ಥಿಸಿದ್ದಾರೆ" ಎಂದು ಮೋಹಿತ್ ರಾಥೋಡ್ ಅವರ ಮಾವ ಗೋಪಾಲ್ ರಾಥೋಡ್ ಹೇಳುತ್ತಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು, ನಂತರ ಇಡೀ ದೇಶವೇ ಮಮ್ಮಲ ಮರುಗಿತು. ಭಯೋತ್ಪಾದನೆ ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂಬ ನಿರಂತರ ಬೇಡಿಕೆ ಇತ್ತು. ಮೇ 7 ರಂದು, ಭಾರತ ಸರ್ಕಾರವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ನೆಲಸಮ ಮಾಡಿತು. ಅದರ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ದೇಶದ ವಿವಿಧ ಸೇನೆಗಳಲ್ಲಿ ಕೆಲಸ ಮಾಡುತ್ತಿರುವ ಸೈನಿಕರ ರಜೆಗಳನ್ನು ರದ್ದುಪಡಿಸಲಾಗಿದೆ ಮತ್ತು ಅವರನ್ನು ಹಿಂದಕ್ಕೆ ಕರೆಯಲಾಗಿದೆ. ಇದರಲ್ಲಿ ರಾಜ್‌ಗಢ ಜಿಲ್ಲೆಯ ಮೋಹಿತ್ ರಾಥೋಡ್ ಕೂಡ ಸೇರಿದ್ದಾರೆ.


