ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು , ಕಳೆದ ವರ್ಷ ರಾಮನಗರದಲ್ಲಿ ಸೆರೆ ಹಿಡಿದ್ದ ಆನೆಯನ್ನು ದುಬಾರಿ ಶಿಬಿರದಲ್ಲಿ ಪಳಗಿಸಲಾಗಿತ್ತು. ಇದೀಗ ಆನೆ ಮೃತಪಟ್ಟಿದೆ.

ಕೊಡಗು (ಡಿ.09) ದುಬಾರೆ ಶಿಬಿರದಲ್ಲಿದ್ದ ತಕ್ಷ ಹೆಸರಿನ ಆನೆ ಮೃತಪಟ್ಟಿದೆ. ಕಳೆದ 10 ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ 40 ವರ್ಷ ವಯಸ್ಸಿನ ಆನೆ ತಕ್ಷಣ ಮೃತಪಟ್ಟಿದೆ. ವೈದ್ಯಾಧಿಕಾರಿ ಡಾ ಮುಜೀಬ್, ಡಾ ಚಿಟ್ಠಿಯಪ್ಪ ಕಳೆದ ಕೆಲ ದಿನಗಳಿಂದ ತಕ್ಷ ಆನೆಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ಆನೆ ಆರೋಗ್ಯ ಕ್ಷೀಣಿಸಿತ್ತು. ಕಳೆದ ಮೂರು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದ ತಕ್ಷ ಆನೆ ಮೃತಪಟ್ಟಿದೆ. ಸ್ಥಳಕ್ಕೆ ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಸೊನಲ್ ವಿಷ್ಟಿ ಭೇಟಿ ಪರಿಶೀಲನೆ ನಡೆಸಿದ್ದರೆ. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ರಾಮನಗರದಲ್ಲಿ ಸೆರೆ ಹಿಡಿದಿದ್ದ ಆನೆ

2024ರ ಡಿಸೆಂಬರ್ 28ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಭಾರಿ ಪುಂಡಾಟ ನಡೆಸುತ್ತಿದ್ದ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸಾಕಾನೆಗಳನ್ನು ಬಳಸಿ ಈ ಕಾಡನೆ ಸೆರೆ ಹಿಡಿಯಲಾಗಿತ್ತು. ಬಳಿಕ ರಾಮನಗರದಿಂದ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದ ದುಬಾರೆ ಆನೆ ಶಿಬಿರದಲ್ಲಿ ಆನೆಯನ್ನು ಪಳಗಿಸಲಾಗಿತ್ತು. ಈ ಆನೆಗೆ ತಕ್ಷ ಎಂದು ಹೆಸರಿಡಲಾಗಿತ್ತು. ಆನೆ ಶಿಬಿರದಲ್ಲಿ ಪಳಗಿದ್ದ ತಕ್ಷ ಆನೆ ಕಳೆದ ಎರಡು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು.

ಗ್ರಾಮಕ್ಕೆ ನುಗ್ಗಿ ಪುಂಡಾಟ ನಡೆಸುವ ಆನೆಗಳನ್ನು ಸೆರೆ ಹಿಡಿದು ಸಾಕನೆ ಶಿಬಿರದಲ್ಲಿ ಪಳಗಿಸಲಾಗುತ್ತದೆ. ಹೀಗೆ ರಾಮನಗರದ ಚನ್ನಪಟ್ಟಣದಲ್ಲಿ ಸೆರೆ ಹಿಡಿದ ಆನೆ ತಕ್ಷ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ಪುಂಡಾಟ ಮೆರೆಯುತ್ತಿದ್ದ ಆನೆಯನ್ನು ಪಳಗಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದರು. ಇತ್ತೀಚೆಗೆ ಚಾಮರಾಜನಗರದಲ್ಲಿ ಆತಂಕ ಮೂಡಿಸಿದ್ದ ಹುಲಿ ಸೆರೆ ಹಿಡಿಯಲು ದುಬಾರೆ ಸಾಕನೆ ಶಿಬಿರದಿಂದ ಎರಡು ಆನೆ ಬಳಸಲಾಗಿತ್ತು. ದುಬಾರೆ ಶಿಬಿರದ ಶ್ರೀರಾಮ ಹಾಗೂ ಇಂದ್ರ ಆನೆಗಳನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿತ್ತು. ಅರಣ್ಯ ಸಚಿವರ ಸೂಚನೆ ಬಳಿಕ ದುಬಾರೆ ಸಾಕನೆ ಶಿಬಿರಗಳಿಂದ ಆನೆಯನ್ನು ಚಾಮರಾಜಕ್ಕೆ ಕರೆಯಿಸಿಕೊಳ್ಳಲಾಗಿತ್ತು. ದೇವಾಲಯದಲ್ಲಿ ಸಾಕಾನೆಗೆ ಪೂಜೆ ಸಲ್ಲಿಸಿ ಕೂಂಬಿಂಗ್ ನಡೆಸಲಾಗಿತ್ತು. 35 ಸಿಬ್ಬಂದಿಗಳೊಂದಿಗೆ ಕಾರ್ಯಾಚರೆ ನಡೆಸಲಾಗಿತ್ತು.

ಶೃಂಗೇರಿಯಲ್ಲಿ ಪುಂಡಾನೆ ಸೆರೆ ಹಿಡಿದಿದ್ದ ದುಬಾರೆ ಆನೆ

ಶೃಂಗೇರಿಯಲ್ಲಿ ಇಬ್ಬರ ಬಲಿ ಪಡೆದ ಒಂಟಿ ಸಲಗ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಗೆ ದುಬಾರೆಯಿಂದ ಆನೆಗಳನ್ನು ತರಿಸಿಕೊಳ್ಳಲಾಗಿತ್ತು. ಶೃಂಗೇರಿಯ ಭಗವತಿ ಕಾಡಿನಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿತ್ತು. ದುಬಾರೆಯಿಂದ ಬಂದಿದ್ದ ಸಾಕಾನೆಗಳ ಕ್ಯಾಂಪ್ ಮುಂದೆ ಸಾಗಿದ ಒಂಟಿ ಸಲಗಕ್ಕೆ ಅರವಳಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ದುಬಾರೆಯ ಆನೆಗಳು ಒಂಟಿ ಸಲಗಕ್ಕೆ ಹಗ್ಗ ಹಾಕಿ ಸೆರೆ ಹಿಡಿಯಲಾಗಿತ್ತು.