ಹೊಸ ಕಾರಲ್ಲ, ಸರ್ಕಾರ ಕೆಲಸಕ್ಕೆ ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆದಿದೆ. ಟೆಂಡರ್ ಕುರಿತು ಚರ್ಚೆ ನಡೆದಿದೆ. ಸುವರ್ಣಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ನಿರ್ಧಾರ ಪರ ವಿರೋಧಕ್ಕೆ ಕಾರಣವಾಗಿದೆ.

ಬೆಂಗಳೂರು (ಡಿ.09) ರಾಜ್ಯ ಕಾಂಗ್ರೆಸ್ ಸರ್ಕಾರದ ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಹಲವು ಗುಡುವುಗಳು ಅಂತ್ಯಗೊಂಡರೆ ಸಂಪೂರ್ಣವಾಗಿ ಮುಗಿದಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಅನ್ನೋ ಬಿಜೆಪಿ ಆರೋಪಗಳು, ಸಾರ್ವಜನಿಕರ ಆಕ್ರೋಶ ಒಂದಡೆಯಾದರೆ, ಮತ್ತೊಂದಡೆ ಸರ್ಕಾರ ಸರ್ಕಾರ ಕೆಲಸಕ್ಕಾಗಿ ಓಡಾಡಲು ಹೆಲಿಕಾಪ್ಟರ್ ಅಥವಾ ವಿಮಾನ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ವಿಮಾನ/ ಹೆಲಿಕಾಪ್ಟರ್ ಖರೀದಿ, ಟೆಂಡರ್, ಬಾಡಿಗೆ ಪಡೆಯುವ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಗಿದೆ.

ಹೆಲಿಕಾಪ್ಟರ್, ಪ್ಲೈಟ್ ನಮಗೆ ಬೇಕಾಗುತ್ತೆ

ಸುವರ್ಣಸೌಧದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಚಿವರಾದ ಎಂ.ಬಿ ಪಾಟೀಲ್, ಭೈರತಿ ಸುರೇಶ್, ಸತೀಶ್ ಜಾರಕಿಹೊಳಿ, ಜಾರ್ಜ್ ಭಾಗಿಯಾಗಿದ್ದಾರೆ. ಈ ಸಭೆ ಬಳಿಕ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಹೆಲಿಕಾಪ್ಟರ್, ವಿಮಾನ ಖರೀದಿ ಸಭೆಯ ಮಾಹಿತಿ ನೀಡಿದ್ದಾರೆ. ಸರ್ಕಾರದ ಕೆಲಸಕ್ಕೆ ಓಡಾಡಲು ನಮಗೆ ವಿಮಾನ, ಹೆಲಿಕಾಪ್ಟರ್ ಬೇಕು. ಖರೀದಿ ಟೆಂಡರ್, ಬಾಡಿಗೆ ಪಡೆಯುವ ಕುರಿತು ಚರ್ಚೆ ನಡೆಸಿದ್ದೇವೆ. ಹಲವು ಸಲಹೆಗಳು ಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಒಂದು ಕ್ಯಾಬಿನೆಟ್ ಸಬ್ ಕಮಿಡಿ ಮಾಡಿದ್ದರು. ಇದರಂತೆ ನಾವು ಹೆಚ್ ಎ ಎಲ್ ಗೆ ಒಂದು ಹೆಲಿಕ್ಯಾಪ್ಟರ್ ಕೊಡಿ ಎಂದು ಕೇಳಿದ್ದೇವು. ಆದರೆ ಹೆಚ್ಎಲ್‌ನಿಂದ ಪೂರೈಕೆ ವಿಳಂಬವಾಗಲಿದೆ ಎಂದಿದ್ದರು.ಹೀಗಾಗಿ ಪರ್ಯಾ ಮಾರ್ಗ ಹುಡುಕಿದ್ದೆವು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನಲ್ಲಿ ಆಯೋಜನೆಗೊಂಡ ಏರ್‌ಶೋಗೆ ಬಂದಾಗ ವಿಮಾನ, ಹೆಲಿಕಾಪ್ಟರ್‌ಗೆ ಮನವಿ ಮಾಡಿದ್ದೆವು.ಕೇಂದ್ರ ಸರ್ಕಾರಕ್ಕೆ ರೆಫರ್ ಮಾಡಿದ್ದೇವು. ಟೆಂಡರ್ ಕರೆದಿದ್ದೇವೆ . ನಮಗೆ ವಿಮಾನ, ಹೆಲಿಕಾಪ್ಟರ್ ಮುಖ್ಯವಾಗಿದೆ. ಹೀಗಾಗಿ ಇವತ್ತು ಸಬ್ ಕಮಿಟಿ ಸದಸ್ಯರು ಈ ಕುರಿತು ಚರ್ಚೆ ನೆಡೆಸಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸರ್ಕಾರಕ್ಕೆ ಒಳ್ಳೆ ಸರ್ವೀಸ್ ಕೊಡಬೇಕು

ಈ ಕುರಿತು ತಂತ್ರಜ್ಞರ ನೆರವು ಅಗತ್ಯ. ವಿಮಾನ, ಹೆಲಿಕಾಪ್ಟರ್ ಖರೀದಿ, ಬಾಡಿಗೆ ಮೂಲಕ ಬಳಕೆ ಲೆಕ್ಕಾಚಾರ ಮಾಡಬೇಕಿದೆ. ಅದಕ್ಕೆಲ್ಲ ಟೆಕ್ನಿಕಲ್ ಕ್ವಾಲಿಫಿಕೇಷನ್ ಇರುವ ಜನ ಬೇಕು. ಹೀಗಾಗಿ ಮತ್ತೆ ಮಂಗಳವಾರ ಸಭೆ ಸೇರುತ್ತೇವೆ. ಸರ್ಕಾರಕ್ಕೆ ಒಳ್ಳೆ ಸರ್ವೀಸ್ ಕೊಟ್ಟಿರಬೇಕು. ಅಂತಹವರನ್ನ‌ ಮಾತ್ರ ತೆಗೆದುಕೊಂಡು ಮಾಡುತ್ತೇವೆ. ನಮಗೆ ಸರ್ಕಾರದ ಹಣ ಮುಖ್ಯ, ಖರೀದಿ ಮಾಡುವ ಪ್ರಶ್ನೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹೆಲಿಕಾಪ್ಟರ್, ವಿಮಾನ ಖರೀದಿ ಕುರಿತು ಸಾಕಷ್ಟು ಸಲಹೆ ಕೊಟ್ಟಿದ್ದಾರೆ. ಬಾಡಿಗೆ ಪಡೆಯವ ಬಗ್ಗೆ ಚರ್ಚೆ ಆಗಿದೆ. ಗಂಟೆಗೆ ಇಷ್ಟು ಅಂತ ಕೊಟ್ಟು ಬಾಡಿಗೆ ಪಡೆಯುವ ಕುರಿತು ಚರ್ಚೆ ಆಗಿದೆ. ಎಲ್ಲಾ ವಿಚಾರಗಳ ಸಾಧಕ ಬಾಧಕ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.