ಬೆಂಗಳೂರು[ಜೂ.07]: ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ತಾವು ಫಿಟ್ ಆಗಿರುವುದನ್ನು ಸಾಬೀತು ಮಾಡಿದ್ದಾರೆ.
ಹೌದು, ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಅವರ ಸವಾಲನ್ನು ಸ್ವೀಕರಿಸಿದ ಪುನೀತ್ ರಾಜ್’ಕುಮಾರ್ ಪುಶ್ ಅಪ್ ಮಾಡುವ ಮೂಲಕ ತಾವು ಫಿಟ್ ಆಗಿರುವುದಾಗಿ ಸಾಬೀತು ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋವೀಗ ವೈರಲ್ ಆಗಿದೆ.

ಆರೋಗ್ಯವಂತರಾಗಿರಲು ಫಿಟ್ನೆಸ್ ಅವಶ್ಯಕವಾಗಿರುತ್ತದೆ. ಇದೀಗ ರಕ್ಷಿತ್ ಶೆಟ್ಟಿ, ಧೃವ ಸರ್ಜಾ, ಡ್ಯಾನಿಶ್ ಶೇಟ್[ಮಿ.ನ್ಯಾಗ್ಸ್] ಹಾಗೂ ಶ್ರೀ ಮುರುಳಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.
ಈ ಮೊದಲು ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಸವಾಲು ಸ್ವೀಕರಿಸಿದ್ದ ಕಿಚ್ಚ ಸುದೀಪ್ ಫಿಟ್ನೆಸ್ ಸಾಬೀತು ಪಡಿಸಿ ಶಿವರಾಜ್ ಕುಮಾರ್, ಯಶ್’ಗೆ ಸವಾಲು ಹಾಕಿದ್ದರು.

ಕ್ರೀಡಾ ದಿಗ್ಗಜರೂ ಕೂಡಾ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.