ತಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೋಡಿದಾಗ ಅವರಿಂದ ಪ್ರೇರಿತನಾಗುತ್ತೇನೆ. ಅವರು ಇಡೀ ಭಾರತೀಯರು ಫಿಟ್ ಆಗಲು ಬಯಸುತ್ತಾರೆ. ನಿಮ್ಮ ಫಿಟ್’ನೆಸ್’ ಸೀಕ್ರೇಟ್ ಏನು ಎಂಬುದನ್ನು ಒಂದು ವಿಡಿಯೋ ಮಾಡಿ ಕಳಿಸಿ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ನವದೆಹಲಿ[ಮೇ.23]: ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನ ಆರಂಭಿಸಿರುವ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ತಾವು ತಮ್ಮ ಕಚೇರಿಯಲ್ಲಿ ಪುಷಪ್ಸ್ ಹೊಡೆಯುವ ವಿಡಿಯೋವನ್ನು ಹಾಕಿದ್ದು, ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್ ಹಾಗೂ ಹೃತಿಕ್ ರೋಷನ್’ಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ.
ತಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೋಡಿದಾಗ ಅವರಿಂದ ಪ್ರೇರಿತನಾಗುತ್ತೇನೆ. ಅವರು ಇಡೀ ಭಾರತೀಯರು ಫಿಟ್ ಆಗಲು ಬಯಸುತ್ತಾರೆ. ನಿಮ್ಮ ಫಿಟ್’ನೆಸ್’ ಸೀಕ್ರೇಟ್ ಏನು ಎಂಬುದನ್ನು ಒಂದು ವಿಡಿಯೋ ಮಾಡಿ ಕಳಿಸಿ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಖಾತೆಯ ಜವಬ್ದಾರಿಯನ್ನು ಹೊತ್ತುಕೊಂಡಿರುವ ರಾಥೋಡ್, ಶಾಲಾ ಹಂತದಲ್ಲೇ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಖೇಲೋ ಇಂಡಿಯಾ ಅಭಿಯಾನ ಆರಂಭಿಸಿದ್ದಾರೆ. ಖೇಲೋ ಇಂಡಿಯಾದಲ್ಲಿ ಆಯ್ಕೆಯಾದ 1000 ಅಥ್ಲೀಟ್’ಗಳಿಗೆ ವಿದ್ಯಾರ್ಥಿವೇತನ ರೂಪದಲ್ಲಿ ಪ್ರತಿವರ್ಷ 5 ಲಕ್ಷ ರುಪಾಯಿ ನೀಡಲಾಗುತ್ತದೆ.