ದೇಶವನ್ನುದ್ದೇಶಿಸಿ ಮೋದಿ ಭಾಷಣ, ಮತ್ತೆ ಮುನಿಸಿಕೊಂಡ ವರುಣ; ಅ.20ರ ಟಾಪ್ 10 ಸುದ್ದಿ!
ದೇಶವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇದೀಗ ಮೋದಿ ಭಾಷಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಹದಿಂದ ಮುಳುಗಡೆಯಾಗಿರುವ ಪ್ರದೇಶಗಳ ನೀರು ಇನ್ನೂ ತಗ್ಗಿಲ್ಲ. ಇದೀಗ ಮತ್ತೆ ವಾಯುಭಾರ ಕುಸಿತವಾಗಿದ್ದು, ಭಾರಿ ಮಳೆ ಭೀತಿ ಆವರಿಸಿದೆ. ಭಾರತದ ಗಡಿಯಲ್ಲಿ ನುಸುಳಿದ ಚೀನಾ ಯೋಧನ ಬಂಧಿಸಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್, ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸೇರಿದಂತೆ ಅಕ್ಟೋಬರ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಿಷನ್ ಶಕ್ತಿ: ಯೋಗಿ ನಾಡಲ್ಲಿ 2 ದಿನದಲ್ಲಿ 14 ಮಂದಿಗೆ ಗಲ್ಲು, 20 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!...
ಉತ್ತರ ಪ್ರದೇಶದ ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನದಂತೆ ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಮಿಷನ್ ಶಕ್ತಿ ಅಭಿಯಾನದಡಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಕಳೆದ ಎರಡು ದಿನದಲ್ಲಿ ಹದಿನಾಲ್ಕು ಅರೋಪಿಗಳಿಗೆ ಗಲ್ಲು ಹಾಗೂ ಇಪ್ಪತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ದೇಶವನ್ನುದ್ದೇಶಿಸಿ ಸಂಜೆ 6 ಗಂಟೆಗೆ ಮೋದಿ ಮಾತು: ಭಾರೀ ಕುತೂಹಲ!...
ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್?...
ಔದ್ಯಮಿಕ ನೌಕರರ ಗ್ರಾಹಕ ಬೆಲೆ ಸೂಚ್ಯಂಕ ನಿಗದಿಗೆ ಪರಿಗಣಿಸುವ ಮೂಲ ವರ್ಷವನ್ನು (ಯುಪಿಐ-ಐಡಬ್ಲು) ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಭಾರತದ ಗಡಿಯಲ್ಲಿ ನುಸುಳಿದ ಚೀನಾ ಯೋಧನ ಬಂಧನ!...
ಭಾರತ-ಚೀನಾ ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಆಗಿರುವ ನಡುವೆಯೇ ಪೂರ್ವ ಲಡಾಖ್‌ನ ಡೆಮ್‌ಚೋಕ್ ಗಡಿ ವಾಸ್ತವ ರೇಖೆಯೊಳಗೆ ನುಸುಳಿಬಂದ ಚೀನಾ ಯೋಧನೊಬ್ಬನನ್ನು ಭಾರತದ ಸೈನಿಕರು ಸೋಮವಾರ ಬಂಧಿಸಿದ್ದಾರೆ. ವಾಂಗ್ ಯಾ ಲಾಂಗ್ ಎಂಬುವರೇ ಗಡಿ ವಾಸ್ತವ ರೇಖೆಯೊಳಗೆ ನುಸುಳಿ ಬಂದ ಚೀನೀ ಸೈನಿಕ. ಈತನ ಬಳಿ ಕೆಲವು ಸೇನಾ ದಾಖಲೆಗಳು ಪತ್ತೆಯಾಗಿವೆ. ಈತ ಸೇನಾ ಗೂಢಚರ ಇರಬಹುದೇ ಎಂಬ ಅನುಮಾನದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
IPL ಇತಿಹಾಸದಲ್ಲೇ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್..!...
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ. ಐಪಿಎಲ್‌ನಲ್ಲಿ ವಿನೂತನ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಕನ್ನಡಿಗ ಕೆ.ಎಲ್ ರಾಹುಲ್ ಪಾಲಾಗಿದೆ.
ಚಿರು - ಮೇಘನಾರ ಮಾಲಯಾಳಿ ಗೆಳತಿ: ಯಾರೀಕೆ ಅನನ್ಯಾ..?...
ಚಿರು-ಮೇಘನಾರ ಮಾಲಿವುಡ್ ಗೆಳತಿ | ಪ್ರತಿ ಮುಖ್ಯ ಕ್ಷಣದಲ್ಲೂ ಮೇಘನಾ ಜೊತೆಗಿದ್ದ ಅನನ್ಯಾ..? ಯಾರೀಕೆ ಮಲ್ಲು ಚೆಲುವೆ..?
ವಾಯುಬಾರ ಕುಸಿತ, ಕರ್ನಾಟಕದಲ್ಲಿ ಮತ್ತೆ ಮಳೆ: ಎಚ್ಚರ...ಎಚ್ಚರ...!...
ಈಗಾಗಲೇ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದೆ. ಇದೀಗ ವಾಯುಬಾರ ಕುಸಿತವಾಗಿದ್ದು ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ.
ಹಬ್ಬದ ಕೊಡುಗೆ: TVS Nಟಾರ್ಕ್ 125 ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ ಲಾಂಚ್!...
ಸಾಲು ಸಾಲು ಹಬ್ಬಕ್ಕೆ TVS ಇದೀಗ ಎನ್ ಟಾರ್ಕ್ ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. 125ಸಿಸಿ ಸೆಗ್ಮೆಂಟ್‌ನಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿರುವ TVS ಎನ್ ಟಾರ್ಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಸ್ಪೋರ್ಟೀವ್ ಹಾಗೂ ಆಗ್ರೆಸ್ಸೀವ್ ಲುಕ್ ಹೊಂದಿರುವ ಈ ಸ್ಕೂಟರ್ ಬೆಲೆ ಹಾಗೂ ಹಬ್ಬದ ಆಫರ್ ಕುರಿತ ಮಾಹಿತಿ ಇಲ್ಲಿದೆ.
ಕೊರೋನಾ ಸಮರ: ಭಾರತದ ಪರಿಶ್ರಮ ಶ್ಲಾಘನೀಯ ಎಂದ ಬಿಗ್ ಗೇಟ್ಸ್!...
ವರ್ಲ್ಡ್ ಫೇಮಸ್ ಉದ್ಯಮಿ ಹಾಗೂ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತೊಂದು ಬಾರಿ ಕೊರೋನಾ ವಿರುದ್ಧದ ಸಮರದಲ್ಲಿ ಭಾರತದ ಪಾತ್ರವನ್ನು ಹಾಡಿ ಹೊಗಳಿದ್ದಾರೆ. ಭಾರತ ನಡೆಸಿದ ಅಧ್ಯಯನ ಹಾಗೂ ಉತ್ಪಾದನಾ ಕ್ಷಮತೆ ಕೊರೋನಾ ವಿರುದ್ಧದ ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.
'ಉತ್ತರ ಕರ್ನಾಟಕದವರಿಂದಲೇ ಬಿಜೆಪಿಯವ್ರು ಸಿಎಂ ಆಗ್ತಾರೆ, ಬೇರೆ ಕಡೆ ಓಟು ಬೀಳಂಗಿಲ್ಲ'...
ಆಗಾಗ ವಿವಾದಿತ ಹೇಳಿಕೆ ನೀಡುವ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಸಿಎಂ ವಿರುದ್ಧ ನಾಲಿಗೆ ಹರಿಯ ಬಿಟ್ಟಿದ್ದಾರೆ.