Asianet Suvarna News Asianet Suvarna News

ದೇಶವನ್ನುದ್ದೇಶಿಸಿ ಸಂಜೆ 6 ಗಂಟೆಗೆ ಮೋದಿ ಮಾತು: ಭಾರೀ ಕುತೂಹಲ!

ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ

PM Modi To Address The Nation At 6PM on Tuesday pod
Author
Bangalore, First Published Oct 20, 2020, 1:13 PM IST

ನವದೆಹಲಿ(ಅ.20) ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ 'ಇಂದು ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಸಂದೇಶ ನೀಡಲಿದ್ದೇನೆ. ನೀವೂ ತಪ್ಪದೇ ಭಾಗವಹಿಸಿ' ಎಂದು ಮನವಿ ಮಾಡಿದ್ದಾರೆ. 

"

ಮೋದಿ ಯಾವ ವಿಚಾರವಾಗಿ ಮಾತನಾಡಬಹುದು?
ಈಗಾಗಲೇ ಕೊರೋನಾ ಗರಿಷ್ಠ ಮಟ್ಟಕ್ಕೇರಿ ಇಳಿಯಲಾರಂಭಿಸಿದೆ. ಹೀಗಿರುವಾಗಲೇ ದೇಶದಲ್ಲಿ ಸಾಲು ಸಾಲಾಗಿ ಹಬ್ಬಗಳು ಬರಲಾರಂಭಿಸಿವೆ. ಸಾಲದೆಂಬಂತೆ ಚಳಿಗಾಲವೂ ಆರಂಭವಾಗುತ್ತಿದೆ. ಇನ್ನು ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಕೊರೋನಾ ಲಸಿಕೆ ಫೆಬ್ರವರಿಯಲ್ಲಿ ತಯಾರಾಗಬಹುದೆಂದು ತಿಳಿಸಿದ್ದಾre. ಇಂತಹ ಮಹತ್ತರ ಘಟ್ಟದಲ್ಲಿ ಲಸಿಕೆ ತಯಾರಾಗುವವರೆಗೆ ಜನರು ಅತ್ಯಂತ ಜಾಗರೂಕತೆ ವಹಿಸಬೇಕಾಗುತ್ತದೆ.
"

ಚಳಿಗಾಲದಲ್ಲಿ ಹೆಚ್ಚು ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ನಾಲ್ಕು ತಿಂಗಳು ಕೊರೋನಾ ಮಾರ್ಗಸೂಚಿಗಳನದ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೈಗಳನ್ನು ಆಗಾಗ ಸ್ವಚ್ಛಗೊಳಿಸುವ ಬಗ್ಗೆ ಮಾತನಾಡಬಹುದೆಂದು ಅಂದಾಜಿಸಲಾಗಿದೆ.

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜನರು ಕೊಂಚ ಜಾಗ್ರತೆ ತಪ್ಪಿದರೂ ಕೊರೋನಾ ಮಹಾಮಾರಿ ಮತ್ತೆ ಜನರ ಬದುಕನ್ನು ನಿರ್ನಾಮ ಮಾಡಲಿದೆ.

Follow Us:
Download App:
  • android
  • ios