ಕದ್ದ ಬಟ್ಟೆ ಧರಿಸಿ ಟಿಕ್‌ಟಾಕಲ್ಲಿ ಶೋಕಿ: ಬಂಧಿಸಿ ಜೈಲಿಗಟ್ಟಿದ ಪೊಲೀಸರು
ಕದ್ದ ಮಾಲನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಶೋಕಿ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕದ್ದಮಾಲನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಶೋಕಿ ಮಾಡ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು 22 ವರ್ಷದ ಮರ್ಲೆನಾ ವೆಲೆಜ್ ಎಂದು ಗುರುತಿಸಲಾಗಿದೆ. ಈಕೆಯ ವಿರುದ್ಧ ಸಣ್ಣಪುಟ್ಟ ಕಳ್ಳತನದ ( petty theft) ಆರೋಪ ಹೊರಿಸಲಾಗಿದೆ. ಈಕೆ ಮನೆ ಬಳಕೆಯ ವಸ್ತುಗಳು, ಬಟ್ಟೆಗಳು ಸೇರಿದಂತೆ ಸುಮಾರು 500.32 ಡಾಲರ್ ಮೊತ್ತದ ವಸ್ತುಗಳನ್ನು ಕೆಪೆ ಕೋರಲ್ ಟಾರ್ಗೆಟ್‌ನಿಂದ ಕಳ್ಳತನ ಮಾಡಿದ್ದಾಳೆ.
ಆಕ್ಟೋಬರ್ 30ರಂದು ಈಕೆ ಕಳ್ಳತನ ನಡೆಸಿದ್ದು, ಈಕೆ ಫ್ಲೊರಿಡಾದ ಟಾರ್ಗೆಟ್ ಸ್ಟೋರ್ ಕೆಫೆಯೊಂದರಲ್ಲಿ ಈ ಕಳ್ಳತನದ ಕೃತ್ಯವೆಸಗಿದ್ದಾಳೆ. ಬರೀ ಕಳ್ಳತನ ಮಾಡಿ ಸುಮ್ಮನೆ ಕುಳಿತಿದ್ರೆ ಸಿಕ್ಕಿಬಿಳ್ತಿರಲಿಲ್ವೆನೋ ಆದರೆ ಈಕೆ ಕದ್ದ ಮರುದಿನವೇ ತಾನು ಕದ್ದ ಕೆಲ ಬಟ್ಟೆಗಳನ್ನು ಧರಿಸಿ ಟಿಕ್‌ಟಾಕ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಮ್ಮನಾಗಿ ಜೀವನದ ಒಂದು ದಿನ ಎಂದು ಶೀರ್ಷಿಕೆ ನೀಡಿ ವೀಡಿಯೋ ಹಾಕಿದ್ದಾಳೆ.
ವೀಡಿಯೋದಲ್ಲಿ ಆಕೆ ತಾನು ಕಳ್ಳತನವೆಸಗಿದ ಶಾಪ್‌ನಲ್ಲಿಯೇ ಕಾಣಿಸಿಕೊಂಡಿದ್ದು, ತಾನು ಕದ್ದ ವಸ್ತುಗಳನ್ನು ಆಕೆ ತನ್ನ ಕಾರಿಗೆ ತುಂಬಿಸುತ್ತಿರುವುದು ಕಾಣುತ್ತಿದೆ. ಕೆಪೆ ಕೋರಲ್ ಟಾರ್ಗೆಟ್ ಶಾಪ್‌ನಿಂದ ಆಕೆ 16 ವಸ್ತುಗಳನ್ನು ಆಯ್ಕೆ ಮಾಡಿದ ನಂತರ ಸ್ವಯಂ-ಚೆಕ್‌ಔಟ್‌ನಲ್ಲಿ(self-checkout) ಕಡಿಮೆ ಬೆಲೆಯೊಂದಿಗೆ ನಕಲಿ ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಈ ವೀಡಿಯೋ ವೈರಲ್ ಆಗಿದ್ದು, ಬಳಿಕ ಕೆಪೆ ಶಾಪ್‌ನ ಸಿಸಿಟಿವಿ ಇಮೇಜ್‌ಗಳನ್ನು ಚೆಕ್ ಮಾಡಿದ ನಂತರ ಆಕೆಯನ್ನು ಬಂಧಿಸಲಾಗಿದೆ. ಅನಾಮಧೇಯ ವ್ಯಕ್ತಿಯೊಬ್ಬ ಆಕೆಯನ್ನು ಗುರುತು ಪತ್ತೆ ಮಾಡಿದ್ದು, ಆಕೆಯ ಸಂಪೂರ್ಣ ಹೆಸರು ಹಾಗೂ ವಿಳಾಸ ಹಾಗೂ ಸೋಶಿಯಲ್ ಮೀಡಿಯಾದ ಖಾತೆಯ ವಿವರವನ್ನು ಪೊಲೀಸರಿಗೆ ನೀಡಿದ್ದಾನೆ. ಇದಾದ ನಂತರ ಆಕೆಯನ್ನು ಲೀ ಕೌಂಟಿ ಜೈಲಿನ ಸಿಬ್ಬಂದಿ ಬಂಧಿಸಿ ವಾರದ ನಂತರ 150 ಡಾಲರ್ ಮೊತ್ತದ ಬಾಂಡ್ ಷ್ಯೂರಿಟಿ ಪಡೆದು ಆಕೆಯನ್ನು ಬಿಡುಗಡೆ ಮಾಡಿದ್ದಾರೆ.ಡಿಸೆಂಬರ್ 10 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆಕೆಗೆ ಸೂಚಿಸಲಾಗಿದೆ.
ಇದನ್ನು ಓದಿ: ದುಡ್ಡಿಲ್ಲವೆಂದು ಅಳೋ ವಿಡಿಯೋ ಹಾಕಿ 25 ಇದ್ದ ಫಾಲೋವರ್ಸ್ ಸಂಖ್ಯೆ 34 ಸಾವಿರ ಮಾಡ್ಕೊಂಡ ಹುಡುಗಿ! ಲಕ್ಕೇ ಖುಲಾಯಿಸಿತು!
ಇದನ್ನು ಓದಿ: ನಾಲ್ಕು ತಿಂಗಳಿಂದ ಮಹಿಳೆ ಬೆಡ್ ಕೆಳಗಿದ್ದ ಅಪರಿಚಿತ, ತಿಂದುಂಡ್ರೂ ಗೊತ್ತೆ ಆಗಿರ್ಲಿಲ್ಲ!