ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್?
ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿ.ಎ. ಏರಿಕೆ?| ಮೂಲ ವರ್ಷವನ್ನು 2016ಕ್ಕೆ ನಿಗದಿಪಡಿಸುವ ಸಾಧ್ಯತೆ
ನವದೆಹಲಿ(ಅ.20): ಔದ್ಯಮಿಕ ನೌಕರರ ಗ್ರಾಹಕ ಬೆಲೆ ಸೂಚ್ಯಂಕ ನಿಗದಿಗೆ ಪರಿಗಣಿಸುವ ಮೂಲ ವರ್ಷವನ್ನು (ಯುಪಿಐ-ಐಡಬ್ಲು) ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಒಂದು ವೇಳೆ ಇದು ಸಾಧ್ಯವಾದಲ್ಲಿ ದೀಪಾವಳಿ ಹೊತ್ತಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ.
ಎಲ್ಲವೂ ಅಂದುಕೊಂಡಂತೆ ಆದರೆ ಮೂಲ ವರ್ಷವನ್ನು 2016ಕ್ಕೆ ನಿಗದಿಪಡಿಸುವ ಸಾಧ್ಯತೆ ಇದ್ದು, ಅಕ್ಟೋಬರ್ 21ರಂದು ಇದರ ವಿವರವನ್ನು ಸರ್ಕಾರ ಬಹಿರಂಗಪಡಿಸುವ ನಿರೀಕ್ಷೆಯಿದೆ. ಇದರಿಂದಾಗಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಲಿದೆ. ಈ ಮೂಲಕ ವೇತನ ಕೂಡ ತಂತಾನೇ ಹೆಚ್ಚಲಿದೆ.
ಇದು ಕೇಂದ್ರ ಸರ್ಕಾರದ 48 ಲಕ್ಷ ನೌಕರರಿಗೆ ಲಾಭವಾಗಲಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಡಿ.ಎ. ಶೇ.17ರಷ್ಟಿದೆ.