Asianet Suvarna News Asianet Suvarna News

ಹಬ್ಬದ ಕೊಡುಗೆ: TVS Nಟಾರ್ಕ್ 125 ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ ಲಾಂಚ್!

ಸಾಲು ಸಾಲು ಹಬ್ಬಕ್ಕೆ  TVS ಇದೀಗ ಎನ್ ಟಾರ್ಕ್ ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. 125ಸಿಸಿ ಸೆಗ್ಮೆಂಟ್‌ನಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿರುವ  TVS ಎನ್‌ ಟಾರ್ಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಸ್ಪೋರ್ಟೀವ್ ಹಾಗೂ ಆಗ್ರೆಸ್ಸೀವ್ ಲುಕ್ ಹೊಂದಿರುವ ಈ ಸ್ಕೂಟರ್ ಬೆಲೆ ಹಾಗೂ ಹಬ್ಬದ ಆಫರ್ ಕುರಿತ ಮಾಹಿತಿ ಇಲ್ಲಿದೆ.
 

TVS Motor introduced a NTorq 125 Super Squad limited edition ckm
Author
Bengaluru, First Published Oct 20, 2020, 3:26 PM IST

ನವದೆಹಲಿ(ಅ.20): ಹಬ್ಬಗ ಪ್ರಯುಕ್ತ ಭಾರತದಲ್ಲಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ವಿಶೇಷ ಕೊಡುಗೆ, ಹೆಚ್ಚುವರಿ ಫೀಚರ್ಸ್ ಹಾಗೂ ಹೊಸ ವಿನ್ಯಾಸದ ವಾಹನಗನ್ನು ಬಿಡುಗಡೆ ಮಾಡುತ್ತಿದೆ. ಇದೀಗ TVS ಈ ಹಬ್ಬಕ್ಕಾಗಿ ಭಾರತದ ಅತ್ಯಂತ ಜನಪ್ರಿಯ Nಟಾರ್ಕ್ ಸ್ಕೂಟರ್ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ.

40 ಲಕ್ಷ ಜಾಗತಿಕ ಮಾರಾಟದ ಮೈಲುಗಲ್ಲು ದಾಟಿದ TVS ಅಪಾಚೆ!.

TVS Nಟಾರ್ಕ್ ಮಾರ್ವೆಲ್ಸ್ ಅವೆಂಜರ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ 77,865 ರೂಪಾಯಿ(ಎಕ್ಸ್ ಶೋ ರೂಂ). 125ಸಿಸಿ ಸೆಗ್ಮೆಂಟ್ ಸ್ಕೂಟರ್ ಪೈಕಿ TVS Nಟಾರ್ಕ್ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿದೆ. ಈ ವರೆಗೆ 5 ಲಕ್ಷ ಸ್ಕೂಟರ್ ಭಾರತದಲ್ಲಿ ಮಾರಾಟವಾಗಿದೆ.  ಮಾರ್ವೆಲ್ಸ್ ಅವೆಂಜರ್ ಚಲನಚಿತ್ರದ ಥೀಮ್ ಆಧಾರದಲ್ಲಿ ನೂತನ ಸ್ಕೂಟರ್ ಗ್ರಾಫಿಕ್ ಡಿಸೈನ್ ಮಾಡಲಾಗಿದೆ.

BS6 ಎಂಜಿನ್, ET-Fi ತಂತ್ರಜ್ಞಾನದ ನೂತನ TVS ಜೆಸ್ಟ್ 110 ಸ್ಕೂಟರ್ ಬಿಡುಗಡೆ!.

TVS Nಟಾರ್ಕ್ ರೇಸ್ ಎಡಿಶನ್ ಸ್ಕೂಟರ್‌ನಲ್ಲಿದ್ದ ಎಲ್ಲಾ ಫೀಚರ್ಸ್ ನೂತನ ಸೂಪರ್ ಸ್ಕ್ವಾಡ್  ಎಡಿಶನ್ ಸ್ಕೂಟರ್‌ನಲ್ಲಿದೆ.  LED ಹೆಡ್ ಲೆಡ್ ಹೊಂದಿದೆ. 124.8 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,ಫ್ಯುಯೆಲ್ ಇಂಜೆಕ್ಷನ್ ಟೆಕ್ನಾಲಜಿ ಹೊಂದಿದೆ.    9.1 PS ಗರಿಷ್ಠ ಪವರ್ ಹಾಗೂ  10.5 Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

Follow Us:
Download App:
  • android
  • ios