ರಿಕ್ಷಾವಾಲಾಗೆ ಮೋದಿ ಸರ್ಪ್ರೈಸ್, ಹುಟ್ಟು ಹಬ್ಬ ಸಂಭ್ರಮದಲ್ಲಿ ಡಿ ಬಾಸ್; ಫೆ.16ರ ಟಾಪ್ 10 ಸುದ್ದಿ!
ಬಡ ರಿಕ್ಷಾವಾಲ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಆಮಂತ್ರಣ ಪತ್ರಿಕೆ ಕಳುಹಿಸಿ ಸುಮ್ಮನಾಗಿದ್ದರು. ಮದುವೆ ದಿನ ಮೋದಿ ಅಚ್ಚರಿ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ಅರವಿಂದ ಕೇಜ್ರಿವಾಲ್ ಹೊಸ ಭರವಸೆ ನೀಡಿದ್ದಾರೆ. ವೇದಿಕೆಯಲ್ಲಿ ಬಹಿರಂವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸೋಮಣ್ಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ, ಐಪಿಎಲ್ ವೇಳಾಪಟ್ಟಿ ಸೇರಿದಂತೆ ಫೆ.16ರ ಟಾಪ್ 10 ಸುದ್ದಿ ಇಲ್ಲಿವೆ.
ಮಗಳ ಮದುವೆಗೆ ಮೋದಿ ಆಹ್ವಾನಿಸಿದ ಬಡ ರಿಕ್ಷಾವಾಲಾ: ಪಿಎಂ ಕೊಟ್ರು ವಿಶೇಷ ಗಿಫ್ಟ್!...
ಉತ್ತರ ಪ್ರದೇಶದ ರಿಕ್ಷಾವಾಲಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದ್ದಾರೆ. ಅವರ ಕೈಯ್ಯಲ್ಲಿರುವ ಪತ್ರವೊಂದು ದಿನ ಬೆಳಗಾಗುವಂತೆ ಭಾರೀ ಫೇಮಸ್ ಮಾಡಿದೆ. ಹೌದು ಮಂಗಲ್ ಕೇವತ್ ಮಗಳ ಮದುವೆ ನಿಶ್ಚಯವಾಗಿದ್ದು, ಆತ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಿದ್ದ. ಆದರೆ ಮಗಳ ಮದುವೆ ದಿನ ಚ್ಚರಿಯ ಗಿಫ್ಟ್ ಒಂದು ಬಂದಿದೆ.
ಸಚಿವ ಶ್ರೀರಾಮುಲುಗಾಗಿ 1 ಗಂಟೆ ಕಾದ ಮಾಜಿ ಸ್ವೀಕರ್
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೊರನಡೆದ ಘಟನೆ ಕೋಲಾರದಲ್ಲಿ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲು ಹಾಗು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ಗಾಗಿ ಒಂದು ಗಂಟೆ ಕಾದ ನಂತರ ರಮೇಶ್ ಕುಮಾರ್ ಹೊರ ನಡೆದಿದ್ದಾರೆ.
ವಾರಣಾಸಿಯಲ್ಲಿ ಕನ್ನಡದಲ್ಲಿ ಮೋದಿ ಮಾತು: ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ!
ವೀರಶೈವರ ಸಂತ ಪರಂಪರೆ ಸಿಕ್ಕಿದ್ದು ಭಾರತಕ್ಕೆ ಸಂದ ಗೌರವ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಾರಣಾಸಿಯಲ್ಲಿ ಇಂದು ನಡೆದ ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷವಾಗಿತ್ತು.
ಈಶ್ವರ್ ಕಾ ಶಪಥ್: ದೆಹಲಿ ಸಿಎಂ ಆಗಿ ಕೇಜ್ರಿ ಪ್ರಮಾಣವಚನ!
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಪಥಗ್ರಹಣ ಸಮಾರಂಭದಲ್ಲಿ ದೆಹಲಿ ಲೆ.ಗವರ್ನರ್ ಅನಿಲ್ ಬೈಜಲ್ ಅವರು ಕೇಜ್ರಿವಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.
IPL 2020: ಇಲ್ಲಿದೆ RCB ತವರಿನ ಪಂದ್ಯದ ವೇಳಾಪಟ್ಟಿ!
IPL 2020 ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಸಿದ್ದತೆ ನಡೆಸುತ್ತಿದೆ. ಈ ಬಾರಿ ಬಲಿಷ್ಠ ತಂಡವನ್ನೇ ಕಟ್ಟಿರುವ RCB ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿದೆ. ಮಾರ್ಚ್ 29 ರಿಂದ ಮೇ 24ರ ವರೆಗೆ ನಡೆಯಲಿರುವ ಐಪಿಎಲ್ ಟೂರ್ನಿಗಾಗಿ ಅಭಿಮಾನಗಳು ಕಾಯುತ್ತಿದ್ದಾರೆ. ಇದೀಗ RCB ತಂಡದ ತವರಿನ(ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು) ಪಂದ್ಯದ ವೇಳಾಪಟ್ಟಿ ಬಹಿರಂಗವಾಗಿದೆ.
ಚಾಲೆಂಜಿಂಗ್ ಸ್ಟಾರ್‌ಗೆ ಇಂದು 43ನೇ ಹುಟ್ಟುಹಬ್ಬ!
ನಟ ದರ್ಶನ್ ಅವರಿಗೆ 44ನೇ ಹುಟ್ಟುಹಬ್ಬದ ಸಂಭ್ರಮ. ಫೆ.16ರಂದು ಬೆಳಗ್ಗಿನಿಂದಲೇ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಆರ್ಆರ್ ನಗರದಲ್ಲಿರುವ ದರ್ಶನ್ ಅವರ ನಿವಾಸಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.
ಎನ್‌ಪಿಆರ್ ಜಾರಿಗೆ ಸಿದ್ಧಗೊಂಡ ಮೊದಲ ರಾಜ್ಯ: ಶುರುವಾಗಲಿದೆಯಾ ವ್ಯಾಜ್ಯ?
ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯ ತ್ರಿಪುರಾ, ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜಾರಿಗೊಳಿಸಲು ಸಿದ್ದವಾಗಿದೆ. ಈಗಾಗಲೇ ಎನ್‌ಪಿಆರ್ ಜಾರಿಗೊಳಿಸಲು ಅಗತ್ಯವಾದ ದತ್ತಾಂಶ ಸಂಗ್ರಹಕ್ಕೆ ತ್ರಿಪುರಾ ಅಗತ್ಯ ಸಿದ್ದತೆ ನಡೆಸಿದೆ.
ಕಣ್ಣೀರಿಡುತ್ತಲೇ ಹುತಾತ್ಮಯೋಧ ಗುರುವಿನ ಸಮಾಧಿಗೆ ಪೂಜೆ ಮಾಡಿದ ಪತ್ನಿ
ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಸಿಆರ್‌ಪಿಎಫ್ ಯೋಧ ಎಚ್. ಗುರು ಅವರ ಪತ್ನಿ ಕಣ್ಣೀರಿಡುತ್ತಲೇ ಪತಿಯ ಸಮಾಧಿಗೆ ಮಂಡ್ಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಗುರು ಸಮಾಧಿಗೆ ಪತ್ನಿ ಕಲಾವತಿಯಿಂದ ಪೂಜೆ ನಡೆದಿದೆ.
ನಾಯಿ ಬಿಸ್ಕೆಟ್ ತಿನ್ನುತ್ತಾರಂತೆ ರಶ್ಮಿಕಾ; ಅಯ್ಯೋ.. ಏನಾಯ್ತು ಕ್ರಶ್‌ಗೆ..!?
ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿರೋ ನಟಿ. ಬಾಲಿವುಡ್ ಗೂ ಟಿಕೆಟ್ ಪಡೆದುಕೊಳ್ಳಬೇಕು ಅಂತ ಕಾತುರರಾಗಿರೋ ರಶ್ಮಿಕಾ ಬಗ್ಗೆ ಶಾಕಿಂಗ್ ನ್ಯೂಸ್ ವೊಂದನ್ನ ಇತ್ತೀಚಿಗಷ್ಟೇ ನಟ ನಿತಿನ್ ರಿವಿಲ್ ಮಾಡಿದ್ದಾರೆ.
ಗುಣಗಾನ ಮಾಡುತ್ತಲೇ ಬಹಿರಂಗ ವೇದಿಕೆಯಲ್ಲಿ ಸಿದ್ದುಗೆ ಟಾಂಗ್ ಕೊಟ್ಟ ಸೋಮಣ್ಣ...
ಬೆಂಗಳೂರಲ್ಲಿ ಆಯೋಜಿಸಿದ "ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನ" ನಡೆಯಿತು. ಈ ಸಭೆಯ ವೇದಿಕೆ ಮೇಲೆ ಸಿದ್ದರಾಮಯ್ಯನವರನ್ನ ಗುಣಗಾನ ಮಾಡುತ್ತಾ ವಿ ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.