ಬೆಂಗಳೂರು, (ಫೆ.16): ಸಿದ್ದರಾಮಯ್ಯನವರು ವೀರಶೈವ-ಲಿಂಗಾಯತ ಧರ್ಮವನ್ನು ಕೆಣಕಿದ ಕಾರಣದಿಂದಲೇ ಯಡಿಯೂರಪ್ಪನವರಿಗೆ ಅಧಿಕಾರ ಸಿಕ್ತು ಎಂದು ಸಚಿವ ವಿ. ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಲ್ಲಿ ಇಂದು (ಭಾನುವಾರ) ನಡೆದ "ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನ"ದಲ್ಲಿ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ಸಿದ್ದರಾಮಯ್ಯನವ ಕೊಡುಗೆ ರಾಜ್ಯದಲ್ಲಿ ಮಹತ್ವದ್ದು. ಅವರ ಮಾಡಿದ ಅಭಿವೃದ್ಧಿ ಪರ ಯೋಜನೆಗಳನ್ನ ಯಡಿಯೂರಪ್ಪ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಎಲ್ಲವನ್ನೂ ಮಾಡಿದ್ರು ಆದ್ರೆ ಸಮಾಜವನ್ನ ಸ್ವಲ್ಪ ಕೆಣಿಕಿದರು ಸಿದ್ದರಾಮಯ್ಯನವರ ಕಾಲೆಳೆದರು.

'ಲಿಂಗಾಯತ ಸ್ವತಂತ್ರ ಧರ್ಮ ಮಾಡುವಲ್ಲಿ BSYರನ್ನ ವೀರಶೈವ ಗುಂಪು ಕಟ್ಟಿ ಹಾಕಿದೆ'

ಈ ಹಿಂದೆ ಸಿದ್ದರಾಮಯ್ಯನವರ ಪ್ರತ್ಯೇಕ ಧರ್ಮದ ವಿಚಾರವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಶರಣ ಸಮ್ಮೇಳನದ ವೇದಿಕೆಯಲ್ಲಿ ಸೋಮಣ್ಣ ಚಾಟಿ ಬೀಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಮಾಡಲು ಮುಂದಾಗಿದ್ದರು. ಆದು ಭಾರೀ ಪರ-ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅದೇ ವಿಚಾರವನ್ನಿಟ್ಟುಕೊಂಡು ಸೋಮಣ್ಣ ಹೀಗೆ ಹೇಳಿದ್ದು. 

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ