ನವದೆಹಲಿ(ಫೆ.16): ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಪಥಗ್ರಹಣ ಸಮಾರಂಭದಲ್ಲಿ ದೆಹಲಿ ಲೆ.ಗವರ್ನರ್ ಅನಿಲ್ ಬೈಜಲ್ ಅವರು ಕೇಜ್ರಿವಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಅರವಿಂದ್ ಕ್ರೇಜಿವಾಲ್, ದೆಹಲಿ ಹಾಗೂ ದೆಹಲಿ ಜನತೆಯ ಶ್ರೆಯೋಭಿವೃದ್ಧಿಗಾಗಿ ದುಡಿಯುವುದಾಗಿ ಭರವಸೆ ನೀಡಿದರು.

3ನೇ ಬಾರಿ ಸಿಎಂ ಆಗಿ ಕೇಜ್ರಿ ಶಪಥ: ಚಾಲಕರು, ಯೋಧರು, ಪೌರಕಾರ್ಮಿಕರಿಗೆ ಆಹ್ವಾನ!

ಇನ್ನು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಇತರ ಆರು ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಮೂರನೇ ಬಾರಿಗೆ ಆಪ್ ದೆಹಲಿ ಗದ್ದುಗೆ ಏರಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಕೇಜ್ರಿವಾಲ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಇತರರು
ಮನೀಷ್ ಸಿಸೊಡಿಯಾ
ಸತ್ಯೇಂದ್ರ ಜೈನ್
ಗೋಪಾಲ್ ರೈ
ಕೈಲಾಶ್ ಗೆಹ್ಲೋಟ್
ಇಮ್ರಾನ್ ಹುಸೇನ್
ರಾಜೇಂದ್ರ ಗೌತಮ್

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ