ಮಂಡ್ಯ(ಫೆ.16): ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಸಿಆರ್‌ಪಿಎಫ್ ಯೋಧ ಎಚ್‌. ಗುರು ಅವರ ಪತ್ನಿ ಕಣ್ಣೀರಿಡುತ್ತಲೇ ಪತಿಯ ಸಮಾಧಿಗೆ ಮಂಡ್ಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಹುತಾತ್ಮ ಯೋಧ ಗುರು ವರ್ಷದ ಪುಣ್ಯಸ್ಮರಣೆಯಂದು ಮಂಡ್ಯದಲ್ಲಿ ಕಣ್ಣೀರಿಡುತ್ತಲೇ ಗಂಡನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಗುರು ಸಮಾಧಿಗೆ ಪತ್ನಿ ಕಲಾವತಿಯಿಂದ ಪೂಜೆ ನಡೆದಿದೆ.

ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ

ಗುರು ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಿದ್ದು, ಸಮಾಧಿ ಮುಂದೆ ಗುರು ಇಷ್ಟ ತಿಂಡಿಗಳನ್ನು ಇಟ್ಟಿದ್ದಾರೆ. ಚಾಕೊಲೇಟ್, ಐಸ್ ಕ್ರೀಂ, ಹಾಗೂ ಇತರ ತಿನಿಸು ಇಟ್ಟು ಪೂಜೆ ಸಲ್ಲಿಕೆಯಾಗಿದ್ದು, ನಿನ್ನ ಮದುವೆ ಆಗಿದ್ದಕ್ಕೆ ನೆಮ್ಮದಿ ಇಲ್ಲ, ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ನನ್ನ ಮಗಳ ನೆಮ್ಮದಿ ಕಿತ್ತುಕೊಂಡೆ ಎಂದ ಗುರು ಪತ್ನಿ ಕಲಾವತಿ ಪೂಜೆ ಮಾಡುತ್ತಾ ಕಣ್ಣೀರಿಟ್ಟಿದ್ದಾರೆ.

ಪ್ರೇಮಿಗಳ ದಿನದಂದೇ ಯುವಕನ ಮರ್ಮಾಂಗಕ್ಕೆ ಕತ್ತರಿ

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ