ಕೊರೋನಾತಂಕ ನಡುವೆ ಪಿಎಂ ಪ್ರಕೃತಿ ಪ್ರೇಮ, ಮೋದಿ ಮನೆಯಲ್ಲಿ ಮಯೂರ ನರ್ತನ!...

ಕೊರೋನಾತಂಕ ನಡುವೆ ಪಿಎಂ ಮೋದಿಯ ಅನೇಕ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಿಎಂ ಮೋದಿಯ ಪ್ರಕೃತಿ ಪ್ರೇಮ ಭಾರೀ ಸದ್ದು ಮಾಡಿದೆ. ಮೋದಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಖುದ್ದು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ನವಿಲಿನ ಸಮೀಪದಲ್ಲಿರುವುದನ್ನು ನೊಡಬಹುದಾಗಿದೆ.

ಮಾಡೋದೆಲ್ಲಾ ಕುತಂತ್ರ; ಭಾರತೀಯರ ಪುಣ್ಯಕ್ಷೇತ್ರದ ಬಳಿ ಚೀನಾ ಯುದ್ಧಕ್ಕೆ ತಯಾರಿ...

ಗಡಿಯಲ್ಲಿ ಭಾರತದ ವಿರುದ್ಧ ಜಿದ್ದು ಸಾಧಿಸುತ್ತಿರುವ ಚೀನಾ ಇದೀಗ ಭಾರತೀಯರ ಪುಣ್ಯ ಕ್ಷೇತ್ರವಾಗಿರುವ ಮಾನಸ ಸರೋವರದ ಬಳಿಯಲ್ಲಿ ಅತ್ಯಾಧುನಿಕ ಕ್ಷಿಪಣಿ ಉಡಾವಣಾ ನೆಲೆ ಸ್ಥಾಪಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.


ಕಾಂಗ್ರೆಸ್‌ನಲ್ಲಿ ಶುರುವಾಗುತ್ತಿದೆ ಬದಲಾವಣೆಯ ಪರ್ವ: 23 ಮಂದಿ ಹಿರಿಯ ನಾಯಕರಿಗೆ ಗೇಟ್ ಪಾಸ್?...

ಒಂದೇ ಬಾರಿಗೆ 23 ಮಂದಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ 23 ಮಂದಿ ಹಿರಿಯ ನಾಯಕರಿಗೆ ಪತ್ರ ಬರೆದಿದ್ದಾರೆ.

ವರ್ಷಾಂತ್ಯಕ್ಕೆ ಕೊರೋನಾಗೆ ಭಾರತದ ಲಸಿಕೆ: ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಆರೋಗ್ಯ ಸಚಿವ!...

 ಮಾರಕ ಕೊರೋನಾ ವೈರಸ್ ತೊಡೆದು ಹಾಕಲು ಭಾರತದ ಮೊದಲ ಲಸಿಕೆ ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿದೆ ಎಂದು  ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. 

ಕೋಮಾ ಸ್ಥಿತಿಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ!...

ಮೆದುಳಿನ ಶಸ್ತ್ರಚಿಕಿತ್ಸೆ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೀರ್ಘ ಕೋಮಾಗೆ ಜಾರಿದ್ದಾರೆಂದು ದೆಹಲಿಯ ಸೇನಾ ರೆಫೆರಲ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಹೃತಿಕ್, ಐಶ್ವರ್ಯಾ ಸೇರಿ ಸುಂದರ ಕಣ್ಣುಗಳುಳ್ಳ ಸೆಲೆಬ್ರಿಟಿಗಳಿವರು..!

ಮುಖದಲ್ಲಿ ಕಣ್ಣಿನ ಸೌಂದರ್ಯ ಮುಖ್ಯ. ಕಣ್ಣು ಮನಸಿನ ಮಾತಿಗೂ ಕನ್ನಡಿ. ಸುಂದರ ಕಣ್ಣುಗಳಿರುವ ಸೆಲೆಬ್ರಿಟಿಗಳಿವರು. ಇವರಂತೆಯೇ ಇವರ ಕಣ್ಣುಗಳೂ ಡಿಫರೆಂಟ್

ಹಾವೇರಿ: ಡಾ.ನಾಗೇಂದ್ರ ಸಾವಿನ ಬೆನ್ನಲ್ಲೇ ಮತ್ತೊಬ್ಬ ವೈದ್ಯ ಅತ್ಮಹತ್ಯೆಗೆ ಶರಣು...

ಮೈಸೂರು ಜಿಲ್ಲೆಯ ನಂಜನಗೂಡಿನ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಸುದ್ದಿ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹ ಘಟನೆ ನಡೆದಿದೆ. ಹೌದು, ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಸವೇಶ್ವರ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 

ಪೋರ್ನ್ ನಟಿ ಜೊತೆ ಟ್ರಂಪ್ ಸಂಬಂಧ: 33 ಲಕ್ಷ ಪಾವತಿಸಲು ಅಧ್ಯಕ್ಷನಿಗೆ ಕೋರ್ಟ್ ಆದೇಶ!

ಅಮೆರಿಕದಲ್ಲಿ ಒಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು, ಪೋರ್ನ್ ನಟಿಯೊಬ್ಬಳಿಗೆ 33 ಲಕ್ಷ ಪಾವತಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಅಮೆರಿಕದ ನ್ಯಾಯಾಲಯವೊಂದು ಇಂತಹುದ್ದೊಂದು ಆದೇಶ ನೀಡಿದೆ. ತನಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಬಂಧವಿತ್ತು ಎಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ.

ಬಜಾಜ್ ಪಲ್ಸಾರ್ ಬೈಕ್‌ಗೆ ಮಾರುತಿ 800 ಎಂಜಿನ್: ವಿನೂತ ಬೈಕ್ ಆವಿಷ್ಕರಿಸಿದ ಯುವಕ!...

ಮಾರುತಿ 800 ಕಾರಿನ ಎಂಜಿನ್, ರಾಯಲ್ ಎನ್‌ಫೀಲ್ಡ್ ಬೈಕ್‌ನ ಬಿಡಿ ಭಾಗ, ಟಾಟಾ ಏಸ್ ಕಾರಿನ ಕ ಬಿಡಿ ಭಾಗ, ಯಮಹಾ FZ ಬೈಕ್ ಬಿಡಿ ಭಾಗಳನ್ನು ಬಳಸಿಕೊಂಡು ವಿನೂತನ ಬೈಕ್ ನಿರ್ಮಾಣ ಮಾಡಲಾಗಿದೆ. ಇಬ್ಬರು ಯುವಕರ ಪ್ರಯತ್ನದಿಂದ ಹೊಸ ಬೈಕ್ ಎಲ್ಲರ ಗಮನಸಳೆಯುತ್ತಿದೆ. 

ಡಿಕೆ ಬ್ರದರ್ಸ್‌ಗೆ ತಿರುಗೇಟು ಕೊಟ್ಟ ಬಿವೈ ವಿಜಯೇಂದ್ರ..!...

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.