ಮೋದಿ ಮನೆಯಲ್ಲಿ ಮಯೂರ ನರ್ತನ| ತಮ್ಮ ಕೈಯ್ಯಾರೆ ನವಿಲುಗಳಿಗೆ ಕಾಳು ತಿನ್ನಿಸಿದ ಪ್ರಧಾನಿ| ಕೊರೋನಾತಂಕ ನಡುವೆ ಪಿಎಂ ಪ್ರಕೃತಿ ಪ್ರೇಮ, ವೈರಲ್ ಆಯ್ತು ವಿಡಿಯೋ

ನವದೆಹಲಿ(ಆ.23): ಕೊರೋನಾತಂಕ ನಡುವೆ ಪಿಎಂ ಮೋದಿಯ ಅನೇಕ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಿಎಂ ಮೋದಿಯ ಪ್ರಕೃತಿ ಪ್ರೇಮ ಭಾರೀ ಸದ್ದು ಮಾಡಿದೆ. ಮೋದಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಖುದ್ದು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ನವಿಲಿನ ಸಮೀಪದಲ್ಲಿರುವುದನ್ನು ನೊಡಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ವಿಡಿಯೋ ಶೇರ್ ಮಾಡಿಕೊಂಡಿರುವ ಪ್ರಧಾನಿ ಮೋದಿ ಒಂದು ಕವಿತೆಯನ್ನೂ ಬರೆದಿದ್ದು, ಇದರಲ್ಲಿ ನವಿಲಿನ ಸೌಂದರ್ಯವನ್ನು ವರ್ಣಿಸಿದ್ದಾರೆ.

View post on Instagram

ಇನ್ನು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಖುದ್ದು ಪಿಎಂ ಮೋದಿ ತಮ್ಮ ಕೈಯ್ಯಾರೆ ನವಿಲುಗಳಿಗೆ ಕಾಳುಗಳನ್ನು ತಿನ್ನಿಸುತ್ತಿರುವ ದೃಶ್ಯಗಳಿವೆ. ಇಷ್ಟೇ ಅಲ್ಲದೇ ಗಾರ್ಡನ್‌ನಲ್ಲಿ ನಡೆದಾಡುವಾಗಲೂ ನವಿಲು ಯಾವುದೇ ಭಯವಿಲ್ಲದೇ ಸ್ವಚ್ಛಂದವಾಗಿ ಗರಿಬಿಚ್ಚಿ ಕುಣಿಯುತ್ತಿರುವ ದೃಶ್ಯಗಳೂ ಇವೆ. ಪಿಎಂ ಮೋದಿಯ ಈ ವಿಡಿಯೋ ಎಲ್ಲರ ಮನ ಕದ್ದಿದೆ.