ಕರ್ನಾಟಕದ ಚಿಕ್ಕಬಳ್ಳಾಪುರದ ಯುವಕ ಪಡೆದಿದ್ದ ಯುಪಿಎಸ್‌ಸಿ ರ್‍ಯಾಂಕ್‌ ಅನ್ನು, ತನ್ನದೆಂದು ಸುಳ್ಳು ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದ ಬಿಹಾರದ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶೇಖ್‌ಪುರದ ನಿವಾಸಿ ರಂಜೀತ್‌ ಕುಮಾರ್‌ ಬಂಧಿತ.

ಪಟನಾ: ಕರ್ನಾಟಕದ ಚಿಕ್ಕಬಳ್ಳಾಪುರದ ಯುವಕ ಪಡೆದಿದ್ದ ಯುಪಿಎಸ್‌ಸಿ ರ್‍ಯಾಂಕ್‌ ಅನ್ನು, ತನ್ನದೆಂದು ಸುಳ್ಳು ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದ ಬಿಹಾರದ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೇಖ್‌ಪುರದ ನಿವಾಸಿ ರಂಜೀತ್‌ ಕುಮಾರ್‌ ಬಂಧಿತ.

ಮಾ.6ರಂದು 2025ನೇ ಸಾಲಿನ ಯುಸಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ 440ನೇ ರ್‍ಯಾಂಕ್‌ ಅನ್ನು ಚಿಕ್ಕಬಳ್ಳಾಪುರದ ರಂಜಿತ್‌ ಕುಮಾರ್‌ ಎಂಬುವವರು ಪಡೆದಿದ್ದರು. ಆದರೆ ಬಿಹಾರದ ರಂಜೀತ್‌ ತಾನೇ 440ನೇ ರ್‍ಯಾಂಕ್‌ ಪಡೆದಿದ್ದೇನೆ ಎಂದು ಊರವರನ್ನು ನಂಬಿಸಿದ್ದ.

ಶಾಸಕರು, ಸ್ಥಳೀಯ ಮುಖಂಡರು ಸನ್ಮಾನಿಸಿದ್ದರು

ಹೀಗಾಗಿ ಶಾಸಕರು, ಸ್ಥಳೀಯ ಮುಖಂಡರು ಹಾಗೂ ಪೊಲೀಸರು ಆತನನ್ನು ಸನ್ಮಾನಿಸಿದ್ದರು. ಆತ ಆಡಿದ ಸ್ಫೂರ್ತಿದಾಯಕ ಮಾತುಗಳ ವಿಡಿಯೋ ಕೂಡ ವೈರಲ್‌ ಆಗಿತ್ತು. ಇದೀಗ ಆತ ಹೇಳಿದ್ದು ಸುಳ್ಳು ಎಂಬ ವಿಷಯ ಬಹಿರಂಗವಾಗಿದೆ. ಹೀಗಾಗಿ ಸನ್ಮಾನ ಮಾಡಿದ್ದ ಪೊಲೀಸರೇ ಬಂಧಿಸಿದ್ದಾರೆ.