Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಶುರುವಾಗುತ್ತಿದೆ ಬದಲಾವಣೆಯ ಪರ್ವ: 23 ಮಂದಿ ಹಿರಿಯ ನಾಯಕರಿಗೆ ಗೇಟ್ ಪಾಸ್?

ಪಕ್ಷದ ಕೇಡರ್‌ಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು| ಪಕ್ಷದ ಟಾಪ್ ಟು ಬಾಟಂ ತನಕ ಬದಲಾವಣೆಯಾಗಬೇಕು| ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬೀಡುಬಿಟ್ಟಿರುವ ಐವರು ಮಾಜಿ ಮುಖ್ಯಮಂತ್ರಿಗಳು, ಹಾಲಿ, ಮಾಜಿ ಸಂಸದರು ಇವೆರಲ್ಲ ಬದಲಾವಣೆಯಾಗಬೇಕು| 

Congress Thinking to Pushback Senior Leaders
Author
Bengaluru, First Published Aug 23, 2020, 10:13 AM IST | Last Updated Aug 23, 2020, 10:13 AM IST

ನವದೆಹಲಿ(ಆ.23):  ಒಂದೇ ಬಾರಿಗೆ 23 ಮಂದಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ 23 ಮಂದಿ ಹಿರಿಯ ನಾಯಕರಿಗೆ ಪತ್ರ ಬರೆದಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸಂಬಂಧ ಚರ್ಚೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಕೇಡರ್‌ಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಪಕ್ಷದ ಟಾಪ್ ಟು ಬಾಟಂ ತನಕ ಬದಲಾವಣೆಯಾಗಬೇಕು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬೀಡುಬಿಟ್ಟಿರುವ ಐವರು ಮಾಜಿ ಮುಖ್ಯಮಂತ್ರಿಗಳು, ಹಾಲಿ, ಮಾಜಿ ಸಂಸದರು ಇವೆರಲ್ಲ ಬದಲಾವಣೆಯಾಗಬೇಕು ಎಂದು ಸೋನಿಯಾ ಗಾಂಧಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

'ಟುಕ್ಡೇ ಟುಕ್ಡೇ ಗ್ಯಾಂಗ್‌' ಅಧಿಕಾದಲ್ಲಿದೆ: ಬಿಜೆಪಿ ವಿರುದ್ಧ ತರೂರ್ ವಾಗ್ದಾಳಿ!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿ ರಾಜ್ ಚೌಹಾನ್, ಜಮ್ಮು ಕಾಶ್ಮೀರ ಮಾಜಿ ಸಿಎಂ ಗುಲಾಂನಬಿ ಅಜಾದ್, ಮನೀಶ್ ತಿವಾರಿ, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ರೇಣುಕಾ ಚೌದರಿ, ಹರಿಯಾಣ ಮಾಜಿ ಸಿಎಂ ಭೂಪೇಂದ್ರರ್ ಸಿಂಗ್ ಹೂಡ ಸೇರಿದಂತೆ  ಮುಂತಾದವರು ಈ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರೆಲ್ಲರನ್ನು ಕಾಂಗ್ರೆಸ್‌ನಲ್ಲಿ ಹಿರಿಯರು ಎಂದು ಗುರುತಿಸಿದ್ದು, ಇವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.  ಇದಕ್ಕೆಲ್ಲಾ ಸೋಮವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮ ರೂಪ ಸಿಗಲಿದೆ 
 

Latest Videos
Follow Us:
Download App:
  • android
  • ios