ವರ್ಷಾಂತ್ಯಕ್ಕೆ ಕೊರೋನಾಗೆ ಭಾರತದ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಕೇಂದ್ರ ಆರೋಗ್ಯ ಸಚಿವ!
ಮಾರಕ ಕೊರೋನಾ ವೈರಸ್ ತೊಡೆದು ಹಾಕಲು ಭಾರತದ ಮೊದಲ ಲಸಿಕೆ| ವರ್ಷದ ಒಳಗೆ ಬಿಡುಗಡೆಯಾಗಲಿದೆ ಕೊರೋನಾ ಲಸಿಕೆ| ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭರವಸೆ
ನವದೆಹಲಿ(ಆ.23): ಮಾರಕ ಕೊರೋನಾ ವೈರಸ್ ತೊಡೆದು ಹಾಕಲು ಭಾರತದ ಮೊದಲ ಲಸಿಕೆ ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
"
ಶನಿವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ NDRFನ 10 ಬೆಡ್‌ಗಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಮ್ಮ ಭರವಸೆ ಮೂಡಿಸಿದ ಕೋವಿಡ್ ಲಸಿಕೆಗಳಲ್ಲಿ ಒಂದು ಈಗಾಗಲೇ 3ನೇ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಇದು ಈ ವರ್ಷದ(2020) ರ ಅಂತ್ಯದೊಳಗೆ ಜನ ಸಾಮಾನ್ಯರ ಬಳಕೆಗೆ ಲಭ್ಯವಾಗುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ ಎಂದಿದ್ದಾರೆ.
ಭಾರತದ ಜೊತೆ ಸೇರಿ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸುಕ!
ಕೊರೋನಾ ಸಮರದ ಎಂಟನೇ ತಿಂಗಳಲ್ಲಿ ಭಾರತದಲ್ಲಿ ಶೇ. 75ರಷ್ಟು ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2.2 ಮಿಲಿಯನ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಏಳು ಲಕ್ಷ ಮಂದಿ ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದೂ ಹೇಳಿದ್ದಾರೆ.
ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸಾವು, ಸೋಂಕು ವರದಿ : ಗುರುವಾರದ ರಿಪೋರ್ಟ್ ಎಷ್ಟು..?
ಸದ್ಯ ಭಾರತದಲ್ಲಿ 1500 ಕೊರೊನಾ ಟೆಸ್ಟಿಂಗ್ ಲ್ಯಾಬ್ ಇದ್ದು, ಶುಕ್ರವಾರ 1 ಮಿಲಿಯನ್ ಟೆಸ್ಟಿಂಗ್ ನಡೆಸಿದ್ದೇವೆ. ಇನ್ನು ಶನಿವಾರ 63,631ಜನ ಗುಣಮುಖರಾಗಿದ್ದು, ಒಂದೇ ದಿನದಲ್ಲಿ ಅತೀ ಹೆಚ್ಚು ಜನ ಡಿಸ್ಚಾರ್ಜ್ ಆದ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.