ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!...

ದೇಶದ ಎಲ್ಲರಿಗೂ ಉಚಿತ ಲಸಿಕೆ ಹಾಗೂ 80 ಕೋಟಿ ಭಾರತೀಯರಿಗೆ ದೀವಾವಳಿ ವರೆಗೆ ಉಚಿತ ರೇಶನ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಈ ಪ್ರಮುಖ ಘೋಷಣೆಗಳನ್ನು ಮೋದಿ ಮಾಡಿದ್ದಾರೆ.

ಅಶೋಕ್ ಸಹ ಸಿಎಂ ರೇಸ್‌ನಲ್ಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಬಿಎಸ್‌ವೈ ಆಪ್ತ...

ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಟ್ಟು ಹೋಗುವೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಫೇಸ್‌ಬುಕ್, ಗೂಗಲ್ ಸೇರಿ MNCಗೆ ಮತ್ತೊಂದು ಬರೆ; ಶೇ.20ರಷ್ಟು ತೆರಿಗೆ ವಿಧಿಸಲು ಮುಂದಾದ ಕೇಂದ್ರ!...

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಹೊಸ ಐಟಿ ನಿಯಮ ಪಾಲಿಸಲು ಖಡಕ್ ವಾರ್ನಿಂಗ್ ನೀಡಿದೆ. ನಿಯಮ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಫೇಸ್‌ಬುಕ್, ಗೂಗಲ್, ಆ್ಯಪಲ್ ಸೇರಿದಂತೆ ಬಹುರಾಷ್ಟ್ರೀಯ ಟೆಕ್ ಕಂಪನಿಗಳಿಗೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲು ಭಾರತ ಮುಂದಾಗಿದೆ.

ತನ್ನ ಮದುವೆಗೆ ಕುಡಿದು ಬಂದವ ಡ್ಯಾನ್ಸ್ ಮಾಡು ಎಂದ.. ವಿವಾಹ ಕ್ಯಾನ್ಸಲ್!...

ನನಗೆ ಈ ಮದುವೆ ಬೇಡ ಎಂದು ವಧು ಮಂಟಪದಿಂದ ಹೊರಗೆ ನಡೆದಿದ್ದಾಳೆ. ಸ್ಟೋರಿ ಕೊಂಚ ವಿಚಿತ್ರವಾಗಿದೆ. ತನ್ನ ಮದುವೆಗೆ ಕುಡಿದು ಬಂದ ವರ ಅಶ್ಲೀಲವಾಗಿ ನೃತ್ಯ ಮಾಡಿದ್ದೂ ಅಲ್ಲದೆ ವಧುವಿಗೂ ನೃತ್ಯ ಮಾಡು ಎಂದು ಒತ್ತಾಯ ಮಾಡುತ್ತಿದ್ದ.

ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ...

 ಜೂನ್ 18ರಿಂದ ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡ ಭಾನುವಾರದಿಂದ ಅಭ್ಯಾಸ ಆರಂಭಿಸಿದೆ. 3 ದಿನಗಳ ಕಠಿಣ ಕ್ವಾರಂಟೈನ್‌ ಮುಕ್ತಾಯಗೊಳಿಸಿದ ಬಳಿಕ ಭಾನುವಾರ, ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು. 

ಚಾರ್ಲಿ ಜೊತೆ ಬಂದ ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್!...

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲಾಕ್‌ಡೌನ್‌ ಬರ್ತಡೇಯನ್ನು ಗ್ರ್ಯಾಂಡ್ ಮಾಡಿದ್ದು 777 ಚಾರ್ಲಿ ಚಿತ್ರತಂಡ. ಒಂದೇ ದಿನ 5 ಭಾಷೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಅಷ್ಟಲ್ಲದೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ತಂಡದಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಹೀಗ್ ಮಾಡಿದ್ರೆ ತೈಲ ಬೆಲೆ 3ರಿಂದ 4 ರು. ಅಗ್ಗವಾಗುತ್ತೆ : ಎಚ್‌ಡಿಕೆ...

ದಿನನಿತ್ಯ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಯಾವುದೇ ತೀರ್ಮಾನ ಕೈಗೊಂಡರೂ ಜನ ಒಪ್ಪುತ್ತಾರೆ ಎಂಬ ಉದ್ಧಟತನದಿಂದ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. 

15 ಕೆಜಿ ತೂಕದ ಸೈಕಲ್ ಒಯ್ಯಲು 7.5 ಟನ್ ಟ್ರಕ್ ಬಳಸಿ ಟ್ರೋಲ್ ಆದ ಪೊಲೀಸ್!...

ಮೆರಿಕಾ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಎಲೆಕ್ಟ್ರಿಕ್ ಸೈಕಲ್ ಸ್ಕೂಟರ್ ಸೀಝ್ ಮಾಡಿದ್ದಾರೆ. ಇದು ತಪ್ಪಲ್ಲ, ಸರ್ವೆ ಸಾಮಾನ್ಯ. ಆದರೆ ಬಳಿಕ ಪೊಲೀಸರು ತೆಗೆದುಕೊಂಡ ನಿರ್ಧಾರ ಇದೀಗ ನಗೆಪಾಟಲೀಗೀಡಾಗಿದೆ. 

ನೀತಾ ಅಂಬಾನಿಗೆ ಕೈಮುಗಿದ್ರಾ ಮೋದಿ, ನಕಲಿ ಫೋಟೋ ಶೇರ್ ಮಾಡಿದ ಜೋಹರ್!...

ಪ್ರಸಾರ ಭಾರತಿಯ ಮಾಜಿ ಸಿಇಒ ಜೋಹರ್ ಸಿರ್ಕಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನ ಮಮತ್ರಿ ನರೇಂದ್ರ ಮೋದಿಯ ನಕಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಾ ಅಂಬಾನಿ ಎದುರು ಕೈಮುಗಿದು ನಮಸ್ಕರಿಸುವ ದೃಶ್ಯವಿದೆ. ಅಲ್ಲದೇ ಈ ಫೋಟೋ ಶೇರ್ ಮಾಡಿಕೊಂಡಿರುವ ಜೋಹರ್, ಇತರ ಸಂಸದರಿಗೂ ಮೋದಿಯಂತಹ ಸೌಜನ್ಯವಿದ್ದರೆ ಚೆನ್ನಾಗಿತ್ತು ಎಂದು ಬರೆದಿದ್ದಾರೆ.