ಹೀಗ್ ಮಾಡಿದ್ರೆ ತೈಲ ಬೆಲೆ 3ರಿಂದ 4 ರು. ಅಗ್ಗವಾಗುತ್ತೆ : ಎಚ್‌ಡಿಕೆ
- ದಿನನಿತ್ಯ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ
- ಉದ್ಧಟತನದಿಂದ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪ
- ರೈತನಿಂದ ಗ್ರಾಹಕನವರೆಗೂ ಇದರ ಬಿಸಿ ತಟ್ಟಲಿದೆ ಎಂದ ಎಚ್‌ಡಿಕೆ
ಬೆಂಗಳೂರು (ಜೂ.07): ದಿನನಿತ್ಯ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಯಾವುದೇ ತೀರ್ಮಾನ ಕೈಗೊಂಡರೂ ಜನ ಒಪ್ಪುತ್ತಾರೆ ಎಂಬ ಉದ್ಧಟತನದಿಂದ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಾರು ಮಾಲೀಕರು ಹಾಗೂ ಲಾರಿ ಮಾಲೀಕರಲ್ಲದೆ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಅನ್ವಯ ಆಗಲಿದ್ದು, ರೈತನಿಂದ ಗ್ರಾಹಕನವರೆಗೂ ಇದರ ಬಿಸಿ ತಟ್ಟಲಿದೆ ಎಂದು ಹರಿಹಾಯ್ದಿದ್ದಾರೆ.
"
ಬಿಎಸ್‌ವೈ ರಾಜೀನಾಮೆ ಮಾತು: ಹೀಗೆ ಹೇಳಿದ್ದೇ ತಪ್ಪು ಎಂದ ಮಾಜಿ ಸಿಎಂ ..
ಕೊರೋನಾ ಅನಾಹುತಗಳ ನಡುವೆ ಗ್ರಾಮೀಣ ಭಾಗದ ರೈತರಿಗೆ ದೊಡ್ಡ ಮಟ್ಟದ ಹೊರೆ ಆಗಲಿದೆ. ಸಬೂಬು ಹೇಳಿ ಬೆಲೆ ಏರಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬೀಜ ಹಾಗೂ ಗೊಬ್ಬರ ತರುವುದಕ್ಕೆ ಜನರು ಹೋಗಬೇಕಾಗುತ್ತದೆ. ರೈತರಿಗೆ ತೊಂದರೆಯಾಗುತ್ತಿರುವುದರಿಂದ ಸೆಸ್ ಕಡಿತ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಇದರಿಂದ ಮೂರರಿಂದ ನಾಲ್ಕು ರು. ಕಡಿಮೆ ಮಾಡಬಹುದಾಗಿದೆ. ಬೆಲೆ ಏರಿಕೆ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರಗಳು ಜನರನ್ನು ಅತ್ಯಂತ ಹಗುರವಾಗಿ ನೋಡಲಿವೆ ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.